New Phase For Healthcare Improvement In Government Hospitals Government Responds
ಸಧಿದಧಿನಧಿದಲ್ಲಿಸರಕಾರಿ ಆಸ್ಪತ್ರೆ ಅವ್ಯವಸ್ಥೆ ಅನಾಧಿವರಧಿಣ ಬಧಿಲಧಿವಧಿರ್ಧಧಿನೆಗೆ ಹೊಸ ಪ್ರಧಿಯೋಗ ಎಂದು ಸಮರ್ಥಿಸಿದ ಸರಕಾರ | ಬಧಿಡಧಿವರ ಆಧಿರೋಧಿಗ್ಯಕ್ಕೆ ಸ್ಪಂದಿಧಿಸಧಿದಿಧಿದ್ದಕ್ಕೆ ಪ್ರಧಿತಿಧಿಪಕ್ಷ ಆಕ್ಷೇಪ, ಸಧಿಭಾಧಿತ್ಯಾಗ
Contributed by: Keerthi Prasad|Vijaya Karnataka•
ಬೆಂಗಳೂರಿನಲ್ಲಿರುವ ಸರಕಾರಿ ಆಸ್ಪತ್ರೆಗಳ ಅವ್ಯವಸ್ಥೆ, ವೈದ್ಯರ ಕೊರತೆ, ಔಷಧಗಳ ಅಭಾವದ ಬಗ್ಗೆ ವಿಧಾನಸಭೆಯಲ್ಲಿ ಮಂಗಳವಾರ ಗಂಭೀರ ಚರ್ಚೆ ನಡೆಯಿತು. ಆರೋಗ್ಯ ಇಲಾಖೆ ಅನಾರೋಗ್ಯಪೀಡಿತವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದವು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ತಾಲೂಕು ಆರೋಗ್ಯ ಕೇಂದ್ರಗಳಲ್ಲಿ 24 ಗಂಟೆ ಸೇವೆಗೆ ಹೊಸ ಪ್ರಯೋಗ ಕೈಗೊಳ್ಳಲಾಗಿದೆ.
ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ, ಔಷಧಿಗಳ ಕೊರತೆ ಹಾಗೂ ಮೂಲಸೌಕರ್ಯಗಳ ಬಗ್ಗೆ ವಿಧಾನಸಭೆಯಲ್ಲಿ ಮಂಗಳವಾರ ತೀವ್ರ ಚರ್ಚೆ ನಡೆಯಿತು. ಆರೋಗ್ಯ ಇಲಾಖೆ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದರೆ, ಸುಧಾರಣೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡರು. ಈ ಚರ್ಚೆಯ ವೇಳೆ ಬಿಜೆಪಿ ಸದಸ್ಯರು ಸಚಿವರ ಉತ್ತರಕ್ಕೆ ಅಸಮಾಧಾನಗೊಂಡು ಸಭಾತ್ಯಾಗ ಮಾಡಿದರು.
ಆರೋಗ್ಯ ಇಲಾಖೆಯಲ್ಲಿನ ಅವ್ಯವಸ್ಥೆ, ಆಡಳಿತ ವೈಫಲ್ಯ, ಔಷಧ ಪೂರೈಕೆಯಲ್ಲಿನ ಲೋಪಗಳ ಬಗ್ಗೆ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದವು. ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಸಚಿವಾಲಯ ನೌಕರರ ನಡುವಿನ ಕಿತ್ತಾಟವೂ ಚರ್ಚೆಗೆ ಗ್ರಹಣ ಹಿಡಿಯಿತು. ಹಿರಿಯ ಕಾಂಗ್ರೆಸ್ ಸದಸ್ಯ ಬಿ.ಆರ್. ಪಾಟೀಲ್ ಕೂಡ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಸಚಿವ ದಿನೇಶ್ ಗುಂಡೂರಾವ್ ಅವರು, ತಾಲೂಕು ಆರೋಗ್ಯ ಕೇಂದ್ರಗಳಲ್ಲಿ 24 ಗಂಟೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಹೊಸ ಪ್ರಯೋಗ ಆರಂಭಿಸಿರುವುದಾಗಿ ತಿಳಿಸಿದರು. ಇದು ಯಶಸ್ವಿಯಾಗದಿದ್ದರೆ, ಇದೇ ಸದನದಲ್ಲಿ ಚರ್ಚಿಸಿ ಹಿಂಪಡೆಯುವುದಾಗಿ ಹೇಳಿದರು. ಆದರೆ, ಸಚಿವರ ಉತ್ತರದಿಂದ ತೃಪ್ತರಾಗದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.
ಬಿಜೆಪಿಯ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು, ಆರೋಗ್ಯ ಇಲಾಖೆಯಲ್ಲಿ 7,400 ಮಂಜೂರಾದ ಹುದ್ದೆಗಳಲ್ಲಿ ಕೇವಲ 20 ಹುದ್ದೆಗಳಿಗೆ ಮಾತ್ರ ಮುಂಬಡ್ತಿ ದೊರೆತಿದೆ, ಅದು ಕೂಡ ವರ್ಷಗಳಿಂದ ನಡೆದಿಲ್ಲ ಎಂದರು. ವೈದ್ಯರ ನೇಮಕ ನಿಯಮಾವಳಿಗಳು ಪರಿಷ್ಕರಣೆಯಾಗಿಲ್ಲ. 7,173 ಮಂಜೂರಾದ ವೈದ್ಯರ ಹುದ್ದೆಗಳಲ್ಲಿ ಕೇವಲ 4,922 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಹೆರಿಗೆಗಳು ಕಡಿಮೆ ಆಗುತ್ತಿರುವ ಸಮುದಾಯ ಆರೋಗ್ಯ ಕೇಂದ್ರಗಳ ತಜ್ಞ ವೈದ್ಯರನ್ನು ಅವೈಜ್ಞಾನಿಕವಾಗಿ ವರ್ಗಾವಣೆ ಮಾಡುತ್ತಿರುವುದು ಸರಿಯಲ್ಲ ಎಂದು ದೂರಿದರು. ಕಿರುಕುಳ ನೀಡಲೆಂದೇ ಕೌನ್ಸೆಲಿಂಗ್ ವ್ಯವಸ್ಥೆ ತರಲಾಗಿದೆ ಎಂದು ಆರೋಪಿಸಿದರು. ಲಭ್ಯವಿರಬೇಕಾದ ಔಷಧಿಗಳ ಪ್ರಮಾಣವೂ ಬಹಳ ಕಡಿಮೆ ಇದೆ. 10ನೇ ಗ್ಯಾರಂಟಿ ಆರೋಗ್ಯ ಸೇವೆ ಎಂದು ಹೇಳುತ್ತಿದ್ದರೂ, ಅವ್ಯವಸ್ಥೆ ಹೆಚ್ಚುತ್ತಲೇ ಇದೆ. ಆಸ್ಪತ್ರೆಗಳಲ್ಲಿನಗದು ಕೌಂಟರ್‌ಗಳನ್ನು ರದ್ದುಪಡಿಸಿ, ಯಾವುದೇ ಸೇವಾ ಶುಲ್ಕ ವಿಧಿಸಬಾರದು ಎಂದು ಆಗ್ರಹಿಸಿದರು.
ಬಿಜೆಪಿಯ ಬಿ.ವೈ. ವಿಜಯೇಂದ್ರ, ವಿ. ಸುನೀಲ್ ಕುಮಾರ್, ಬೈರತಿ ಬಸವರಾಜ್, ಶೈಲೇಂದ್ರ ಬೆಲ್ದಾಳೆ, ಸಿಮೆಂಟ್ ಮಂಜು, ಜೆಡಿಎಸ್ ಗುಂಪಿನ ಉಪನಾಯಕಿ ಶಾರದಾ ಪೂರ್ಯ ನಾಯ್ಕ್, ಜಿ.ಟಿ. ದೇವೇಗೌಡ, ಶರಣಗೌಡ ಕಂದಕೂರ, ಕಾಂಗ್ರೆಸ್‌ನ ಶ್ರೀನಿವಾಸ್, ಬಿ.ಆರ್. ಪಾಟೀಲ್, ಮಹಾಂತೇಶ ಕೌಜಲಗಿ ಸೇರಿದಂತೆ ಹಲವು ಸದಸ್ಯರು ಆರೋಗ್ಯ ಇಲಾಖೆಯ ಅವ್ಯವಸ್ಥೆಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವ ದಿನೇಶ್ ಗುಂಡೂರಾವ್, ಇಲಾಖೆಯಲ್ಲಿ ಸುಧಾರಣೆ ತರುವ ಬಗ್ಗೆ ಹರ್ಷ ಗುಪ್ತ ಅವರು ಪತ್ರ ಬರೆದಿದ್ದಾರೆ ಎಂದರು. ಸಚಿವಾಲಯ ನೌಕರರ ಸಂಘವು ಪತ್ರ ನೀಡಿದ ನಂತರ ಸುಮ್ಮನಾಗಿದೆ. ಸಚಿವಾಲಯದ ಬಹಳಷ್ಟು ಅಧಿಕಾರಿಗಳು ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡದ ಕಚೇರಿಗಳಲ್ಲೇ ಇರಲು ಬಯಸುವುದು ಸರಿಯೇ ಎಂದು ಪ್ರಶ್ನಿಸಿದರು. ಒಳ್ಳೆಯ ಕೆಲಸ ಆಗುವುದಾದರೆ ಬೇಡ ಎಂದರೆ ಹೇಗೆ ಎಂದು ಅವರು ಕೇಳಿದರು.
ತಾಲೂಕು ಆರೋಗ್ಯ ಕೇಂದ್ರಗಳಲ್ಲಿ 24 ಗಂಟೆ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಯೋಗ ಕೈಗೊಳ್ಳಲಾಗುತ್ತಿದೆ. ಮಾಸಿಕ 30ಕ್ಕಿಂತ ಕಡಿಮೆ ಹೆರಿಗೆಗಳಾಗುವ 163 ಸಿಎಚ್‌ಸಿಗಳಲ್ಲಿ ತಲಾ ಒಬ್ಬ ಅರಿವಳಿಕೆ ತಜ್ಞರು, ಪ್ರಸೂತಿ ತಜ್ಞರನ್ನು ಟಿಎಚ್‌ಸಿಗೆ ವರ್ಗಾವಣೆ ಮಾಡಲಾಗುತ್ತದೆ. ಅದಕ್ಕೆ ಬದಲಾಗಿ ಇಬ್ಬರು ಎಂಬಿಬಿಎಸ್ ವೈದ್ಯರನ್ನು ಸಿಎಚ್‌ಸಿಗೆ ನಿಯೋಜಿಸಲಾಗುತ್ತದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಸಚಿವರು ಹೇಳಿದರು. ಈ ಪ್ರಯೋಗ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದಿದ್ದರೆ ಮುಂದೆ ಸದನದಲ್ಲೇ ಚರ್ಚಿಸಿ ಹಿಂಪಡೆಯಲು ಅವಕಾಶವಿದೆ. ಸುಧಾರಣಾ ಕ್ರಮಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ವಿನಂತಿಸಿದರು.