ಪುನೀತ ರಾಜಕುಮಾರ ಜನ್ಮದಿನ ಆಚರಣೆ

Contributed bynmanjaguni@gmail.com|Vijaya Karnataka

ಅಂಕೋಲಾ ತಾಲೂಕಿನ ಮಂಜಗುಣಿಯಲ್ಲಿ ಪುನೀತ ರಾಜಕುಮಾರ ಅವರ 51ನೇ ಜನ್ಮದಿನವನ್ನು ಅಭಿಮಾನಿಗಳು ಆಚರಿಸಿದರು. ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಪುನೀತ ರಾಜಕುಮಾರ ಅವರ ಕೊಡುಗೆ ಶಾಶ್ವತ ಎಂದು ನಿವೃತ್ತ ಸಂಚಾರಿ ನಿಯಂತ್ರಕ ಅಶೋಕ ವಿ. ನಾಯ್ಕ ಹೇಳಿದರು. ಎಲ್ಲರೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.

puneet rajkumars 51st birthday celebration

ವಿಕ ಸುದ್ದಿಲೋಕ ಅಂಕೋಲಾ

ತಾಲೂಕಿನ ಮಂಜಗುಣಿಯ ಪುನೀತರಾಜಕುಮಾರ ಅಭಿಮಾನಿ ಸಂಘದ ವತಿಯಿಂದ ಮಂಗಳವಾರ ಪುನೀತ ರಾಜಕುಮಾರ ಅವರ 51ನೇ ಜನ್ಮದಿನವನ್ನು ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಆಚರಿಸಲಾಯಿತು. ನಿವೃತ್ತ ಸಂಚಾರಿ ನಿಯಂತ್ರಕ ಅಶೋಕ ವಿ. ನಾಯ್ಕ ಮಾತನಾಡಿ, ‘‘ಪುನೀತ ರಾಜಕುಮಾರ ನೀಡಿದ ಕೊಡುಗೆ ಶಾಶ್ವತವಾಗಿ ಉಳಿಯಲಿದೆ. ಈ ನಿಟ್ಟಿನಲ್ಲಿಪ್ರತಿಯೊಬ್ಬರು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು’’ ಎಂದರು.

ಈ ಸಂದರ್ಭದಲ್ಲಿಹೊನ್ನೆಬೈಲ್ ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟ್ರಮಣ ಕೆ. ನಾಯ್ಕ, ಪುನೀತ ರಾಜಕುಮಾರ ಅಭಿಮಾನಿ ಬಳಗದ ಗೌರವಾಧ್ಯಕ್ಷ ಶ್ರೀಪಾದ ಟಿ. ನಾಯ್ಕ, ಅಧ್ಯಕ್ಷ ನಾಗರಾಜ ಮಂಜಗುಣಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ ವಿ. ನಾಯ್ಕ, ಪದಾಧಿಕಾರಿಗಳಾದ ರವಿ ಎನ್ . ನಾಯ್ಕ, ಅನಿಲ ಜೆ.ನಾಯ್ಕ, ಅನಿಲ ಎಂ. ನಾಯ್ಕ, ಜಗದೀಶ ಎಸ್ . ನಾಯ್ಕ, ಅಂಗನವಾಡಿ ಶಿಕ್ಷಕಿ ಮಂಜುಳಾ ನಾಯ್ಕ ಇತರರು ಇದ್ದರು.