ನಿತ್ಯದರ್ಶಿ 19 ಮಾರ್ಚ್ 2026
ಶ್ರೀಪತಿ ಭಟ್ | ಬೆಂಗಳೂರು
----
ಮೇಷ : ವ್ಯವಹಾರದಲ್ಲಿಅನಗತ್ಯ ವಿಷಯಗಳತ್ತ ಗಮನಹರಿಸದೇ ಇರುವಂಥ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ದಾಂಪತ್ಯದಲ್ಲಿಹೊಂದಾಣಿಕೆಯ ಮನೋಭಾವದಿಂದ ಸಾಮರಸ್ಯ ವೃದ್ಧಿಯಾಗಲಿದೆ.
(ಶುಭ ಸಂಖ್ಯೆ: 6)
----
ವೃಷಭ: ರಕ್ತ ಸಂಬಂಧಿ ಕಾಯಿಲೆ ಹೊಂದಿದವರು ರಕ್ತ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಸತ್ಯ ಮಾರ್ಗದಿಂದ ಕಾರ್ಯಪ್ರವೃತ್ತರಾದಲ್ಲಿಅಭಿವೃದ್ಧಿ ಅನುಭವಕ್ಕೆ ಬರಲಿದೆ.
(ಶುಭ ಸಂಖ್ಯೆ : 1)
-----
ಮಿಥುನ: ವೃತ್ತಿ ಬದುಕಿನಲ್ಲಿಅಭಿಪ್ರಾಯಗಳಿಗೆ ವಿರೋಧ ಬರಲಿದೆ. ವಿಶ್ವಾಸದಲ್ಲಿಯಾವುದೇ ರೀತಿಯ ಸಲಹೆ ಸೂಚನೆ ನೀಡಬೇಡಿ. ಬರಬೇಕಾಗಿದ್ದ ಹಣ ವಸೂಲಿ ಮಾಡಿಕೊಳ್ಳಲು ನಿಷ್ಠೂರವಾಗಿ ವರ್ತಿಸಬೇಕಾಗುವುದು.
(ಶುಭ ಸಂಖ್ಯೆ : 8)
-------
ಕಟಕ: ಆಲೋಚಿಸಿದಂತೆ ಕೆಲಸ ನಡೆಯದೇ ಸೋಲು, ಹಿನ್ನಡೆ, ಚಿಂತೆ ಮನಸ್ಸಿಗೆ ಬರಬಹುದು. ದೇವರ ಆಶೀರ್ವಾದ ನಿಮ್ಮ ಮೇಲೆ ಇರುವುದರಿಂದ ಸರಿಯಾದ ಸಮಯಕ್ಕೆ ಕೆಲಸಗಳು ಪೂರ್ಣಗೊಳ್ಳುತ್ತವೆ.
(ಶುಭ ಸಂಖ್ಯೆ : 2)
----------
ಸಿಂಹ: ನಂಬಿರುವ ವ್ಯಕ್ತಿಗಳ ಬಗ್ಗೆ ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕು ಎನಿಸಿದರೂ ಹಾಗೆ ಮಾಡದಿರಿ. ಜಾಣತನದಿಂದ ನಿಮ್ಮ ಕೆಲಸವನ್ನು ಪೂರ್ಣಗೊಳಿಸುವಲ್ಲಿಯಶಸ್ವಿಯಾಗುವಿರಿ.
(ಶುಭ ಸಂಖ್ಯೆ : 4)
----------
ಕನ್ಯಾ: ಪ್ರಕೃತಿ ವಿಕೋಪದ ಕಾರಣ ಮನೆಯಲ್ಲಿಸಣ್ಣ-ಪುಟ್ಟ ರಿಪೇರಿ ಕೆಲಸ ಮಾಡಿಸಬೇಕಾದ ಅನಿವಾರ್ಯವಾಗುವುದು. ಶ್ರೀ ದೈವಾನುಗ್ರಹದಿಂದ ಸಾಹಸ ಕಾರ್ಯಗಳು ಕೈಗೂಡಲಿವೆ.
(ಶುಭ ಸಂಖ್ಯೆ: 5)
--------
ತುಲಾ: ಕಟ್ಟಡ ಕಾರ್ಮಿಕರಿಗೆ ಮತ್ತು ದಿನಕೂಲಿಗಾರರಿಗೆ ಅಭಿವೃದ್ಧಿಯ ಬದುಕಿಗೆ ಬೇಕಾದ ಅವಕಾಶಗಳು ಸಿಗಲಿವೆ. ಸಾಧು-ಸಂತರ ಭೇಟಿಯಿಂದ ಮನಸ್ಸಿಗೆ ಸಮಾಧಾನವನ್ನು ಕಂಡುಕೊಳ್ಳಬಹುದು.
(ಶುಭ ಸಂಖ್ಯೆ : 7)
--------
ವೃಶ್ಚಿಕ: ಧಾರ್ಮಿಕ ನಾಯಕರಿಗೆ ಮರೆಯಲಾಗದ ಘಟನೆಯೊಂದು ಸುತ್ತಮುತ್ತಲಿನಲ್ಲಿನಡೆಯುವುದು. ಅವಲಂಬಿಸಿರುವವರನ್ನು ನೋಡಿಕೊಳ್ಳುವ ಜವಾಬ್ದಾರಿ ಹೆಚ್ಚಲಿದೆ. ಸಂತಾನಾಪೇಕ್ಷಿಗಳು ಫಲವನ್ನು ಪಡೆಯುವಿರಿ.
(ಶುಭ ಸಂಖ್ಯೆ : 3)
---------
ಧನು: ವ್ಯವಹಾರದಲ್ಲಿಮಾತಿಗಿಂತ ಕೃತಿ ಮುಖ್ಯ ಎನ್ನುವ ರೀತಿಯಲ್ಲಿಸಾಮರ್ಥ್ಯ ತೋರಿಸುವ ಬಗ್ಗೆ ನಿಮ್ಮ ಶ್ರಮವಿರಲಿ. ಸಹಾಯಹಸ್ತಗಳ ಮುಖಾಂತರವಾಗಿ ಅಪೂರ್ಣ ಕೆಲಸ-ಕಾರ್ಯಗಳು ಪೂರ್ಣಗೊಳ್ಳಲಿವೆ.
(ಶುಭ ಸಂಖ್ಯೆ : 9)
---------
ಮಕರ: ನಿಮ್ಮಿಂದ ಉತ್ಪಾದಿತ ವಸ್ತುಗಳಿಗೆ ಮಾರುಕಟ್ಟೆಯಲ್ಲಿಭದ್ರ ನೆಲೆ ಸಿಕ್ಕಿ ಮನಸ್ಸಿಗೆ ನೆಮ್ಮದಿಯಾಗಲಿದೆ. ಪ್ರತಿ ಹೆಜ್ಜೆಯು ಆತ್ಮಸಾಕ್ಷಿಗೆ ಒಪ್ಪುವಂತೆ ಇರಲಿ. ಔಷಧ ವ್ಯಾಪಾರಗಳಿಗೆ ಲಾಭ ಹೆಚ್ಚುವುದು.
(ಶುಭ ಸಂಖ್ಯೆ : 6)
---------
ಕುಂಭ: ವ್ಯವಹಾರಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿಗಳ ಮಾತನ್ನು ನಿರ್ಲಕ್ಷಿಸುವುದು ಸಮಂಜಸವೆಂಬುವುದು ಅನಿಸಿಕೆ. ಸ್ವಂತ ಸಮಸ್ಯೆಗಳನ್ನು ನೀವೇ ನಿವಾರಿಸಿಕೊಳ್ಳುವಂತೆ ವ್ಯಕ್ತಿತ್ವನ್ನು ರೂಪಿಸಿಕೊಳ್ಳಿ.
(ಶುಭ ಸಂಖ್ಯೆ : 1)
---------
ಮೀನ: ವರಮಾನವನ್ನು ಪಡೆಯುವ ಮುಖ್ಯ ಆಕಾಂಕ್ಷೆಯಿಂದ ಸುಲಭದ ಮತ್ತು ಹತ್ತಿರದ ಕೆಲಸ ತಿರಸ್ಕರಿಸಬೇಡಿ. ವ್ಯಾಪಾರ ಮಾರುಕಟ್ಟೆ ವಿಸ್ತರಿಸಲು ಬೇಕಾದ ತಯಾರಿ ಮಾಡಿಕೊಳ್ಳಿ. ರಿಪೇರಿಗಾಗಿ ಖರ್ಚು ಸಂಭವಿಸಲಿದೆ.
(ಶುಭ ಸಂಖ್ಯೆ : 4)

