ಹಬ್ಬಕ್ಕೆ ಸಡಗರದ ಖರೀದಿ

Contributed bypunyavathi.hp@timesgroup.com|Vijaya Karnataka

ಬೆಂಗಳೂರಿನಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬಗಳ ಸಂಭ್ರಮ ಜೋರಾಗಿದೆ. ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಿದ್ದು, ಜನರು ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ. ಹೂವು, ಹಣ್ಣು, ತರಕಾರಿಗಳ ಬೆಲೆ ಗ್ರಾಹಕರಿಗೆ ಕೈಗೆಟುಕುವಂತಿದೆ. ವಿಶೇಷವಾಗಿ ಚಿಕ್ಕಪೇಟೆ ಸುತ್ತಲಿನ ಬಟ್ಟೆ ಅಂಗಡಿಗಳಲ್ಲಿ ಹೆಚ್ಚಿನ ಜನ ಸೇರಿದ್ದಾರೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮಾವು-ಬೇವು, ಹೂವುಗಳ ಖರೀದಿಯೂ ಭರದಿಂದ ಸಾಗಿದೆ. ವರ್ಷತೊಡಕಿನ ಸಾಮಗ್ರಿಗಳ ಖರೀದಿ ಕೂಡ ನಡೆಯುತ್ತಿದೆ.

excitement in purchasing for yugaadi and ramadan festival

ವಿಕ ಸುದ್ದಿಧಿಲೋಕ ಬೆಂಗಧಿಳೂಧಿರು ಯುಗಾದಿ ಮತ್ತು ರಂಜಾನ್ ಹಬ್ಬಗಳು ಒಟ್ಟಾಗಿ ಬಂದಿರುವುದರಿಂದ ಮಾರುಕಟ್ಟೆ ಗಳಲ್ಲಿಖರೀದಿ ಸಂಭ್ರಮ ಜೋರಾಗಿದೆ. ಗುರುವಾರ ಯುಗಾದಿ, ಶನಿವಾರ ರಂಜಾನ್ ಹಬ್ಬ ಆಚರಿಸಲಾಗುತ್ತಿದೆ. ಯುಗಾದಿ ಹಬ್ಬಕ್ಕೆ ಮಾವು-ಬೇವು, ಹೂವುಗಳು ಮಾರುಕಟ್ಟೆಗೆ ಬಂದಿದ್ದು, ಭರದ ಖರೀದಿ ನಡೆಯಿತು. ಹಬ್ಬದ ಹಿನ್ನೆಲೆಯಲ್ಲಿಬಟ್ಟೆ ಖರೀದಿಗಾಗಿ ಚಿಕ್ಕಪೇಟೆ ಸುತ್ತಲಿನ ಬಟ್ಟೆ ಅಂಗಡಿಗಳಲ್ಲಿಹೆಚ್ಚಿನ ಜನ ನೆರೆದಿದ್ದರು. ಕೆ.ಆರ್ . ಮಾರುಕಟ್ಟೆ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿಪೂಜಾ ಸಾಮಗ್ರಿ, ಹೋಳಿಗೆ ಸಾಮಗ್ರಿಗಳು, ಹೂವು-ಹಣ್ಣು, ತರಕಾರಿ ಖರೀದಿಯೂ ಜೋರಾಗಿ ನಡೆಯಿತು. ಹೂವು, ಹಣ್ಣು, ತರಕಾರಿ ಸೇರಿದಂತೆ ಹಲವು ವಸ್ತುಗಳ ಬೆಲೆ ಗ್ರಾಹಕರ ಕೈಗೆಟಕುವಂತಿರುವುದು ಗ್ರಾಹಕರ ಸಂತಸ ಹೆಚ್ಚಿಸಿದೆ. ಕೆ.ಆರ್ . ಮಾರುಕಟ್ಟೆಯಲ್ಲಿಸಗಟು ದರದಲ್ಲಿಕನಧಿಕಾಂಬರ ಹೂವು ಸಾಮಾನ್ಯವಾಗಿ 900 ರೂ. ಹಾಗೂ ಮೇಲ್ಪಟ್ಟಿರುತ್ತದೆ. ಮಲ್ಲಿಗೆ ಹೂವು 600-700 ರೂ. ಇರುತ್ತಿತ್ತು. ಈಗ ಕ್ರಮವಾಗಿ 800 ಹಾಗೂ 400 ರೂ.ಇದೆ. ಮಾರುಧಿಕಧಿಟ್ಟೆಗೆ ಬೆಂಗಧಿಳೂರು ಗ್ರಾಮಾಂತರ, ಆನೇಕಲ್ , ತುಮಧಿಕೂರು, ಚಿಕ್ಕಧಿಬಧಿಳ್ಳಾಧಿಪುರ ಮತ್ತಿಧಿತರ ಭಾಗಧಿಗಧಿಳಿಂದ ಸಾಕಷ್ಟು ಪ್ರಮಾಧಿಣಧಿದಲ್ಲಿಹೂವು ಆಗಧಿಮಿಧಿಸುಧಿತ್ತಿದೆ. ಜತೆಗೆ ತಮಿಧಿಳುಧಿನಾಧಿಡಿಧಿನಿಂದಲೂ ಬರುಧಿತ್ತಿದೆ ಎನ್ನುತ್ತಾರೆ ಸಗಟು ಹೂವಿನ ವ್ಯಾಪಾರಿ ವಿಜಯಕುಮಾರ್ . ಟೊಮೇಟೊ, ನುಗ್ಗೆಕಾಯಿ, ಈರುಳ್ಳಿ, ಕ್ಯಾರೆಟ್ ಹೀಗೆ ಬಹುತೇಕ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಏಲಕ್ಕಿ ಬಾಳೆ ಕೆಲವೆಡೆ 70-80 ರೂ.ವರೆಗೆ ಮಾರಾಟವಾಗುತ್ತಿದೆ. ವರ್ಷಧಿ ತೊಧಿಡಧಿಕಿನ ಸಾಮಧಿಗ್ರಿಧಿಗಳ ಖರೀಧಿದಿ: ಯುಗಾದಿ (ಗುರುವಾರ)ಯ ಮರುದಿನ ಅಂದರೆ ಶುಕ್ರವಾರ ವರ್ಷ ತೊಡಕು ಆಚರಿಸಲು ಜನ ಕಾಯುತ್ತಿದ್ದಾರೆ. ವರ್ಷ ತೊಡಕು ಹಾಗೂ ರಂಜಾನ್ ನಲ್ಲಿಮಾಡುವ ಮಾಂಸಾಹಾರದ ಅಡುಗೆಗೆ ಹಲವರು ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮತ್ತಿತರ ಪದಾರ್ಥಗಳನ್ನು ಖರೀದಿಸಿದರು.