ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿಸುವ ಕುರಿತು ಪುನರ್ ಪರಿಶೀಲಿಸಲಾಗುವುದು. ನೀರಿನ ತೆರಿಗೆಯಲ್ಲಿವಿನಾಯಿತಿ ನೀಡುವ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಪರಿಷತ್ ನಲ್ಲಿಭರವಸೆ ನೀಡಿದರು. ಬಿಜೆಪಿಯ ಎನ್ .ರವಿಕುಮಾರ್ ನಿಯಮ 330ರಡಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿ, ‘‘ಪವನ, ಸೌರ ವಿದ್ಯುತ್ ಕಡಿಮೆ ದರಕ್ಕೆ ಲಭಿಸುತ್ತಿದ್ದ ಹಿನ್ನೆಲೆಯಲ್ಲಿಸಕ್ಕರೆ ಕಾರ್ಖಾನೆಗಳೊಂದಿಗೆ ರಾಜ್ಯ ಸರಕಾರ ಮಾಡಿಕೊಂಡಿದ್ದ ಒಪ್ಪಂದ ರದ್ದುಪಡಿಸಲಾಗಿತ್ತು. ಕೆಲ ಸಹಕಾರ ಸಕ್ಕರೆ ಕಾರ್ಖಾನೆಗಳಿಂದ ಮಾತ್ರ ವಿದ್ಯುತ್ ಖರೀದಿ ಮಾಡಲಾಗುತ್ತಿತ್ತು,’’ ಎಂದು ಹೇಳಿದರು. ‘‘ರಾಜ್ಯದ ಇತಿಹಾಸದಲ್ಲಿಮೊದಲ ಬಾರಿಗೆ ಎರಡು ಬಾರಿ ಪ್ರತಿ
ಟನ್ ಗೆ ಸರಕಾರದಿಂದ 50 ರೂ., ಸಕ್ಕರೆ ಕಾರ್ಖಾನೆಗಳಿಂದ 50 ರೂ. ನೀಡಲಾಗಿದೆ. ಸರಕಾರ ತನ್ನ ಪಾಲಿನ 300 ಕೋಟಿ ರೂ. ನೀಡಿದೆ. ಕಬ್ಬು ಪೂರೈಸಿರುವ ರೈತರಿಗೆ ಸುಮಾರು 18 ಸಾವಿರ ಕೋಟಿ ಕೊಡಿಸಲಾಗಿದೆ. ಉಳಿದ 3-4 ಸಾವಿರ ಕೋಟಿಯನ್ನು ಹಂಗಾಮು ಮುಗಿದ ಮೇಲೆ ಕೊಡಿಸುತ್ತೇವೆ,’’ ಎಂದು ತಿಳಿಸಿದರು. ‘‘ಕೇಂದ್ರ ಸರಕಾರವು ಹಲವು ವರ್ಷಗಳಿಂದ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು (ಎಂಎಸ್ ಪಿ) ಪರಿಷ್ಕರಿಸಿಲ್ಲ. ಇದೇ ದರದಲ್ಲಿತಂಪು ಪಾನೀಯ ಕಂಪನಿಗಳಿಗೂ ಸಕ್ಕರೆಯನ್ನು ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಎಲ್ ಪಿಜಿ ಸಿಲಿಂಡರ್ ಮಾದರಿಯಲ್ಲೇ ಸಿಹಿ ತಿನಿಸು ತಯಾರಕರು, ತಂಪು ಪಾನೀಯ ತಯಾರಿಕಾ ಕಂಪನಿಗಳಿಗೆ ಹೆಚ್ಚಿನ ದರ ಹಾಗೂ ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿಸಕ್ಕರೆ ಒದಗಿಸಬೇಕು,’’ ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದರು.

