ಮೇಲ್ಸೇತುವೆಯ ಕಂಬ ದುರ್ಬಲ: ಹಾನಿ ತಡೆಗೆ ಕಾಂಕ್ರಿಟಿಂಗ್

Contributed bycrastalp19@gmail.com|Vijaya Karnataka

ಚೆರ್ಕಳದಲ್ಲಿ ನಿರ್ಮಾಣ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯ ಕಾಂಕ್ರೀಟ್‌ ಕಂಬ ದುರ್ಬಲವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಡೆಸಿದ ತಪಾಸಣೆಯಲ್ಲಿ ಕುಂಡಡ್ಕದಲ್ಲಿ ನಿರ್ಮಿಸಿದ 19ನೇ ಕಂಬದಲ್ಲಿ ಈ ಸಮಸ್ಯೆ ಪತ್ತೆಯಾಗಿದೆ. ಸುರಕ್ಷಾ ಮುನ್ನೆಚ್ಚರಿಕೆ ಕ್ರಮವಾಗಿ ಕಂಬವನ್ನು ಬಲಪಡಿಸುವ ಕಾಮಗಾರಿ ಆರಂಭಿಸಲಾಗಿದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕವಷ್ಟೇ ಉಳಿದ ಭಾಗವನ್ನು ಸಂಚಾರಕ್ಕೆ ತೆರೆಯಲಾಗುತ್ತದೆ.

weakness of national highway bridge column concrete strengthening work initiated

ವಿಕ ಸುಧಿದ್ದಿಧಿಲೋಕ ಕಾಸರಗೋಡು

ಚೆರ್ಕಳದಲ್ಲಿ ನಿರ್ಮಾಣ ಪ್ರಗತಿ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯ ಕಾಂಕ್ರೀಟ್ ಕಂಬ ದುರ್ಬಲವಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿಅದನ್ನು ಬಲಪಡಿಸಲು ಕಾಮಗಾರಿ ಆರಂಭಗೊಂಡಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಡೆಸಿದ ತಪಾಸಣೆಯಲ್ಲಿಕುಂಡಡ್ಕದಲ್ಲಿನಿರ್ಮಿಸಿದ ಕಂಬದ ಎರಡನೇ ಪದರದಲ್ಲಿ ದುರ್ಬಲವಾಗಿರುವುದು ಕಂಡು ಬಂದಿದೆ. ಚೆಂಗಳ ಪಂಚಾಯಿತಿ ಕಚೇರಿ ಮುಂಭಾಗದಿಂದ ಆರಂಭಗೊಳ್ಳುವ ಮೇಲ್ಸೇತುವೆಯು 21 ಕಂಬಗಳ ಮೂಲಕ ಹಾದು ಹೋಗಿ ವಿ.ಕೆ. ಪಾರೆ ಸಮೀಪದಲ್ಲಿಕೊನೆಗೊಳ್ಳುತ್ತದೆ. ಇದರಲ್ಲಿಕುಂಡಡ್ಕದಲ್ಲಿನಿರ್ಮಿಸಿದ 19ನೇ ಕಂಬದಲ್ಲಿಬಲಹೀನತೆ ಕಂಡು ಬಂದಿದೆ.

ಐದು ಮೀಟರ್ ಸುತ್ತಳತೆಯಲ್ಲಿರುವ ಕಾಂಕ್ರೀಟ್ ಕಂಬಕ್ಕೆ 15 ಮೀಟರ್ ನಷ್ಟು ಎತ್ತರವಿದೆ. ಸುರಕ್ಷಾ ಮುನ್ನೆಚ್ಚರಿಕೆಯ ಭಾಗವಾಗಿ ಕಂಬದ ನಾಲ್ಕು ಭಾಗದಲ್ಲಿಮಣ್ಣು ತೆಗೆದು ಅರ್ಧ ಮೀಟರ್ ಅಗಲದಲ್ಲಿ25 ಎಂಎಂ ಸರಳಿನಲ್ಲಿಒಂಬತ್ತು ಮೀಟರ್ ನಷ್ಟು ಎತ್ತರದಲ್ಲಿಕಾಂಕ್ರೀಟು ನಡೆಸಿ ಹೆಚ್ಚು ಗಟ್ಟಿಗೊಳಿಸುವ ಕಾಮಗಾರಿ ನಡೆಯುತ್ತಿದೆ. ಪ್ಲಾಟ್ ಫಾಮ್ ರ್ ನಲ್ಲಿಅರ್ಧ ಮೀಟರ್ ನಷ್ಟು ಆಳದಲ್ಲಿ ತೆಗೆದ ಹೊಂಡಗಳಲ್ಲಿ ಸರಳುಗಳನ್ನು ಅಳವಡಿಸಿ ಎತ್ತರಕ್ಕೆ ಏರಿಸಲಾಗಿದೆ. ಇದರ ಸುತ್ತ ಹಲವಾರು ಕಬ್ಬಿಣದ ಸರಳುಗಳನ್ನು ಅಳವಡಿಸಿ ಕಾಂಕ್ರೀಟ್ ನಡೆಸಲಾಗುವುದು.

ಚೆರ್ಕಳದಿಂದ ನೀಲೇಶ್ವರವರೆಗಿನ ಭಾಗದಲ್ಲಿಮೇಘ ಕಂಪನಿಯು ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸುತ್ತಿದೆ. ಪೆರಿಯ, ಪುಲ್ಲೂರಿನಲ್ಲಿಅಂಡರ್ ಪ್ಯಾಸೇಜ್ ನಿರ್ಮಾಣದ ಮಧ್ಯೆ ಕುಸಿದು ಬಿದ್ದಿತ್ತು. ನಿರ್ಮಾಣದ ಲೋಪವು ಕುಸಿತಕ್ಕೆ ಕಾರಣವಾಗಿದೆ. ಚೆರ್ಕಳ ಪೇಟೇಯ ಮೂಲಕ 546 ಮೀಟರ್ ನಲ್ಲಿ ಹಾದುಹೋಗುವ ಮೇಲ್ಸೇತುವೆಯಲ್ಲಿಕಾಸರಗೋಡಿನಿಂದ ಕಣ್ಣೂರಿಗೆ ಹೋಗುವ ಭಾಗ ನಾಲ್ಕು ತಿಂಗಳ ಹಿಂದೆ ತೆರೆದು ನೀಡಲಾಗಿತ್ತು. ಈ ದಾರಿಯಾಗಿ ಇಕ್ಕೆಲಗಳಿಗಿರುವ ವಾಹನಗಳು ಈಗ ಹಾದುಹೋಗುತ್ತವೆ. ಎರಡನೇ ಭಾಗದ ಕಾಮಗಾರಿಯು ಅಂತಿಮ ಹಂತದಲ್ಲಿದೆ. ಇದರ ಮಧ್ಯೆ ಕಂಬದಲ್ಲಿಬಲಹೀನತೆಯು ಕಂಡುಬಂದಿದೆ.

ಕುಂಡಡ್ಕದ ದುರ್ಬಲತೆ ಪತ್ತೆಯಾದ ಕಂಬ ಹೊರತುಪಡಿಸಿ ಇತರ ಎಲ್ಲಕಂಬಗಳನ್ನು ಪಯಲಿಂಗ್ ನಡೆಸಿ ನಿರ್ಮಿಸಲಾಗಿದೆ. ಇಕ್ಕೆಲಗಳಲ್ಲಿಗುಡ್ಡಗಳು, ರಸ್ತೆಯ ಇನ್ನೊಂದು ಭಾಗದಲ್ಲಿಹಲವಾರು ಮನೆಗಳಿರುವ ಕುಂಡಡ್ಕದಲ್ಲಿಮಳೆಗಾಲದಲ್ಲಿಭೂಮಿಯ ಅಡಿಯಿಂದ ನೀರಿನ ಹರಿಯುವಿಕೆಯು ತೀವ್ರಗೊಳ್ಳುತ್ತದೆ. ಕಂಬವನ್ನು ಬಲಪಡಿಸುವ ಕಾಮಗಾರಿಯು ಪೂರ್ತಿಯಾದ ಬಳಿಕವಷ್ಟೇ ಉಳಿದ ಭಾಗವನ್ನು ಸಂಚಾರಕ್ಕೆ ತೆರೆಯಲಾಗುತ್ತದೆ. ಚೆರ್ಕಳ ಪೇಟೆಯಲ್ಲಿಮಂದಗತಿಯಲ್ಲಿದ್ದ ಚರಂಡಿಗಳ ಹಾಗೂ ಸರ್ವಿಸ್ ರಸ್ತೆಗಳ ನಿರ್ಮಾಣ ಕ್ರಿಯಾ ಸಮಿತಿಯ ಪ್ರತ್ಯಕ್ಷ ಹೋರಾಟ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಶೀಘ್ರಗತಿಯಲ್ಲಿನಡೆಯುತ್ತಿದೆ. ಸೇತುವೆಯ ಸುರಕ್ಷೆಯನ್ನು ಸಂಪೂರ್ಣವಾಗಿ ಖಾತರಿ ಪಡಿಸದೆ ನಿರ್ಮಾಣ ಮುಂದುವರಿಸುವುದರ ಬಗ್ಗೆ ನಾಗರಿಕರಲ್ಲಿಆತಂಕವಿತ್ತು.

....

ಭವಿಷ್ಯದ ಬಹುದೊಡ್ಡ ದುರಂತಗಳನ್ನು ತಡೆಗಟ್ಟಲು ನಿರ್ಮಾಣ ಕಂಪನಿಯು ಚೆರ್ಕಳದಲ್ಲಿ ನಿರ್ಮಿಸುವ ಮೇಲ್ಸೇತುವೆಯ ಸುರಕ್ಷೆಯನ್ನು ಖಾತರಿಪಡಿಸಿ ಅಧಿಕಾರಿಗಳು ಜನರ ಆತಂಕ ದೂರಮಾಡಬೇಕು. ಪೈಲಿಂಗ್ ನಡೆಸದ ಬೃಹತ್ ಕಾಂಕ್ರೀಟ್ ಕಂಬದ ನಿರ್ಮಾಣವು ಜನರಲ್ಲಿಆತಂಕ ಸೃಷ್ಟಿಸಿದೆ.

-ಪಿ. ಚಂದುಕುಟ್ಟಿ ಕುಂಡಡ್ಕ, ಚೆಂಗಳ ಪಂಚಾಯಿತಿ ಮಾಜಿ ಸದಸ್ಯ.

....

ಚಿತ್ರ: 16ಕೆಎಸ್ ಎಲ್ ಕಂಬ -ಚೆರ್ಕಳದಲ್ಲಿಕಂಬ ಬಲಪಡಿಸಲು ನಡೆಸುತ್ತಿರುವ ಕಾಂಕ್ರಿಟ್ ಕಾಮಗಾರಿ.