ಪುರುಷರ ಹಾಕಿ ವಿಶ್ವಕಪ್ ಗೆ ಡ್ರಾ ಪ್ರಕಟ
ಲಾಸನ್ನೆ: ನೆದರ್ಲೆಂಡ್ಸ್ ಮತ್ತು ಬೆಲ್ಜಿಯಂನಲ್ಲಿನಡೆಯಲಿರುವ ಎಫ್ ಐಎಚ್ ಹಾಕಿ ವಿಶ್ವಕಪ್ ಗೆ ಮಂಗಳವಾರ ಡ್ರಾ ಪ್ರಕಟಿಸಲಾಗಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿಸ್ಥಾನ ಪಡೆದಿವೆ. ಇವುಗಳಲ್ಲದೆ, ಇಂಗ್ಲೆಂಡ್ , ನೆದರ್ಲೆಂಡ್ಸ್ ಮತ್ತು ವೇಲ್ಸ್ ತಂಡಗಳು ಇದೇ ಗುಂಪಿನಲ್ಲಿವೆ.
ಆಗಸ್ಟ್ 15ರಿಂದ 30ರವರೆಗೆ ನಡೆಯಲಿರುವ ಪ್ರತಿಷ್ಠಿತ ಟೂರ್ನಿಗೆ ಆಮ್ ಸ್ಟರ್ ಡ್ಯಾಮ್ ನ ವ್ಯಾಗ್ನರ್ ನಲ್ಲಿಮಂಗಳವಾರ ನಡೆದ ಡ್ರಾ ಸಮಾರಂಭದಲ್ಲಿಭಾರತ ಮಹಿಳಾ ತಂಡವು ಚೀನಾ, ಇಂಗ್ಲೆಂಡ್ , ನೆದರ್ಲೆಂಡ್ಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ‘ಡಿ’ ಗುಂಪಿನಲ್ಲಿಸ್ಥಾನ ಪಡೆದಿವೆ.

