ದೇಶಕ್ಕೆ ನಿಸ್ವಾರ್ಥ ಸೇವೆ ನೀಡಿದಾಗ ಜೀವನ ಸಾರ್ಥಕ

Contributed bybkyashas2010@gmail.com|Vijaya Karnataka

ಕಡಬದ ಸರಸ್ವತೀ ವಿದ್ಯಾಲಯದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳ ದೀಪ ಪ್ರದಾನ ಕಾರ್ಯಕ್ರಮ ನಡೆಯಿತು. ಉದ್ಯಮಿ ನಂದನ್‌ ಮಲ್ಯ ಅವರು ದೇಶಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದಾಗ ಜೀವನ ಸಾರ್ಥಕವಾಗುತ್ತದೆ ಎಂದರು. ಹಿರಿಯ ವಿದ್ಯಾರ್ಥಿನಿ ರಶ್ಮಿ ಜಿ. ಎಸ್‌. ದೇಶಭಕ್ತಿಯ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ತಿಳಿಸಿದರು. ಹಿರಿಯರು ವಿದ್ಯಾರ್ಥಿಗಳಿಗೆ ಆಶೀರ್ವಾದ ಮಾಡಿದರು. ಹಿರಿಯ ವಿದ್ಯಾರ್ಥಿಗಳು ಜವಾಬ್ದಾರಿ ಹಸ್ತಾಂತರಿಸಿದರು.

selfless service to the nation the key to a meaningful life

ಸರಸ್ವತೀ ವಿದ್ಯಾಲಯದಲ್ಲಿದೀಪಪ್ರದಾನ ಕಾರ್ಯಕ್ರಮದಲ್ಲಿ ನಂದನ್ ಮಲ್ಯ

ವಿಕ ಸುದ್ದಿಲೋಕ ಕಡಬ

ಕಡಬ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಪ್ರಸಕ್ತ ಶೈಕ್ಷಣಿಕ ವರ್ಷದ ಹತ್ತನೇ ತರಗತಿ ವಿದ್ಯಾರ್ಥಿಗಳ ದೀಪ ಪ್ರದಾನ ಕಾರ್ಯಕ್ರಮವು ಹನುಮಾನ್ ನಗರದ ಯಾದವಶ್ರೀ ಸಭಾಂಗಣದಲ್ಲಿನಡೆಯಿತು.

ಮಂಗಳೂರಿನ ಉದ್ಯಮಿ ನಂದನ್ ಮಲ್ಯ ಮಾತನಾಡಿ ಸಣ್ಣ ವಯಸ್ಸಿನಲ್ಲಿದೊಡ್ಡ ಕನಸು ಕಾಣಬೇಕು, ನಮ್ಮ ಜೀವನದ ಸಾಮರ್ಥ್ಯ ಅರಿತು ಜೀವಿಸಬೇಕು. ನಾವು ಯಾವಾಗ ಸಮಾಜಕ್ಕೆ, ದೇಶಕ್ಕೆ ನಿಸ್ವಾರ್ಥ ಸೇವೆ ನೀಡುತ್ತೇವೆಯೋ ಆಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.

ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಕೆನರಾ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕಿ ರಶ್ಮಿ ಜಿ. ಎಸ್ . ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರಸ್ವತೀ ವಿದ್ಯಾಲಯದಲ್ಲಿಸಂಸ್ಕಾರವನ್ನು ಕಲಿಸುವುದರೊಂದಿಗೆ ದೇಶಭಕ್ತಿಯ ಪಾಠ ನೀಡಲಾಗುತ್ತದೆ. ಇದನ್ನು ವಿದ್ಯಾರ್ಥಿಗಳು ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹ ಕಾರ್ಯನಿರ್ವಹಣಾಧಿಕಾರಿ ವೆಂಕಟರಮಣ ರಾವ್ ಮಂಕುಡೆ ಶುಭ ಹಾರೈಸಿದರು. ಸಂಸ್ಥೆಯ ಸಂಚಾಲಕಿ ಸವಿತಾ ಶಿವಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಶಿಕ್ಷಕಿ ಶೈಲಶ್ರೀ ರೈ ಎಸ್ ., ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಮಾಧವ ಕೋಲ್ಪೆ, ಸರಸ್ವತೀ ಆಂಗ್ಲಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ವಸಂತ ಕೆ. ಉಪಸ್ಥಿತರಿದ್ದರು.

ಹತ್ತನೇ ತರಗತಿ ವಿದ್ಯಾರ್ಥಿಗಳು ಹಣತೆ ಉರಿಸಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಹಿರಿಯರ ಆಶೀರ್ವಾದ ಪಡೆದುಕೊಂಡರು. ಹಿರಿಯ ವಿದ್ಯಾರ್ಥಿಗಳು ದೀಪ ಪ್ರದಾನ ಮಾಡುವ ಮೂಲಕ ತಮ್ಮ ಜವಾಬ್ದಾರಿ ಹಸ್ತಾಂತರಿಸಿದರು. ಶಿಕ್ಷಕಿ ಸೌಮ್ಯ ಕೆ. ಎ. ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಸಾನ್ವಿ ಎಚ್ . ಸ್ವಾಗತಿಸಿದರು. ದಿಗಂತ್ ವಂದಿಸಿದರು. ಪಿ.ಆರ್ . ಚೇತನ್ ಗೌಡ ನಿರೂಪಿಸಿದರು.

(ನಂದನ್ ಮಲ್ಯ ಮಾತನಾಡಿದರು: ಫೊಟೋ ಫೈಲ್ ನೇಮ್ 8ಕೆಡಿಬಿ ಡಿಪಿ)