ನಿತ್ಯದರ್ಶಿ 18 ಮಾರ್ಚ್ 2026

Contributed bynetravati.krishnamurthy@timesgroup.com|Vijaya Karnataka

ಮೇಷ ರಾಶಿಯವರಿಗೆ ಪ್ರಭಾವಿ ವ್ಯಕ್ತಿಯ ಭೇಟಿ ಲಾಭ ತರಲಿದೆ. ವೃಷಭ ರಾಶಿಯವರಿಗೆ ಸಿನಿಮಾ ಅವಕಾಶಗಳು ಸಿಗಲಿವೆ. ಮಿಥುನ ರಾಶಿಯವರು ದುಂದು ವೆಚ್ಚದಲ್ಲಿ ಎಚ್ಚರ ವಹಿಸಬೇಕು. ಕಟಕ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ ಇದೆ. ಸಿಂಹ ರಾಶಿಯವರಿಗೆ ಪೊಲೀಸ್ ಅಧಿಕಾರಿ ಸಹಾಯ ಮಾಡಲಿದ್ದಾರೆ. ಕನ್ಯಾ ರಾಶಿಯವರಿಗೆ ಸಮಸ್ಯೆಗಳು ಪರಿಹಾರವಾಗಲಿವೆ. ತುಲಾ ರಾಶಿಯವರಿಗೆ ಯಶಸ್ಸು ದೊರೆಯಲಿದೆ. ವೃಶ್ಚಿಕ ರಾಶಿಯವರಿಗೆ ಅಲೆದಾಟ ಬೇಸರ ತರಲಿದೆ. ಧನು ರಾಶಿಯವರು ವಸ್ತುಗಳನ್ನು ತಲುಪಿಸಬೇಕು. ಮಕರ ರಾಶಿಯವರು ಆರೋಗ್ಯ ಕಾಪಾಡಿಕೊಳ್ಳಬೇಕು. ಕುಂಭ ರಾಶಿಯವರಿಗೆ ಯೋಜನೆಗಳು ಉತ್ತಮವಾಗಿ ನೆರವೇರಲಿವೆ. ಮೀನ ರಾಶಿಯವರಿಗೆ ಅಡಚಣೆ ಉಂಟಾಗಬಹುದು.

nityadarshi astrological insights and forecasts for march 18 2026

ನಿತ್ಯದರ್ಶಿ 18 ಮಾರ್ಚ್ 2026

ಶ್ರೀಪತಿ ಭಟ್ | ಬೆಂಗಳೂರು

------------

ಮೇಷ : ಪ್ರಭಾವಶಾಲಿ ವ್ಯಕ್ತಿಯೊಂದಿಗಿನ ಭೇಟಿಯನ್ನು ತಳ್ಳಿ ಹಾಕದೇ ನಿಮ್ಮ ವೃತ್ತಿ ಕ್ಷೇತ್ರಕ್ಕೆ ಲಾಭ ಉಂಟಾಗುವಂತೆ ನೋಡಿಕೊಳ್ಳುವ ಪ್ರಯತ್ನ ಮಾಡಿ. ಸೋದರಿಯ ವಿಷಯದಲ್ಲಿಅನುಕಂಪ ಮೂಡುವುದು.

(ಶುಭ ಸಂಖ್ಯೆ: 2)

-----

ವೃಷಭ : ಸಹೋದರರಲ್ಲಿನ ಭಿನ್ನಾಭಿಪ್ರಾಯಕ್ಕೆ ದಾಯಾದಿಗಳು ಹುಳಿ ಹಿಂಡುವ ಕೆಲಸವನ್ನು ಮಾಡಲಿದ್ದಾರೆ. ಸಿನಿಮಾ ಕಲಾವಿದರಿಗೆ ಅವಕಾಶಗಳು ಸಿಗುವುವು. ಆರೋಗ್ಯ ಉತ್ತಮವಾಗಿ ಮಕ್ಕಳೊಡನೆ ಆಟ ಪಾಠಗಳಲ್ಲಿಪಾಲ್ಗೊಳ್ಳುವಿರಿ.

(ಶುಭ ಸಂಖ್ಯೆ : 9)

-------

ಮಿಥುನ : ದುಂದು ವೆಚ್ಚ ಮಾಡುವ ಸಂದರ್ಭದಲ್ಲಿಹೆಚ್ಚಿನ ಆಲೋಚನೆ ಮಗಳ ಮದುವೆಯ ಖರ್ಚಿನ ಬಗ್ಗೆ ಇರಲಿ. ವ್ಯವಹಾರದಲ್ಲಿನಿಮಗಾಗಿರುವ ಮೋಸ ಬೆಳಕಿಗೆ ಬರುತ್ತದೆ. ತಾಳ್ಮೆವಹಿಸಿ.

(ಶುಭ ಸಂಖ್ಯೆ : 6)

--------

ಕಟಕ : ಇಂಟಿರಿಯರ್ ಡೆಕೋರೇಷನ್ , ಅನಿಮೇಷನ್ ಡಿಸೈನ್ ಗೆ ಸಂಬಂಧಪಟ್ಟ ವ್ಯವಹಾರದವರಿಗೆ ಅಥವಾ ವಿದ್ಯಾರ್ಥಿಗಳಿಗೆ ಪ್ರಗತಿಯಾಗುವುದು. ವೃತ್ತಿ ಬದುಕಿನಲ್ಲಿಉನ್ನತ ಸ್ಥಾನಕ್ಕೇರಲು ಇದು ಸಕಾಲ.

(ಶುಭ ಸಂಖ್ಯೆ : 4)

----------

ಸಿಂಹ : ಉನ್ನತ ಪೊಲೀಸ್ ಅಧಿಕಾರಿಯೊಬ್ಬರ ಸಹಾಯದಿಂದ ಗಂಭೀರ ಸಮಸ್ಯೆಯೊಂದಕ್ಕೆ ಉತ್ತರ ಸಿಗುವುದು. ದಾನ-ಧರ್ಮ ಪ್ರವೃತ್ತಿಯಿಂದ ಕೆಲವು ಶುಭ ಫಲಗಳು ನಿಮ್ಮ ಅನುಭವಕ್ಕೆ ಬರಲಿವೆ.

(ಶುಭ ಸಂಖ್ಯೆ : 8)

---------

ಕನ್ಯಾ : ವಿಚಾರಗಳನ್ನು ಭಿನ್ನ ಭಿನ್ನವಾದ ದೃಷ್ಟಿಯಿಂದ ನೋಡಲು ಪ್ರಯತ್ನಿಸಿ. ಸರಿ ತಪ್ಪಿನ ಅರಿವಾಗಲಿದೆ. ಹಲವಾರು ವಿಚಾರಗಳಲ್ಲಿತೊಂದರೆ ಕಂಡುಬಂದರೂ ಎಲ್ಲಸಮಸ್ಯೆಗಳು ಪರಿಹಾರವಾಗುವವು.

(ಶುಭ ಸಂಖ್ಯೆ: 7)

----------

ತುಲಾ : ನಿಮ್ಮ ಬುದ್ಧಿಶಕ್ತಿಗೆ ಕೆಲಸ ಕೊಟ್ಟರೆ ಯಶಸ್ಸು ದೊರೆಕುತ್ತದೆ. ಸಂಸ್ಥೆಯ ಅಭಿವೃದ್ದಿಗೆ ನೀವು ತೆಗೆದುಕೊಳ್ಳಬೇಕಾಗಿರುವ ನಿರ್ಧಾರದ ಬಗ್ಗೆ ಈ ದಿನ ಹೆಚ್ಚಿನ ಅಧ್ಯಯನ ನಡೆಸುವುದು ಉತ್ತಮ.

(ಶುಭ ಸಂಖ್ಯೆ : 5)

---------

ವೃಶ್ಚಿಕ : ಬಹು ಕೆಲಸಗಳ ಹೊಣೆ ಇರುವ ನಿಮಗೆ ವಿನಾಕಾರಣದ ಅಲೆದಾಟ ಬೇಸರ ತರುತ್ತದೆ. ನಿಮ್ಮನ್ನು ಮನೆಯವರು ಸರಿದಾರಿಗೆ ತರಲಿದ್ದಾರೆ. ದಿನನಿತ್ಯದ ಕೆಲಸಗಳು ಎಂದಿನಂತೆ ಸಾಗಲಿವೆ.

(ಶುಭ ಸಂಖ್ಯೆ : 1)

-----------

ಧನು : ಇನ್ನೊಬ್ಬರಿಗೆ ಕೊಡಬೇಕಾದ ವಸ್ತುಗಳನ್ನು ಅವರಿಗೆ ತಲುಪಿಸುವ ಕರ್ತವ್ಯವನ್ನು ಮರೆಯದಿರಿ. ವ್ಯವಹಾರದಲ್ಲಿಹೆಚ್ಚಿನ ಬಂಡವಾಳವನ್ನು ಹೂಡಲು ತಂದೆಯವರ ಅನುಮತಿಯನ್ನು ಪಡೆಯುವುದು ಒಳ್ಳೆಯದು.

(ಶುಭ ಸಂಖ್ಯೆ : 3)

--------

ಮಕರ : ಎಲ್ಲವಿಷಯಗಳಲ್ಲಿಯೂ ಸ್ವಾಭಾವಿಕ ಗುಣಕ್ಕಿಂತ ಹೆಚ್ಚಿನ ಸಮಾಧಾನದಿಂದಿರುವುದು ಉತ್ತಮ. ಒಳ್ಳೆಯ ಆಹಾರ ಮತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

(ಶುಭ ಸಂಖ್ಯೆ : 9)

------

ಕುಂಭ : ನಿಮ್ಮ ಹಾದಿಯನ್ನು ಮಾರ್ಗದರ್ಶಕರ ಸಲಹೆಯಂತೆ ಬದಲಿಸಿಕೊಂಡಲ್ಲಿಯೋಜನೆಗಳು ನೀವು ಆಲೋಚಿಸಿದ್ದಕ್ಕಿಂತಲೂ ಹೆಚ್ಚು ಉತ್ತಮವಾಗಿ ನೆರವೇರುವುವು. ಸಾವಧಾನದಿಂದ ಕೆಲಸಗಳನ್ನು ಮಾಡಿ ಮುಗಿಸುವಿರಿ.

(ಶುಭ ಸಂಖ್ಯೆ : 6)

----------

ಮೀನ : ಕೆಲವೊಂದು ಕೆಲಸದಲ್ಲಿಅಡಚಣೆ ಉಂಟಾಗಿ ನೋವು ಆಗಬಹುದು. ಕೆಲವು ಕೆಲಸಗಳನ್ನು ಮಾಡಲು ದೀರ್ಘ ಪ್ರಯಾಣ ಕೈಗೊಳ್ಳಬೇಕಾಗಬಹುದು. ಪಾಲುದಾರಿಕೆ ವ್ಯವಹಾರದಲ್ಲಿಚರ್ಚೆಗೆ ಆಸ್ಪದ ನೀಡದಿರಿ.

(ಶುಭ ಸಂಖ್ಯೆ : 2)