ನಗಿಸಿ ಕಾಡುವ ಲವ್ ಮಾಕ್ ಟೇಲ್ 3
-ಇಂದು ರಾಜ್ಯಾದ್ಯಂತ ಬಿಡುಗಡೆ
ಇಂಟ್ರೊ
ಕ್ರಿಸ್ಮಿ ಫಿಲ್ಮ್ಸ್ ಬ್ಯಾನರ್ ನಡಿ ಡಾರ್ಲಿಂಗ್ ಕೃಷ್ಣ ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವ ‘ಲವ್ ಮಾಕ್ ಟೇಲ್ 3’ ಸಿನಿಮಾ ಯುಗಾದಿ ಹಬ್ಬದ ಪ್ರಯುಕ್ತ ಇಂದು ಬಿಡುಗಡೆಯಾಗಲಿದೆ. ಪೇಯ್ಡ್ ಪ್ರೀಮಿಯರ್ ನಲ್ಲಿಉತ್ತಮ ಪ್ರತಿಕ್ರಿಯೆ ಪಡೆದ ಈ ಚಿತ್ರವನ್ನು ಯಾಕೆ ನೋಡಬೇಕು ಎನ್ನುವುದನ್ನು ಅವರು ಲವಲವಿಕೆಯೊಂದಿಗೆ ಹೇಳಿಕೊಂಡಿದ್ದಾರೆ.
ಕಿರಣ್
ಡಾಲಿಂಗ್ ಕೃಷ್ಣ ನಿರ್ದೇಶನದ ಚೊಚ್ಚಲ ಸಿನಿಮಾ ‘ಲವ್ ಮಾಕ್ ಟೇಲ್ ’ನ ಕೊನೆಯ ಅಧ್ಯಾಯ ‘ಲವ್ ಮಾಕ್ ಟೇಲ್ 3’ ಸಾಕಷ್ಟು ನಿರೀಕ್ಷೆಯೊಂದಿಗೆ ಇಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಶ್ರೀ ಕ್ರೇಜಿ ಮೈಂಡ್ಸ್ ಕ್ಯಾಮೆರಾ ವರ್ಕ್, ನಕುಲ… ಅಭ್ಯಂಕರ್ ಸಂಗೀತವಿರುವ ಹಾಗೂ ಈ ಬಾರಿ ದೊಡ್ಡ ಸ್ಕೇಲ್ ನಲ್ಲಿತಯಾರಾಗಿರುವ ಈ ಸಿನಿಮಾ ವಿದೇಶಗಳಲ್ಲೂಶೂಟ್ ಆಗಿದೆ. ಈಗಾಗಲೇ ‘ಲವ್ ಮಾಕ್ ಟೇಲ್ ’ ಸಿನಿಮಾ ಸರಣಿಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದ್ದು, ಈಗ ಇದರ ಮೂರನೇ ಭಾಗವನ್ನು ಯಾಕೆ ನೋಡಬೇಕೆಂದು ನಿರ್ದೇಶಕರು ನೀಡಿರುವ ಐದು ಪ್ರಮುಖ ಕಾರಣಗಳು ಇಲ್ಲಿವೆ.
1. ಇದು ‘ಲವ್ ಮಾಕ್ ಟೇಲ್ ’ ಚಿತ್ರದ ಕೊನೆಯ ಅಧ್ಯಾಯ. ಇದರ ಮೊದಲೆರಡು ಸಿನಿಮಾಗಳನ್ನು ನೋಡಿದವರಿಗೆ ಕೊನೆಯ ಚಾಪ್ಟರ್ ಮೇಲಿರುವ ಕುತೂಹಲ ಮತ್ತು ಈ ಕಥೆ ಹೇಗೆ ಅಂತ್ಯವಾಗುತ್ತದೆ ಎನ್ನುವುದಕ್ಕೆ ಉತ್ತರ ಸಿಗಲಿದೆ. ಪೇಯ್ಡ್ ಪ್ರೀಮಿಯರ್ ನಲ್ಲಿಈ ಸಿನಿಮಾ ನೋಡಿದವರಿಗೆ ಅದರ ಸೆಕೆಂಡ್ ಹಾಫ್ ಇಷ್ಟವಾಗಿದೆ. ಫಸ್ಟ್ ಹಾಫ್ ಲೈಟ್ ಹಾರ್ಟೆಡ್ ಆಗಿ ಸಾಗಿದರೆ ಸೆಕೆಂಡ್ ಹಾಫ್ ಭಾವನಾತ್ಮಕವಾಗಿಸುತ್ತದೆ.
2. ಈ ಸಿನಿಮಾದಲ್ಲಿಅದ್ಭುತ ಕಥೆಯಿದೆ. ಯುಗಾದಿ ಹಬ್ಬದ ವೀಕೆಂಡ್ ನಲ್ಲಿಬರುತ್ತಿರುವುದರಿಂದ ಕುಟುಂಬ ಸಮೇತ ಕುಳಿತು ನೋಡಿ ಎಂಜಾಯ್ ಮಾಡಬಹುದಾದ ಚಿತ್ರವಿದು. ಈ ಸಿನಿಮಾದಿಂದ ಆಚೀಚೆ ಹೋಗದಂತೆ ಮಾಡಿರುವ ಇದರ ಸ್ಕ್ರೀನ್ ಪ್ಲೇ ಜನರನ್ನು ಥ್ರಿಲ್ಲರ್ ಜಾನರ್ ನಂತೆ ಹಿಡಿದು ಕೂರಿಸುತ್ತದೆ.
3. ಈಗಾಗಲೇ ಬಂದಿರುವ ಈ ಸಿನಿಮಾ ಹಾಡಿನ ಲಿರಿಕಲ್ ವಿಡಿಯೊ ಜನರಿಗೆ ಇಷ್ಟವಾಗಿದೆ. ಆದರೆ ಇದನ್ನು ನೋಡಿದ ಮೇಲೆ ಈ ಹಾಡು ಮಾಡುವ ಪರಿಣಾಮ ಬೇರೆ, ದೃಶ್ಯ ಹಾಗೂ ಹಿಂದಿನ ಸಿನಿಮಾಗಳ ಸಂಪರ್ಕಗಳು ಬೇರೆಯದ್ದೇ ಅನುಭವ ನೀಡಲಿವೆ. ಅದರಲ್ಲೂಇದರಲ್ಲಿರುವ ‘ಒಬ್ಬಂಟಿಯಾದೆ ನಾ’ ಹಾಡು ಬೇರೆ ರೀತಿಯಲ್ಲಿಕಾಡುತ್ತದೆ.
4. ‘ಲವ್ ಮಾಕ್ ಟೇಲ್ ’ ಎಂದಮೇಲೆ ಕಾಮಿಡಿ ಇಲ್ಲದೆ ಈ ಸಿನಿಮಾ ಮಾಡಲು ಆಗುವುದೇ ಇಲ್ಲ. ಇದರಲ್ಲಿಯೂ ನವಿರು ಹಾಸ್ಯದೊಂದಿಗೆ ನಗಿಸುವ ಕೆಲಸ ಮಾಡಿದ್ದರೂ ಚಿತ್ರದ ಭಾವನಾತ್ಮಕ ಕಂಟೆಂಟ್ ನೋಡುಗರನ್ನು ಭಾರವಾದ ಭಾವನೆಗಳಿಂದ ಚಿತ್ರಮಂದಿರದಿಂದ ಬೀಳ್ಕೊಡುತ್ತದೆ.
5. ಈ ಮೊದಲಿನ ಎರಡು ಸರಣಿ ಸಿನಿಮಾಗಳಿಗಿಂತ ‘ಲವ್ ಮಾಕ್ ಟೇಲ್ 3’ ಎಲ್ಲಾವಿಷಯದಲ್ಲಿಅಪ್ ಗ್ರೇಡ್ ಆಗಿದೆ. ಇದರ ರೈಟಿಂಗ್ ಮೊದಲೆರಡು ಸಿನಿಮಾಗಳಿಗಿಂತ ಹೆಚ್ಚು ಪ್ರಬುದ್ಧವಾಗಿದ್ದು, ಈ ಚಿತ್ರಕ್ಕೆ ನೀಡಿರುವ ಟ್ರೀಟ್ ಮೆಂಟ್ ಹೊಸ ಥರವಿದೆ. ಇದರ ಪ್ರೊಡಕ್ಷನ್ ಕೂಡ ಅದ್ಧೂರಿಯಾಗಿ ನಡೆದಿದೆ.
ಬಾಕ್ಸ್
ಪೇಯ್ಡ್ ಪ್ರೀಮಿಯರ್ ಯಶಸ್ಸು
ಲವ್ ಮಾಕ್ ಟೇಲ್ 3 ಸಿನಿಮಾದ ಸೆಲೆಬ್ರಿಟಿ ಪ್ರೀಮಿಯರ್ ಹಾಗೂ ಮೈಸೂರು, ಬೆಂಗಳೂರು, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿನಡೆದ ಪೇಯ್ಡ್ ಪ್ರೀಮಿಯರ್ ಅಭೂತಪೂರ್ವ ಯಶಸ್ಸು ಕಂಡಿದೆ. ಈ ಸಿನಿಮಾ ನೋಡಿ ಖುಷಿಪಟ್ಟಿರುವ ಪ್ರೇಕ್ಷಕರು ಯುಗಾದಿ ಹಬ್ಬದ ಲಾಂಗ್ ವೀಕೆಂಡ್ ನಲ್ಲಿಅದನ್ನು ಮನೆಮಂದಿಗೆಲ್ಲಾತೋರಿಸುವ ಪ್ಲ್ಯಾನ್ ಮಾಡಿದ್ದಾರೆ.

