ಅಡಕೆ ತಟ್ಟೆಗಳ ಕುರಿತು ನಡೆಸಿದ ಅಧ್ಯಯನಗಳಲ್ಲಿಆಲ್ಕಲಾಯ್ಡ್ ಮಟ್ಟ ಕಡಿಮೆ ಇದೆ. ಅವುಗಳನ್ನು ಬಯೋಡಿಗ್ರೇಡಬಲ್ ತಟ್ಟೆಗಳನ್ನಾಗಿ ಬಳಸಿದರೆ ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಕಡಿಮೆ ಅಪಾಯವಿದೆ ಎಂಬುದು ತಿಳಿದು ಬಂದಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಪರಿಷತ್ ಗೆ ತಿಳಿಸಿದರು. ಬಿಜೆಪಿಯ ಕೆ. ಪ್ರತಾಪಸಿಂಹ ನಾಯಕ್ ಪ್ರಶ್ನೆಗೆ ತೋಟಗಾರಿಕೆ ಸಚಿವರ ಪರ ಉತ್ತರಿಸಿ, ‘‘ಅಡಕೆ ಬಳಕೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು ಎಂ.ಎಸ್ .ರಾಮಯ್ಯ ವಿಶ್ವವಿದ್ಯಾಲಯದಿಂದ 31.80 ಲಕ್ಷ ರೂ. ವೆಚ್ಚದಲ್ಲಿಸಂಶೋಧನೆ ಮಾಡಿಸಲಾಗಿದೆ. ಪಾನ್ ಅಥವಾ ಪಾನ್ ಮಸಾಲದಂತಹ ಪದಾರ್ಥಗಳಲ್ಲಿಅಡಕೆಯನ್ನು ಒಂದು ಅಂಶವಾಗಿ ಬಳಸಿದರೆ, ಅಲ್ಪ ಪ್ರಮಾಣದಲ್ಲಿಸೇವಿಸಿದರೆ ಹಾಗೂ ತಂಬಾಕು ಸೇರಿಸದಿದ್ದರೆ ಆರೋಗ್ಯಕ್ಕೆ ಹಾನಿಕಾರಕವಲ್ಲವೆಂದು ವರದಿ ನೀಡಿದೆ,’’ ಎಂದು ಹೇಳಿದರು. ‘‘ಕೇಂದ್ರ ಸರಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಅಡಕೆ ಕುರಿತು ಸಾಕ್ಷ್ಯಾಧಾರ ಸಹಿತ ಸಂಶೋಧನೆ ಮತ್ತು ಮಾನವ ಆರೋಗ್ಯ ಎಂಬ ಬಹು ಸಂಸ್ಥೆಗಳನ್ನೊಳಗೊಂಡ ಪ್ಯಾಕೇಜ್ ಯೋಜನೆಯನ್ನು ರೂಪಿಸಿದೆ. ಒಟ್ಟು 10 ಸಂಸ್ಥೆ ಗಳು ಸಂಶೋಧನೆ ಕೈಗೊಂಡು ಮಧ್ಯಂತರ ವರದಿ ಸಲ್ಲಿಸಿವೆ. ಅಡಕೆ ಹಾನಿಕಾರಕವಲ್ಲಮತ್ತು ಕ್ಯಾನ್ಸರ್ ಕಾರಕವಲ್ಲಎಂಬುದರ ಕುರಿತಂತೆ ಸಂಶೋಧನೆಯ ಅಂತಿಮ ವರದಿ ಬಂದ ಬಧಿಳಿಕ ಪ್ರಚಾರ ಕಾರ ್ಯಕ್ರಮಗಳನ್ನು ಹಮ್ಮಿ ಕೊಳ್ಳಧಿಲಾಗುವುದು,’’ ಎಂದು ತಿಳಿಸಿದರು.

