ಭಾಗ್ಯ ನಂಜುಂಡಸ್ವಾಮಿ ್ಛಛಿಛಿdಚಿa್ಚk್ಝvkಃvಜ್ಜಿayka್ಟ್ಞaಠಿaka.್ಚಟಞ ಯುಗಾದಿ ಹಾಗೂ ಬೇಸಿಗೆ ಕಾಲದ ಮದುವೆ
ಸೀಸನ್ ಗೆ ಅನುಗುಣವಾಗಿ ವಿಭಿನ್ನ ಬಗೆಯ ಆಭರಣಗಳು ಮಾರುಕಟ್ಟೆಗೆ ಬಂದಿವೆ. ಕಡಿಮೆ ತೂಕದ ಹಾಗೂ ಆ್ಯಂಟಿಕ್ ಲುಕ್ ನೀಡುವ ಆಭರಣಗಳು ಬೇಡಿಕೆ ಹೆಚ್ಚಿಸಿಕೊಂಡಿದ್ದು, ಹಬ್ಬದ ಸಡಗರದಲ್ಲಿಒಡವೆಗಳ ಹೊಳಪು ಮೇಳೈಸುತ್ತಿದೆ. ಹಬ್ಬದ ದಿನ ಧರಿಸುವ ಆಕರ್ಷಕ ಉಡುಗೆಯೊಂದಿಗೆ ಆಭರಣವನ್ನು ಮ್ಯಾಚ್ ಮಾಡಿ. ಕತ್ತಿನ ಸೌಂದರ್ಯಕ್ಕೆ ಹೊಸ ಕಳೆ ಕುತ್ತಿಗೆಗೆ ಅಂಟಿಕೊಂಡಂತೆ ಇರುವ ಚೋಕರ್ ನೆಕ್ಲೇಸ್ ಗಳು ಇತ್ತೀಚಿನ ಬಹುದೊಡ್ಡ ಟ್ರೆಂಡ್ . ಬಂಗಾರದ ಪಾಲಿಶ್ ಅಥವಾ ರತ್ನಗಳ ಕೆತ್ತನೆಯಿಂದ ಇವು ಸೊಬಗು ನೀಡುತ್ತವೆ. ಸಾಂಪ್ರದಾಯಿಕ ಸೀರೆಗಳೊಂದಿಗೆ ಇವುಗಳನ್ನು ಧರಿಸಿದಾಗ ಮಹಿಳೆಯರಿಗೆ ಭವ್ಯ ನೋಟ ದೊರೆಯುತ್ತದೆ. ಆಧುನಿಕತೆಯ ಸ್ಪರ್ಶ: ವಿಭಿನ್ನ ಉದ್ದದ ಹಲವಾರು ಸರಪಳಿಗಳು ಸೇರಿ ಸಿದ್ಧವಾಗುವ ಲೇಯರ್ಡ್ ನೆಕ್ಲೇಸ್ ಗಳು ಆಕರ್ಷಕ ಪದರಗಳನ್ನು ಸೃಷ್ಟಿಸುತ್ತವೆ. ಸರಳ ಉಡುಪಿನೊಂದಿಗೂ ಇವು ಶ್ರೀಮಂತಿಕೆಯನ್ನು ತರುತ್ತವೆ. ಸಾಂಪ್ರದಾಯಿಕತೆಯ ನಡುವೆ ಆಧುನಿಕ ಶೈಲಿಯನ್ನು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆ. ಸರಳ ಸರಪಳಿಗಳಿಂದ ಹಿಡಿದು ನಾಜೂಕಾದ ಕಲಾತ್ಮಕ ಕೆತ್ತನೆಯ ಹಾರಗಳವರೆಗೆ ಇವು ಎಂದಿಗೂ ಫ್ಯಾಷನ್ ನಿಂದ ಹೊರಗುಳಿಯದ ಆಭರಣಗಳು. ಬಂಗಾರದ ಪಾಲಿಶ್ ಹೊಂದಿರುವ ಇಂತಹ ನೆಕ್ಲೇಸ್ ಗಳನ್ನು ಪೆಂಡೆಂಟ್ ಗಳೊಂದಿಗೆ ಧರಿಸುವ ಮೂಲಕ ವೈಯಕ್ತಿಕ ಶೈಲಿಯನ್ನು ಎತ್ತಿ ತೋರಿಸಬಹುದು.

