ಏ.5ರಿಂದ ಉಚಿತ ಬೇಸಿಗೆ ಶಿಬಿರ
ವಿಕ ಸುಧಿದ್ದಿಧಿಲೋಧಿಕ ಮಾನ್ವಿ
‘‘10ನೇ ತರಗತಿ ವಿದ್ಯಾರ್ಥಿಗಳಿಗೆ ಏ.5ರಿಂದ ಹಮ್ಮಿಕೊಂಡಿರುವ ಉಚಿತ ಬೇಸಿಗೆ ತರಬೇತಿ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಬೇಕು,’’ ಎಂದು ಸಣ್ಣ ನೀರಾವರಿ ಸಚಿವ ಎನ್ .ಎಸ್ .ಬೋಸರಾಜು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಹಾಗೂ ತಾಲೂಕು ವೀರಶೈವ ಲಿಂಗಾಯತ ಸಮಾಜದಿಂದ ಬೇಸಿಗೆ ತರಬೇತಿ ಶಿಬಿರದ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಈ ಭಾಗದ ವಿದ್ಯಾರ್ಥಿಗಳಿಗೆ ಉಚಿತ ಶಿಬಿರದ ಮೂಲಕ ತರಬೇತಿ ನೀಡುತ್ತಿರುವುದು ಶ್ಲಾಘನೀಯ,’’ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಅರುಣಕುಮಾರ ಚಂದಾ ಮಾತನಾಡಿ, ‘‘ಏ.5ರಿಂದ ಸಿದ್ಧಾರ್ಥ ಪದವಿ ಪೂರ್ವ ಕಾಲೇಜ್ ಹಾಗೂ ಪದವಿ ಮಹಾವಿದ್ಯಾಲಯದಲ್ಲಿಉಚಿತ ಶಿಬಿರಹಮ್ಮಿಕೊಳ್ಳಲಾಗಿದೆ. 9ನೇ ತರಗತಿ ಉತ್ತೀರ್ಣರಾದ ಎಲ್ಲಸಮಾಜದ 200 ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. ಆಸಕ್ತರು ಮೊ.8197704409, ಮೊ.8660450164 ಹೆಸರು ನೋಂದಾಯಿಸಿಕೊಳ್ಳಬೇಕು,’’ ಎಂದು ತಿಳಿಸಿದರು.
ಶಾಸಕ ಹಂಪಯ್ಯ ನಾಯಕ, ತಾಲೂಕು ವೀರಶೈವ ಲಿಂಗಾಯ ಸಮಿತಿ ಗೌರವಾಧ್ಯಕ್ಷ ಶ್ರೀಧರ ಸ್ವಾಮಿ, ತಾಲೂಕು ಅಧ್ಯಕ್ಷ ಹರಿಹರ ಪಾಟೀಲ್ , ಕಾರ್ಯದರ್ಶಿ ಜಗದೀಶ ಹೊತ್ತೂರು ಇತರರಿದ್ದರು.
---
16ಮಾನ್ವಿ1:
ಮಾನ್ವಿಯ ಪ್ರವಾಸಿ ಮಂದಿರದಲ್ಲಿಉಚಿತ ಬೇಸಿಗೆ ತರಬೇತಿ ಶಿಬಿರದ ಭಿತ್ತಿ ಪತ್ರಗಳನ್ನು ಸಚಿವ ಎನ್ .ಎಸ್ .ಬೋಸರಾಜು ಬಿಡುಗಡೆಗೊಳಿಸಿದರು.

