ಜನ್ಮದಿನಕ್ಕೆ ಪುಸ್ತಕ ವಿತರಣೆ

Contributed byhudemkrishnamurthy@gmail.com|Vijaya Karnataka

ಬಿ.ಬಿ.ಜಿ.ಗೌತಮ್‌ ಅವರು ತಮ್ಮ ಜನ್ಮದಿನದ ಅಂಗವಾಗಿ ಬಡೇಲಡುಕು ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್‌ ವಿತರಿಸಿದರು. ಶಿಕ್ಷಣವೇ ಶಕ್ತಿ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ಮೊಬೈಲ್‌, ಟಿವಿಗಳಿಂದ ದೂರವಿರಲು, ಕಲಿಕೆಗೆ ಒತ್ತು ನೀಡಲು ಸಲಹೆ ನೀಡಿದರು. ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆಯಾಗಿ ಹೆತ್ತವರಿಗೂ, ಶಾಲೆಗೂ ಕೀರ್ತಿ ತರಲು ಪ್ರೋತ್ಸಾಹಿಸಿದರು. ಪಟ್ಟಣದ ಬೋರಮ್ಮ ತಮ್ಮಪ್ಪ ಸ್ಮಾರಕ ಪ್ರೌಢಶಾಲೆಯೂ ಸೇರಿದಂತೆ ತಾಲೂಕಿನಾದ್ಯಂತ 200ಕ್ಕೂ ಹೆಚ್ಚು ಪುಸ್ತಕಗಳನ್ನು ವಿತರಿಸಲಾಯಿತು.

birthday special distribution of books for childrens education

ಜನ್ಮದಿನಕ್ಕೆ ಪುಸ್ತಕ ವಿತರಣೆ

ವಿಕ ಸುದ್ದಿಲೋಕ ಕೂಡ್ಲಿಗಿ

ತಮ್ಮ ಜನ್ಮದಿನದ ನಿಮಿತ್ತ ತಾಲೂಕಿನ ಬಡೇಲಡುಕು ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಎಜುಕೈಂಡ್ ಎಜುಕೇಷನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಬಿ.ಬಿ.ಜಿ.ಗೌತಮ್ ಅವರು ಪುಸ್ತಕ, ಪೆನ್ ವಿತರಿಸಿ ಶಿಕ್ಷಣಪ್ರೇಮ ಮೆರೆದಿದ್ದಾರೆ.

ಸರಕಾರಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಹಾಯಕ ಕೈಪಿಡಿಗಳನ್ನು ವಿತರಿಸಿ ಗೌತಮ್ ಮಾತನಾಡಿ, ‘‘ ಶಿಕ್ಷಣ ವೇ ಶಕ್ತಿ ಎಂಬುದನ್ನು ಎಲ್ಲರೂ ಅರಿಯಬೇಕು. ಹಳ್ಳಿಗಾಡಿನ ಬಹುತೇಕ ಬಡವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕನಸು ಕಂಡಿರುತ್ತಾರೆ. ಹೀಗಾಗಿ, ತಾವೆಲ್ಲರೂ ಮೊಬೈಲ್ , ಟಿವಿಗಳಿಂದ ದೂರ ಉಳಿಯುವ ಮೂಲಕ ಶಿಕ್ಷಣ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆಯಾಗಿ ಹೆತ್ತವರು, ಶಾಲೆಗೂ ಕೀರ್ತಿ ತರಬೇಕು ಎಂದು ತಿಳಿಸಿದರು.

ಪಟ್ಟಣದ ಬೋರಮ್ಮ ತಮ್ಮಪ್ಪ ಸ್ಮಾರಕ ಪ್ರೌಢಶಾಲೆ ಸೇರಿ ತಾಲೂಕಿನಾದ್ಯಂತ 200ಕ್ಕೂ ಹೆಚ್ಚು ಪುಸ್ತಕಗಳನ್ನು ಜನ್ಮದಿನದ ನಿಮಿತ್ತ ವಿತರಿಸಿ ಶಿಕ್ಷಣ ಪ್ರೇಮ ಮೆರೆದರು. ಶಾಲೆಯ ಮುಖ್ಯಶಿಕ್ಷಕ ರಾಮಕೃಷ್ಣ, ಜ್ಞಾನ ಮಂಟಪ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಎಸ್ .ಚಾರೇಶ್ , ಶಿಕ್ಷಕ ಎಚ್ .ಕೆ.ಕೃಷ್ಣ , ಸಿಬ್ಬಂದಿ ಇದ್ದರು.

ಫೋಟೋ

05 ಕೂಡ್ಲಿಗಿ 04

ಕೂಡ್ಲಿಗಿ ತಾಲೂಕಿನ ಬಡೇಲಡುಕು ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಎಜುಕೈಂಡ್ ಎಜುಕೇಷನ್ ಆಂಡ್ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಬಿ.ಬಿ.ಜಿ.ಗೌತಮ್ ಅವರು ತಮ್ಮ ಜನ್ಮದಿನದ ನಿಮಿತ್ತ ಪುಸ್ತಕ, ಪೆನ್ ಗಳನ್ನು ವಿತರಿಸಿದರು.