ಸಚಿವ ಸ್ಥಾನಾಕಾಂಕ್ಷಿ ಹಿರಿಯರಿಂದ ಸಿಎಂ ಭೇಟಿ

Contributed byshashidhar.nandikal@timesgroup.com|Vijaya Karnataka

ಸಚಿವ ಸ್ಥಾನದ ಆಕಾಂಕ್ಷಿಗಳಾದ ಹಿರಿಯ ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಬಜೆಟ್ ಅಧಿವೇಶನದ ಬಳಿಕ ಸಂಪುಟ ಪುನಾರಚನೆ ಮಾಡಿ ತಮಗೆ ಅವಕಾಶ ಕಲ್ಪಿಸುವಂತೆ ಅವರು ಒತ್ತಡ ಹೇರಿದ್ದಾರೆ. ಹಿರಿತನ, ಅನುಭವ, ಪ್ರಾದೇಶಿಕತೆ, ಸಾಮಾಜಿಕ ನ್ಯಾಯದ ಆಧಾರದ ಮೇಲೆ ಸ್ಥಾನ ನೀಡಬೇಕೆಂದು ಶಾಸಕರು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳು ವರಿಷ್ಠರ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ.

senior mlas seek cms attention for cabinet reshuffle

ವಿಕ ಸುದ್ದಿಲೋಕ ಬೆಂಗಳೂರು ಸಚಿವ ಸ್ಥಾನಾಕಾಂಕ್ಷಿಗಳಾದ ಆಡಳಿತಾರೂಢ ಕಾಂಗ್ರೆಸ್ ನ ಹಿರಿಯ ಶಾಸಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬೇಡಿಕೆ ಸಲ್ಲಿಸಿದ್ದಾರೆ. ಶೀಘ್ರದಲ್ಲೆಸಂಪುಟ ಪುನಾರಚಿಸಿ ತಮಗೆ ಅವಕಾಶ ಮಾಡಿ ಕೊಡುವಂತೆ ಈ ವೇಳೆ ಒತ್ತಾಯಿಸಿದ್ದಾರೆ. ರಾಜ್ಯ ಸರಕಾರಕ್ಕೆ 3 ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿಬಜೆಟ್ ಅಧಿವೇಶನದ ಬಳಿಕ ತಕ್ಷಣವೇ ಸಂಪುಟ ಸರ್ಜರಿ ಕೈಗೊಳ್ಳಬೇಕು. ಹಿರಿತನ, ಅನುಭವ, ಪ್ರಾದೇಶಿಕತೆ, ಸಾಮಾಜಿಕ ನ್ಯಾಯ ಆಧರಿಸಿ ತಮಗೆ ಸ್ಥಾನ ನೀಡಬೇಕು ಎಂದು ಈ ಶಾಸಕರು ಹಕ್ಕೊತ್ತಾಯ ಮಂಡಿಸಿದ್ದಾರೆ. ಹೀಗೆ ಸಿಎಂ ಅವರಿಗೆ ಆಗ್ರಹ ಪಡಿಸಿದವರು 3ಕ್ಕಿಂತ ಹೆಚ್ಚು ಬಾರಿ ಶಾಸನಸಭೆ ಸದಸ್ಯರಾದವರು. ವಿಧಾನಸಭೆ ಮೊಗಸಾಲೆಯ ತಮ್ಮ ಕೊಠಡಿಯಲ್ಲಿಭೇಟಿಯಾದ ಶಾಸಕರ ಒತ್ತಾಯವನ್ನು ಸಿಎಂ ಸಿದ್ದರಾಮಯ್ಯ ಆಲಿಸಿದರು. ಅಧಿವೇಶನದ ಬಳಿಕ ದಿಲ್ಲಿಗೆ ತೆರಳಿ ವರಿಷ್ಠರ ಗಮನಕ್ಕೆ ತರುಧಿವ ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ. ಮೊದಲ ಬಾರಿ ಆಯ್ಕೆಯಾದ ಕಾಂಗ್ರೆಸ್ ನ ಶಾಸಕರು ಸಚಿವ ಸ್ಥಾನ ಕೋರಿ ಸಿಎಂ, ಡಿಸಿಎಂ ಹಾಗೂ ಹೈಕಮಾಂಡ್ ಗೆ ಪತ್ರ ಬರೆದ ವಿಚಾರ ಇತ್ತೀಚೆಗೆ ಸುದ್ದಿಯಾಗಿತ್ತು. ಈ ಬಾರಿ ಕಾಂಗ್ರೆಸ್ ನಿಂದ 36 ಮಂದಿ ಆಯ್ಕೆಯಾಗಿದ್ದು, 31 ಶಾಸಕರು ಸಹಿ ಮಾಡಿದ ಪತ್ರ ನೀಡಿದ್ದರು. ಈ ಕೋಟಾದಲ್ಲಿಕನಿಷ್ಠ ಐವರಿಗೆ ಸ್ಥಾನ ನೀಡುವಂತೆಯೂ ಒತ್ತಡ ತಂದಿದ್ದರು. ಇದರ ಬೆನ್ನಿಗೇ ಹಿರಿಯ ಶಾಸಕರು ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದಲ್ಲದೆ ಕಳೆದ ವಾರ ಖಾಸಗಿ ಕ್ಲಬ್ ವೊಂದರಲ್ಲಿಸಭೆ ನಡೆಸಿದ್ದರು. ಆಡಳಿತ ಪಕ್ಷದ ಶಾಸಕರು ಒಂದಲ್ಲಒಂದು ಕಾರಣಕ್ಕೆ ಡಿನ್ನರ್ ಸಭೆ ನಡೆಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಸಚಿವ ಸ್ಥಾನ ಬಯಸಿರುವ ಹಿರಿಯರೂ ಭೋಜನಕೂಟದ ನೆಪದಲ್ಲಿಮಾತುಕತೆ ನಡೆಸಿಕೊಂಡಿದ್ದರು. ಸಿಎಂ ಸ್ಪಂದನೆ ಮಹತ್ವ ಅದೇ ಹಿರಿಯ ಶಾಸಕರ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಅಧಿವೇಶನದ ಮಧ್ಯೆ ಭೇಟಿಯಾಗಿ ಹಕ್ಕೊತ್ತಾಯ ಸಲ್ಲಿಸಿದೆ. ಇದಕ್ಕೆ ಮುಖ್ಯಮಂತ್ರಿಯವರೂ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಮತ್ತು ವರಿಷ್ಠರ ಗಮನಕ್ಕೆ ತರುವುದಾಗಿ ಹೇಳಿರುವುದು ಮಹತ್ವ ಪಡೆದುಕೊಂಡಿದೆ. ತಾವು ಕೂಡ ಹೈಕಮಾಂಡ್ ಭೇಟಿಯಾಗಿ ಸಚಿವ ಸ್ಥಾನಕ್ಕೆ ಮನವಿ ಮಾಡಿಕೊಳ್ಳುವುದಾಗಿ ಸಿಎಂ ಮುಂದೆ ಹಿರಿಯ ಶಾಸಕರು ಹೇಳಿ ಕೊಂಡಿದ್ದಾರೆ. ಅದಕ್ಕೆ ಅಭ್ಯಂತರವಿಲ್ಲವೆಂದು ಸಿಎಂ ಹೇಳಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಡಿಸಿಎಂ ಡಿ.ಕೆ.ಶಿವಕುಮಾರ್ , ತಮ್ಮ ಅಪೇಕ್ಷೆ ಈಡೇರಿಸಿಕೊಳ್ಳಲು ಮುಹೂರ್ತಕ್ಕಾಗಿ ಕಾಯುತ್ತಿದ್ದಾರೆ. ಬಜೆಟ್ ಅಧಿವೇಶನದ ಬಳಿಕ ದಿಲ್ಲಿಯವರು ಕರೆಸಿ ಮಾತನಾಡಬಹುದು ಎನ್ನುವುದು ಅವರ ನಿರೀಕ್ಷೆ. ಆದರೆ, ಇನ್ನೊಂದೆಡೆ ಸಂಪುಟ ಪುನಾರಚನೆ ಚರ್ಚೆ ಪ್ರಾರಂಭವಾಗಿದೆ. ಹಾಗಾಗಿ ಕಾಂಗ್ರೆಸ್ ಬೆಳವಣಿಗೆ ಬಗ್ಗೆ ಕುತೂಹಲ ತಣಿಯದಂತಾಗಿದೆ. ಶಾಸಕರಾದ ಹಂಪನಗೌಡ ಬಾದರ್ಲಿ, ಜಿ.ಎಸ್ .ಪಾಟೀಲ್ , ಎಂ.ವೈ.ಪಾಟೀಲ್ , ಮಾಗಡಿ ಬಾಲಕೃಷ್ಣ, ಎನ್ .ಎ.ಹ್ಯಾರೀಸ್ , ಮಹಾಂತೇಶ ಕೌಜಲಗಿ, ಬಂಗಾರಪೇಟೆ ನಾರಾಯಣಸ್ವಾಮಿ, ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಸುಮಾರು 16 ಮಂದಿ ಸಿಎಂರನ್ನು ಭೇಟಿಯಾಗಿದ್ದರು.