ಪರಿಸರ ಸ್ನೇಹಿ ಯುಗಾದಿ ಆಚರಣೆ

Contributed bynetravati.krishnamurthy@timesgroup.com|Vijaya Karnataka

ಈ ಯುಗಾದಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸೋಣ. ಪ್ಲಾಸ್ಟಿಕ್ ಬದಲಿಗೆ ನೈಸರ್ಗಿಕ ವಸ್ತುಗಳನ್ನು ಬಳಸಿ. ಮಾವಿನ ಎಲೆ, ಬೇವಿನ ಎಲೆ ತೋರಣಗಳು, ಹೂವಿನ ರಂಗೋಲಿ, ಬಾಳೆ ಎಲೆಯ ಊಟ ಮಾಡೋಣ. ಬೇವು-ಬೆಲ್ಲ ವಿತರಣೆಗೆ ದೊನ್ನೆ ಬಳಸಿ. ಆಹಾರ ವ್ಯರ್ಥ ಮಾಡದೆ ಸ್ಥಳೀಯ ತರಕಾರಿ, ಹಣ್ಣು ಬಳಸಿ. ಪ್ರಕೃತಿ ಗೌರವಿಸಿ, ಸುಸ್ಥಿರ ಬದುಕಿಗೆ ಆದ್ಯತೆ ನೀಡೋಣ.

eco friendly ugadi celebration a prelude to green living

ಪರಿಸರ ಸ್ನೇಹಿ ಯುಗಾದಿ ಆಚರಣೆ

- ನವ ಸಂವತ್ಸರದ ಹೊಸ ಹಾದಿ

- ಪ್ಲಾಸ್ಟಿಕ್ ಬಿಡಿ, ಪ್ರಕೃತಿ ಉಳಿಸಿ

ಇಂಟ್ರೊ

ಯುಗಾದಿ ಹಬ್ಬವು ಹೊಸ ವರ್ಷದ ಆರಂಭ ಮತ್ತು ಪ್ರಕೃತಿಯ ಪುನರುಜ್ಜೀವನದ ಸಂಕೇತ. ಆದರೆ, ಇಂದಿನ ದಿನಗಳಲ್ಲಿಅಬ್ಬರದ ಆಚರಣೆಗಳ ನಡುವೆ ಪರಿಸರಕ್ಕೆ ಹಾನಿಯಾಗುತ್ತಿರುವುದು ಸುಳ್ಳಲ್ಲ. ಈ ವರ್ಷದ ಯುಗಾದಿಯನ್ನು ಸುಸ್ಥಿರ ಯುಗಾದಿ ಆಗಿ ಆಚರಿಸುವ ಮೂಲಕ ಭೂಮಿಗೆ ಉಡುಗೊರೆ ನೀಡೋಣ.

--------

ಶ್ರೀವಿದ್ಯಾ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ... ಎಂಬ ಕವಿವಾಣಿಯಂತೆ, ಚೈತ್ರ ಮಾಸದ ಆಗಮನದೊಂದಿಗೆ ಹೊಸ ವರುಷದ ಸಡಗರ ಎಲ್ಲೆಡೆ ಮನೆಮಾಡಿದೆ. ವಸಂತ ಋುತುವಿನ ಈ ಕಾಲದಲ್ಲಿಪ್ರಕೃತಿಯೇ ಹಸಿರು ಪಟ್ಟನ್ನು ಉಟ್ಟು ನಳನಳಿಸುತ್ತಿರುವಾಗ, ನಮ್ಮ ಆಚರಣೆಗಳು ಕೂಡ ಪ್ರಕೃತಿಗೆ ಪೂರಕವಾಗಿರಲಿ ಎಂಬುದು ಇಂದಿನ ಆಶಯ.

ತಳಿರು ತೋರಣಗಳ ಹಸಿರು ಸಿರಿ : ಯುಗಾದಿ ಅಂದರೆ ಮೊದಲು ನೆನಪಾಗುವುದು ಮನೆ ಬಾಗಿಲಿಗೆ ಕಟ್ಟುವ ಮಾವಿನ ಎಲೆ ಮತ್ತು ಬೇವಿನ ಎಲೆಗಳ ತೋರಣ. ಪ್ಲಾಸ್ಟಿಕ್ ನ ಕೃತಕ ತೋರಣಗಳ ಬದಲು, ನೈಸರ್ಗಿಕವಾದ ಹಸಿರು ಎಲೆಗಳನ್ನು ಬಳಸಿ. ಇದು ಪರಿಸರಕ್ಕೆ ಹಾನಿ ಮಾಡುವುದಿಲ್ಲವಷ್ಟೇ ಅಲ್ಲದೆ, ಮನೆಯೊಳಗೆ ಶುದ್ಧ ಗಾಳಿಯನ್ನು ಪೂರೈಸುತ್ತದೆ. ಹಬ್ಬ ಮುಗಿದ ನಂತರ ಇವುಗಳನ್ನು ಸುಲಭವಾಗಿ ಗೊಬ್ಬರವಾಗಿ ಪರಿವರ್ತಿಸಬಹುದು.

ರಂಗಿನ ರಂಗೋಲಿಯಲ್ಲಿನಿಸರ್ಗದ ಸಂಭ್ರಮ : ಮನೆಯ ಅಂಗಳದಲ್ಲಿಬಿಡಿಸುವ ರಂಗೋಲಿಗೆ ರಾಸಾಯನಿಕಯುಕ್ತ ಬಣ್ಣಗಳ ಬದಲು ಹೂವಿನ ಎಸಳುಗಳು, ಅಕ್ಕಿ ಹಿಟ್ಟು ಅಥವಾ ನೈಸರ್ಗಿಕ ಬಣ್ಣಗಳನ್ನು (ಉದಾಹರಣೆಗೆ ಅರಿಶಿನ, ಕುಂಕುಮ) ಬಳಸಿ. ಇದು ನೋಡಲು ಆಕರ್ಷಕವಾಗಿರುವುದಲ್ಲದೆ ಭೂಮಿಗೆ ವಿಷಕಾರಿಯಲ್ಲ.

ಬಾಳೆ ಎಲೆಯ ಊಟ : ಯುಗಾದಿ ಹಬ್ಬದ ವಿಶೇಷ ಅಡುಗೆಯನ್ನು ಪ್ಲಾಸ್ಟಿಕ್ ಅಥವಾ ಪೇಪರ್ ಪ್ಲೇಟ್ ಗಳ ಬದಲು ಸಾಂಪ್ರದಾಯಿಕವಾಗಿ ಬಾಳೆ ಎಲೆಯಲ್ಲಿಸವಿಯಿರಿ. ಇದು ಊಟಕ್ಕೆ ಒಂದು ವಿಶೇಷ ರುಚಿಯನ್ನು ನೀಡುವುದಲ್ಲದೆ, ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಅತ್ಯುತ್ತಮ ಮಾರ್ಗವಾಗಿದೆ. ಊಟದ ನಂತರ ಎಲೆಗಳನ್ನು ದನಕರುಗಳಿಗೆ ಮೇವಾಗಿ ನೀಡಬಹುದು ಅಥವಾ ಕಾಂಪೋಸ್ವ್ ಮಾಡಬಹುದು.

ಬೇವು-ಬೆಲ್ಲದ ಸಂದೇಶ : ಜೀವನದ ಸುಖ ಕಷ್ಟಗಳನ್ನು ಸಮಾನವಾಗಿ ಸ್ವೀಕರಿಸುವ ಸಂದೇಶ ಸಾರುವ ಬೇವು ಬೆಲ್ಲವಿತರಣೆಗೆ ಚಿಕ್ಕ ಸ್ಟೀಲ್ ಬಟ್ಟಲುಗಳು ಅಥವಾ ದೊನ್ನೆಗಳನ್ನು (ಎಲೆಯಿಂದ ಮಾಡಿದ ಬಟ್ಟಲು) ಬಳಸಿ. ಪ್ಲಾಸ್ಟಿಕ್ ಚಮಚಗಳ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿ.

ಅಡುಗೆಯಲ್ಲಿಮಿತವ್ಯಯ : ಹಬ್ಬದ ಅಡುಗೆ ಎಂದರೆ ವೈವಿಧ್ಯಮಯ ಪದಾರ್ಥಗಳು ಸಹಜ. ಆದರೆ, ಆಹಾರ ವ್ಯರ್ಥವಾಗದಂತೆ ಎಚ್ಚರವಹಿಸಿ. ಸ್ಥಳೀಯವಾಗಿ ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು ಬಳಸಿ. ಇದರಿಂದ ಕಾರ್ಬನ್ ಫುಟ್ ಫ್ರಿಂಟ್ ಕಡಿಮೆಯಾಗುತ್ತದೆ. ಉಳಿದ ಆಹಾರವನ್ನು ಅಗತ್ಯವಿರುವವರಿಗೆ ಹಂಚಿ ಅಥವಾ ಸರಿಯಾಗಿ ಸಂಗ್ರಹಿಸಿಡಿ.

ನಮ್ಮ ಸುತ್ತಮುತ್ತಲಿನ ಪರಿಸರವನ್ನು ಗೌರವಿಸಿ, ಪ್ರಕೃತಿಯ ಜೊತೆಗೆ ಒಂದಾಗಿ ಬಾಳುವುದರಲ್ಲೇ ಹಬ್ಬದ ನಿಜವಾದ ಸಂಭ್ರಮವಿರುತ್ತೆ. ಈ ಹೊಸ ವರ್ಷದಲ್ಲಿನಾವು ಪರಿಸರವನ್ನು ರಕ್ಷಿಸುವ ಸಂಕಲ್ಪ ಮಾಡೋಣ. ಹೊಸ ವರ್ಷದ ಚಿಗುರು ಬರಿ ಮರದಲ್ಲಲ್ಲ, ನಮ್ಮ ಸುಸ್ಥಿರ ಬದುಕಿನ ಆಲೋಚನೆಯಲ್ಲಿರಲಿ.

ನಮ್ಮ ಹಬ್ಬಗಳು ಪ್ರಕೃತಿಯೊಂದಿಗೆ ಬೆಸೆದುಕೊಂಡಿವೆ. ಪ್ರಕೃತಿಯನ್ನು ಸಂರಕ್ಷಿಸುವುದೇ ನಾವು ಈ ಯುಗಾದಿಗೆ ನೀಡುವ ನಿಜವಾದ ಗೌರವ. ಈ ಬಾರಿ ಬಣ್ಣದ ಬದುಕಿನ ಜೊತೆಗೆ ಹಸಿರು ಬದುಕಿಗೂ ಆದ್ಯತೆ ನೀಡೋಣ.