ವಿಕ ಸುದ್ದಿಲೋಕ ಮುಳ್ಳಿಕಟ್ಟೆ
ಹಿಂದೂ ಕಮಿಟಿ ಹೆಜ್ರ್ಲಿಯಾ (ಇಸ್ರೇಲ್ ) ವತಿಯಿಂದ ಕಿಡ್ನಿ ಮತ್ತು ಕ್ಯಾನ್ಸರ್ ಸೇರಿದಂತೆ ಗಂಭೀರ ಸ್ವರೂಪದ ಕಾಯಿಲೆಗಳಿಗೆ ತುತ್ತಾಗಿರುವ ಉಡುಪಿ ಮತ್ತು ದ.ಕ. ಜಿಲ್ಲೆಯ ಸುಮಾರು ಹದಿನೈದು ಅಶಕ್ತ ಕುಟುಂಬಗಳಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ತಲಾ ಇಪ್ಪತ್ತು ಸಾವಿರ ರೂಪಾಯಿ ಅಂತೆ ಮೂರು ಲಕ್ಷ ರೂ. ಹಣವನ್ನು ವಿತರಿಸಲಾಯಿತು.
ದ.ಕ. ಮತ್ತು ಉಡುಪಿ ಜಿಲ್ಲೆಯಿಂದ ಉದ್ಯೋಗಕ್ಕಾಗಿ ಇಸ್ರೇಲ್ ಗೆ ತೆರಳಿರುವ ಕನ್ನಡಿಗರು, ಇಸ್ರೇಲ್ ನಲ್ಲಿಹಿಂದೂ ಕಮಿಟಿ ಹೆಜ್ರ್ಲಿಯಾ ಎನ್ನುವ ಕಮಿಟಿಯನ್ನು ರಚಿಸಿಕೊಂಡು ತಮ್ಮ ದುಡಿಮೆಯ ಒಂದು ಭಾಗವನ್ನು ಹಿಂದೂ ಕಮಿಟಿಗೆ ನೀಡುತ್ತಿದ್ದು, ಕಮಿಟಿಯಲ್ಲಿಸಂಗ್ರಹವಾದ ಹಣದಲ್ಲಿಗಣೇಶ ಚೌತಿ, ನವರಾತ್ರಿ ಉತ್ಸವ, ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸುವುದರ ಜತೆಗೆ ಕಮಿಟಿಯ ಉಳಿತಾಯದ ಹಣವನ್ನು ತಮ್ಮ ಹೂಟ್ಟೂರಿನಲ್ಲಿಸಂಕಷ್ಟಕ್ಕೆ ಸಿಲುಕುವ ಅಶಕ್ತ ಕುಟುಂಬಗಳಿಗೆ ವೈದ್ಯಕೀಯ ನೆರವನ್ನು ಕಳೆದ ಏಳು ವರ್ಷಗಳಿಂದ ಸುಮಾರು ಹದಿನೈದು ಲಕ್ಷಕ್ಕೂ ಹೆಚ್ಚಿನ ಹಣವನ್ನು ವಿತರಿಸಿದೆ.
ಚಿತ್ರ 1-ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಆಲೂರು ಗ್ರಾಮದ ನಾಗಪ್ಪ ಕುಲಾಲ್ ಅವರಿಗೆ ಇಪ್ಪತ್ತು ಸಾವಿರ ರೂಪಾಯಿ ಹಣವನ್ನು ಹಿಂದೂ ಕಮಿಟಿ ಹಜ್ರ್ಲಿಯಾ ಪರವಾಗಿ ವಿತರಿಸಲಾಯಿತು.
ಫೋಟೋ
16ಎಂಆರ್ 1-ಇಸ್ರೇಲ್

