ಪರೀಕ್ಷಾ ಪೂರ್ವ ಉಚಿತ ತರಬೇತಿಗೆ ಆನ್ ಲೈನ್ ಅರ್ಜಿ ಆಹ್ವಾನ

Contributed bymadhugirinews@gmail.com|Vijaya Karnataka

ತುಮಕೂರಿನಲ್ಲಿ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ 2026-27ನೇ ಸಾಲಿಗೆ ಉಚಿತ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತಿದೆ. ಸಂಪೂರ್ಣ ಉಚಿತ ವಸತಿಯುತ ಪಿಯುಸಿ ಶಿಕ್ಷಣದೊಂದಿಗೆ ಆನ್‌ಲೈನ್ ಕೋಚಿಂಗ್ ಕೂಡ ಲಭ್ಯವಿದೆ. ಮೆರಿಟ್ ಆಧಾರದ ಮೇಲೆ ಆಯ್ಕೆ ನಡೆಯಲಿದೆ. ಕರ್ನಾಟಕ ರಾಜ್ಯದ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅಥವಾ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾರ್ಚ್ 31ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.

invitation to apply for free pre examination coaching for the year 2026 27

ತುಮಕೂರು: ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್ , ಜೈನ್ , ಬೌದ್ಧ, ಸಿಖ್ , ಪಾರ್ಸಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ 2026-27ನೇ ಸಾಲಿಗೆ NಉಉT/ಒಉಉ/ಓಧಿಇಉT/ಐಇಅ್ಕ/ಇಅಧಿಊಟ್ಠ್ಞdaಠಿಜಿಟ್ಞ/ಇಔಅT/ಇಖಿಉT ಪರೀಕ್ಷಾ ಪೂರ್ವ ಉಚಿತ ಕೋಚಿಂಗ್ ನೀಡಲು ಆನ್ ಲೈನ್ ನಲ್ಲಿಅರ್ಜಿ ಆಹ್ವಾನಿಸಲಾಗಿದೆ. 2026-27ನೇ ಸಾಲಿಗೆ ಸಂಪೂರ್ಣ ಉಚಿತ ವಸತಿಯುತ ಪಿಯುಸಿ ಶಿಕ್ಷಣದೊಂದಿಗೆ NಉಉT/ಒಉಉ/ಓಧಿಇಉT/ಐಇಅ್ಕ/ಇಅಧಿಊಟ್ಠ್ಞdaಠಿಜಿಟ್ಞ/ಇಔಅT/ಇಖಿಉT ಪರೀಕ್ಷಾ ಪೂರ್ವ ಉಚಿತ ಆನ್ ಲೈನ್ ಕೋಚಿಂಗನ್ನು ನುರಿತ ಉಪನ್ಯಾಸಕರನ್ನೊಳಗೊಂಡಂತೆ ಪ್ರತ್ಯೇಕ ಬಾಲಕ-ಬಾಲಕಿಯರ ಕ್ಯಾಂಪಸ್ ನೊಂದಿಗೆ ನೀಡಲಾಗುವುದು. ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳು ಕರ್ನಾಟಕ ರಾಜ್ಯಕ್ಕೆ ಸೇರಿದವರಾಗಿರಬೇಕು. ಎಸ್ ಎಸ್ ಎಲ್ ಸಿ/ತತ್ಸಮಾನ ಪರೀಕ್ಷೆಯಲ್ಲಿಉತ್ತೀರ್ಣರಾಗಿರಬೇಕು ಅಥವಾ ಪ್ರಸಕ್ತ ಸಾಲಿನಲ್ಲಿಎಸ್ ಎಸ್ ಎಲ್ ಸಿ/ತತ್ಸಮಾನ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಸಕ್ತರು hಠಿಠಿps://dಟಞ.ka್ಟ್ಞaಠಿaka.ಜಟv.ಜ್ಞಿ ಜಾಲತಾಣದ ಮೂಲಕ ಮಾರ್ಚ್ 31ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ್ ಭವನ, ಇಂದಿರಾ ಕಾಲೇಜು ಮುಂಭಾಗ, ಉಪ್ಪಾರಹಳ್ಳಿ, ತುಮಕೂರು-572101 ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಜಿಲ್ಲಾಅಧಿಕಾರಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.