ದಿನೇಶ್ ಗುಂಡೂರಾವ್

Contributed bynagappa.narayanappa@timesgroup.com|Vijaya Karnataka

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಔಷಧ ಖರೀದಿಯಲ್ಲಿ ಸುಧಾರಣೆ ತಂದಿರುವುದಾಗಿ ತಿಳಿಸಿದರು. ಟೆಂಡರ್‌ ಪ್ರಕ್ರಿಯೆಯಿಂದಾಗಿ ಪೂರೈಕೆಯಲ್ಲಿ ಸ್ವಲ್ಪ ವಿಳಂಬವಾಗಿದೆ. ಆದರೆ ಯಾವುದೇ ಔಷಧಗಳ ಕೊರತೆ ಇಲ್ಲ. 890 ಔಷಧಗಳ ಖರೀದಿಗೆ ಅನುಮೋದನೆ ನೀಡಲಾಗಿದ್ದು, 232 ಔಷಧಗಳಿಗೆ ಈಗಾಗಲೇ ಆದೇಶ ನೀಡಲಾಗಿದೆ. ಕೆಲ ಔಷಧಗಳು ಉಗ್ರಾಣಕ್ಕೆ ತಲುಪಿವೆ.

dinesh gundu rao announces new measures for drug procurement

ಔಷಧಧಿÜ ಖರೀದಿಯ ಟೆಂಡರ್ ಪ್ರಕ್ರಿಯೆಯಲ್ಲಿಸಾಕಷ್ಟು ಸುಧಾರಣೆ ತರಲಾಗಿದ್ದು, ಆಸ್ಪತ್ರೆಗಳಿಗೆ ಪೂರೈಸುವುದರಲ್ಲಿಕೊಂಚ ವಿಳಂಬ ವಾಗಿದೆ. ಎಲ್ಲಿಯೂ ಕೊರತೆ ಇಲ್ಲಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಪರಿಷತ್ ನಲ್ಲಿಬಿಜೆಪಿಯ ಡಾ. ಧನಂಜಯ ಸರ್ಜಿ ಅರ್ಧ ಗಂಟೆ ಕಾಲಾವಧಿ ಚರ್ಚೆಗೆ ಉತ್ತರಿಸಿದ ಸಚಿವರು, ‘‘ಅಗತ್ಯವಿರುವ 890 ಔಷಧಗಳ ಖರೀದಿಗೆ ಕೆಎಸ್ ಎಂಎಸ್ ಸಿಎಲ್ ಸಂಸ್ಥೆಗೆ ಅನುಮೋದನೆ ನೀಡಲಾಗಿದೆ. ಈ ಪೈಕಿ 2025-26ನೇ ಸಾಲಿನಲ್ಲಿ534 ಔಷಧಗಳನ್ನು ಟೆಂಡರ್ ಪ್ರಕ್ರಿಯೆ ಮೂಲಕ ಖರೀದಿಸಲು ಹಾಗೂ ಉಳಿದ 356 ಕಡಿಮೆ ಮೌಲ್ಯದ ಔಷಧಿಗಳನ್ನು ಸ್ಥಳೀಯವಾಗಿ ಖರೀದಿಸಲು ನಿರ್ಧರಿಸಲಾಗಿದೆ. ಈಗಾಗಲೇ 232 ಔಷಧಿಗಳ ಖರೀದಿಗೆ ಕಾರ್ಯಾದೇಶ ನೀಡಿದ್ದು, ಕೆಲವೊಂದು ಉಗ್ರಾಣಕ್ಕೆ ಪೂರೈಕೆಯಾಗಿವೆ,’’ ಎಂದು ತಿಳಿಸಿದರು.