ವಿಕ ಸುದ್ದಿಲೋಕ ಬಂಟ್ವಾಳ
ಇಲ್ಲಿನ ತಾಲೂಕು ಕಾನೂನು ಸೇವೆಗಳ ಸಮಿತಿ ಆಶ್ರಯದಲ್ಲಿಬಂಟ್ವಾಳ ನ್ಯಾಯಾಲಯದಲ್ಲಿಶನಿವಾರ ನಡೆದ ಲೋಕ ಅದಾಲತ್ ನಲ್ಲಿ7063 ಪ್ರಕರಣಗಳು ಇತ್ಯರ್ಥಗೊಂಡಿವೆ. ನಾನಾ ಪ್ರಕರಣಗಳಲ್ಲಿಒಟ್ಟು 1,90,89,540 ರೂ. ನಗದು ವಸೂಲಾಗಿದೆ ಎಂದು ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ ತಿಳಿಸಿದೆ.
24 ಸಿವಿಲ್ ಪ್ರಕರಣಗಳು ಇತ್ಯರ್ಥವಾಗಿದ್ದು, 39,44,445 ರೂ. ವಸೂಲಾಗಿದೆ. 664 ಕ್ರಿಮಿನಲ್ ಪ್ರಕರಣ ಇತ್ಯರ್ಥವಾಗಿದ್ದು, 50,96,095 ರೂ. ವಸೂಲಾಗಿದೆ. 6375 ಪಿಎಲ್ ಸಿ ಪ್ರಕರಣಗಳು ಇತ್ಯರ್ಥಗೊಂಡಿದ್ದು, 1,90,48,000 ರೂ. ಮೊತ್ತ ವಸೂಲಾಗಿದೆ. ನಾನಾ ಶುಲ್ಕ ಪ್ರಕರಣಗಳು, ಎಂಎಂಆರ್ ಡಿ, ಚೆಕ್ ಬೌನ್ಸ್ , ಮೋಟಾರು ವಾಹನ ಪ್ರಕರಣಗಳು ಇತ್ಯರ್ಥಗೊಂಡವು.
ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಬಂಟ್ವಾಳ ಹಿರಿಯ ಸಿವಿಲ್ ಮತ್ತು ಜೆಎಂಎಸ್ ಸಿ ಅನಿಲ್ ಪ್ರಕಾಶ್ ಎಂ.ಪಿ., ಸದಸ್ಯ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಸಿವಿಲ್ ಜೆಎಂಎಫ್ ಸಿ ನ್ಯಾಯಾಧೀಶ ರಾಜೇಂದ್ರ ಪ್ರಸಾದ್ ಸಮಕ್ಷಮ ಪ್ರಕರಣಗಳು ಇತ್ಯರ್ಥಗೊಂಡಿವೆ.
ಎಪಿಪಿಗಳಾದ ಸರಸ್ವತಿ, ಹರಿಣಿ ಕುಮಾರ್ ಡಿ., ಎಜಿಪಿ ಬಿ.ವೆಂಕಟರಮಣ ಶೆಣೈ, ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೋಸ್ತ ಎಂ. ಮತ್ತು ಪದಾಧಿಕಾರಿಗಳು ಇದ್ದರು.
ಚಿತ್ರ: 16ಬಿಎಚ್ ಕೋರ್ಟ್
ಬಂಟ್ವಾಳ ನ್ಯಾಯಾಲಯದಲ್ಲಿಲೋಕ್ ಅದಾಲತ್ ನಡೆಯಿತು.

