ಬಿಜೆಪಿ ಮಂಡಲ ಪದಾಧಿಕಾರಿಗಳ ಆಯ್ಕೆ

Contributed byvijaydm.mlr@gmail.com|Vijaya Karnataka

ಮಾಲೂರು ನಗರದಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸಲು ಹೊಸ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಮಾಜಿ ಶಾಸಕ ಕೆ.ಎಸ್‌.ಮಂಜುನಾಥಗೌಡರ ಮಾರ್ಗದರ್ಶನದಲ್ಲಿ ಈ ನೇಮಕಾತಿ ಮಾಡಲಾಗಿದೆ. ನಗರ ಮಂಡಲ ಅಧ್ಯಕ್ಷರಾಗಿ ಆರ್‌.ನಂದೀಶ್‌ ಸೇರಿದಂತೆ ಹಲವರನ್ನು ಆಯ್ಕೆ ಮಾಡಲಾಗಿದೆ. ಪಕ್ಷವನ್ನು ಸದೃಢಗೊಳಿಸಲು ಎಲ್ಲರೂ ಶ್ರಮಿಸಲಿದ್ದಾರೆ. ನಗರಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ನೂತನ ಅಧ್ಯಕ್ಷರು ತಿಳಿಸಿದ್ದಾರೆ.

bjp mandal president selection guidance of ks manjunath gowda

ವಿಕ ಸುದ್ದಿಲೋಕ ಮಾಲೂರು

ನಗರದಲ್ಲಿಬಿಜೆಪಿಯನ್ನು ಸದೃಢವಾಗಿ ಕಟ್ಟಲು ಮಾಜಿ ಶಾಸಕ ಕೆ.ಎಸ್ .ಮಂಜುನಾಥಗೌಡ ಮಾರ್ಗದರ್ಶನದಲ್ಲಿನಗರ ಮಂಡಲ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ ಹೇಳಿದರು.

ಮಾಜಿ ಶಾಸಕ ಕೆ.ಎಸ್ .ಮಂಜುನಾಥಗೌಡರ ಮಾರ್ಗದರ್ಶನದಲ್ಲಿತಾಲೂಕು ಬಿಜೆಪಿ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ ನೇತೃತ್ವದಲ್ಲಿನಗರ ಮಂಡಲ ಅಧ್ಯಕ್ಷರಾಗಿ ಆಟೋಮೊಬೈಲ್ ಆರ್ .ನಂದೀಶ್ , ಕಾರ್ಯಾಧ್ಯಕ್ಷರಾಗಿ ಎಂ.ಎನ್ .ವೇಣುಗೋಪಾಲ್ , ಜಗನ್ ರೆಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎನ್ .ವಿಜಯಕುಮಾರ್ , ಎಂ.ಎಸ್ .ಮಹೇಶ್ , ಹಾಗೂ ಉಪಾಧ್ಯಕ್ಷ, ಕಾರ್ಯದರ್ಶಿಗಳು, ಖಜಾಂಚಿ, ಕಾರ್ಯಕಾರಣಿ ಸದಸ್ಯರನ್ನ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿಬಿಜೆಪಿ ನಗರ ಅಧ್ಯಕ್ಷ ಆಟೋ ಮೊಬೈಲ್ ಆರ್ .ನಂದೀಶ್ ಮಾತನಾಡಿ, ಬಿಜೆಪಿಯಲ್ಲಿಕಾರ್ಯಕರ್ತನಾಗಿದ್ದ ನನಗೆ ಪಕ್ಷವು ಗುರ್ತಿಸಿ ನನಗೆ ನಗರ ಮಂಡಲ ಅಧ್ಯಕ್ಷ ಸ್ಥಾನ ನೀಡಿದ್ದು ನನ್ನ ಸ್ಥಾನಕ್ಕೆ ಯಾವುದೇ ಚ್ಯುತಿ ಬರದಂತೆ ನೋಡಿಕೊಂಡು ಪಕ್ಷವನ್ನು ಸದೃಢವಾಗಿ ಕಟ್ಟಲು ಪಕ್ಷಕ್ಕೆ ದುಡಿಯುತ್ತೇನೆ ಎಂದರು.

ನಗರಸಭೆ ಚುನಾವಣೆಯಲ್ಲಿಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿಗೆಲ್ಲಿಸುವ ಮೂಲಕ ಪಕ್ಷವನ್ನು ಬಲಿಷ್ಠವಾಗಿ ಬೆಳೆಸಲಾಗುವುದು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿಬಿಜೆಪಿ ಅಭ್ಯರ್ಥಿ ಮಾಜಿ, ಶಾಸಕ ಕೆ.ಎಸ್ .ಮಂಜುನಾಥಗೌಡರನ್ನು ಗೆಲ್ಲಿಸೋಕೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಹಾಗೂ ನನಗೆ ಬಿಜೆಪಿಯಲ್ಲಿನಗರ ಅಧ್ಯಕ್ಷ ಸ್ಥಾನ ನೀಡಿದ ಮಾಜಿ ಶಾಸಕ ಕೆ.ಎಸ್ .ಮಂಜುನಾಥಗೌಡರಿಗೆ, ತಾಲೂಕು ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ ಅವರಿಗೆ ಹಾಗೂ ಬಿಜೆಪಿ ಮುಖಂಡರಿಗೆ ಧನ್ಯವಾದಗಳು ತಿಳಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿಜಿಪಂ ಮಾಜಿ ಸದಸ್ಯ ಚಿನ್ನಸ್ವಾಮಿಗೌಡ, ಜಿಲ್ಲಾಉಪಾಧ್ಯಕ್ಷ ಮಡಿವಾಳ ಚಂದ್ರಶೇಖರಗೌಡ, ನಗರಸಭೆ ಮಾಜಿಸದಸ್ಯ ಎಂ.ಎಸ್ .ಪ್ರದೀಪ್ ರೆಡ್ಡಿ, ವೇಣುಗೋಪಾಲ್ , ಅಂಚೆಮುಸ್ಕೂರು ಬಾಬು, ಬೆಳ್ಳಾವಿಸೋಮಣ್ಣ, ಅಲೂಮಂಜು, ಸಾಯಿವೆಂಕಟೇಶ್ , ಮೂರ್ತಿ, ಶಾಂತರಾಜ್ , ಇರಬನಹಳ್ಳಿ ಆನಂದ್ , ಮಹೇಂದ್ರ, ಓಬಳಾಪುರ ಶಂಕರ್ , ಅಧಿಕಾರಹಟ್ಟಿ ಬಾಬು, ಅಜ್ಗರ್ , ರವಿ, ನವೀನ್ , ರಾಮಾಂಜಿ, ಕಿರಣ್ ರಾವ್ , ಮಹೇಶ್ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಹಾಜರಿದ್ದರು.

5 ಮಾಲೂರು ಫೋಟೋ 2. ಮಾಲೂರು ನಗರದ ತಾಲೂಕು ಬಿಜೆಪಿ ಕಾರ್ಯದಲ್ಲಿಬಿಜೆಪಿ ತಾಲೂಕ ಅಧ್ಯಕ್ಷ ಟಿ.ಬಿ.ಕೃ?Ü್ಣಪ್ಪ ಅವರು ಪತ್ರಿಕಾಗೋಷ್ಠಿ ನಡೆಸಿ ನಗರ ಮೋರ್ಚಾ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಿದರು.