ಹೆಚ್ ಟಿ, ಎಲ್ ಟಿ ಲೈನ್ ಪರಿವರ್ತನೆ ಕಾಮಗಾರಿ ಅತಿಶೀಘ್ರ

Contributed bybommekallu@gmail.com|Vijaya Karnataka

ಚಿಂತಾಮಣಿ ತಾಲೂಕಿನಲ್ಲಿ ಹೆಚ್‌ಟಿ ಮತ್ತು ಎಲ್‌ಟಿ ಲೈನ್‌ ಪರಿವರ್ತನೆಗೆ 32 ಕೋಟಿ ರೂ. ಮಂಜೂರಾಗಿದೆ. ಟೆಂಡರ್‌ ಪ್ರಕ್ರಿಯೆ ಮುಗಿದು ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ. 3.5 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್‌ ಇಲಾಖೆಯ ವಸತಿ ಸಮುಚ್ಛಯ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಎಂ5 ಪವರ್‌ ಸ್ಟೇಷನ್‌ಗಳ ನಿರ್ಮಾಣಕ್ಕೆ ಸ್ಥಳಾವಕಾಶ ಗುರುತಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪವರ್‌ ಸ್ಟೇಷನ್‌ಗಳನ್ನು ನಿರ್ಮಾಣ ಮಾಡಲಾಗುವುದು.

ministers groundbreaking ceremony for ht and lt line development new initiatives from the power department

ವಿದ್ಯುತ್ ಇಲಾಖೆಯ ವಸತಿ ಸಮುಚ್ಛಯ ನಿರ್ಮಾಣಕ್ಕೆ ಸಚಿವ ಸುಧಾಕರ್ ಭೂಮಿಪೂಜೆ

ವಿಕ ಸುದ್ದಿಲೋಕ ಚಿಂತಾಮಣಿ

ತಾಲೂಕಿನಲ್ಲಿಹೆಚ್ ಟಿ ಮತ್ತು ಎಲ್ ಟಿ ಲೈನ್ ಪರಿವರ್ತನೆಗೆ 32 ಕೋಟಿ ರೂ. ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದು ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು.

3.5 ಕೋಟಿ ರೂ. ವೆಚ್ಚದಲ್ಲಿವಿದ್ಯುತ್ ಇಲಾಖೆಯ ವಸತಿ ಸಮುಚ್ಛಯ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಎಂ5 ಪವರ್ ಸ್ಟೇಷನ್ ಗಳನ್ನು ನಿರ್ಮಾಣ ಮಾಡಲು ಸ್ಥಳಾವಕಾಶ ಗುರುತಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿಮತ್ತಷ್ಟು ಪವರ್ ಸ್ಟೇಷನ್ ಗಳನ್ನು ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ 5-6 ಸ್ಥಳಗಳನ್ನು ಗುರುತಿಸಿದ್ದು, ಅದರಲ್ಲಿ2 ಸ್ಟೇಷನ್ ಗಳಿಗೆ ಜಮೀನು ಒದಗಿಸಲಾಗಿದೆ ಎಂದರು.

1 ಸ್ಟೇಷನ್ ಗೆ 5 ಎಕರೆ ಜಮೀನು ಅವಶ್ಯಕತೆ ಇದೆ, 5 ಎಕರೆ ವಿಸ್ತೀರ್ಣ ಹುಡುಕುವುದು ಕಷ್ಟವಾಗಲಿದೆ. ಏಕೆಂದರೆ ಒಂದೇ ಕಡೆ 5 ಎಕರೆ ಭೂಮಿ ಸಿಗುವುದು ಕಷ್ಟ. ಆದರೆ 5 ಸ್ಟೇಷನ್ ಗಳನ್ನು ನಿರ್ಮಾಣ ಮಾಡಿದಾಗ ಸಮರ್ಪಕ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ ಎಂದರು.

ವಿದ್ಯುತ್ ನಿಗಮದಿಂದ 1 ಎಕರೆ ಭೂಮಿ ಪಡೆದು ಮಹಿಳಾ ಕಾಲೇಜಿಗೆ ನೀಡಲಾಗಿದೆ, ಇದರಿಂದ ಸಾಕಷ್ಟು ವಿದ್ಯಾರ್ಥಿನಿಯರಿಗೆ ಶಿಕ್ಷಣಕ್ಕೆ ಹೊಸ ಅವಕಾಶ ಲಭಿಸಲಿದ್ದು, ಸುಸಜ್ಜಿತ ಕಟ್ಟಡ ನಿರ್ಮಾಣ ಆಗಲಿದೆ ಎಂದರು.

ವಿದ್ಯುತ್ ಇಲಾಖೆಯ ವಸತಿ ಸಮುಚ್ಛಯದ 1 ಬ್ಲಾಕ್ ಅನ್ನು ಅಪಾರ್ಟ್ ಮೆಂಟ್ ಮಾದರಿಯಲ್ಲಿನಿರ್ಮಾಣ ಮಾಡಲಾಗುತ್ತಿದ್ದು, 8 ಪವರ್ ಮೆನ್ ಗಳಿಗೆ 8 ಮನೆ ನಿರ್ಮಾಣ ಮಾಡಲಾಗುವುದು. ಪ್ರಸ್ತುತ ಜಿ ಪ್ಲಸ್ 2 ಮಾದರಿ ಕಟ್ಟಡ ನಿರ್ಮಾಣವಾಗಲಿದೆ, ಗ್ರೌಂಡ್ ಪ್ಲೋರ್ ನಲ್ಲಿಪಾರ್ಕಿಂಗ್ ವ್ಯವಸ್ಥೆ ಇರಲಿದೆ. ಒಂದೊಂದು ಪ್ಲೋರ್ ನಲ್ಲಿ4 ಮನೆಗಳ ನಿರ್ಮಾಣವಾಗಲಿವೆ ಎಂದರು.

ರಾಷ್ಟ್ರ ಮಟ್ಟದ ಶಕ್ತಿಮಿತ್ರ ದಿನಾಚರಣೆ: ರಾಷ್ಟ್ರ ಮಟ್ಟದ ಶಕ್ತಿಮಿತ್ರ ದಿನಾಚರಣೆ ಮಾಡಿರುವುದು ಅರ್ಥಪೂರ್ಣ. ಶಕ್ತಿ ಮಿತ್ರ(ಲೈನ್ ಮೆನ್ )ರಿಗೆ ಶುಭಾಶಯ ತಿಳಿಸಿದ ಸಚಿವರು, ಇಂದೇ ನಿಮ್ಮ ವಸತಿ ಸಮುಚ್ಛಯಗಳ ನಿರ್ಮಾಣಕ್ಕೆ ಭೂಮಿಪೂಜೆ ನಡೆದಿರುವುದು ವಿಶೇಷ ಸಂದರ್ಭ ಎಂದರು.

ಶಕ್ತಿ ಮಿತ್ರರು ಅದೆಷ್ಟೋ ಕಷ್ಟದ ಕೆಲಸಗಳನ್ನು ಮಾಡುತ್ತಾರೆ, ಯಾರದೋ ನಿರ್ಲಕ್ಷ್ಯಕ್ಕೆ ಬಲಿಯಾಗುವುದನ್ನು ನಾವು ನೋಡಿದ್ದೇವೆ. ಹಾಗಾಗಿ, ಲೈನ್ ಮೆನ್ ಗಳು ಜಾಗರೂಕರಾಗಿ ಕೆಲಸ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಬಜೆಟ್ ಮಂಡನೆಯಾದ ನಂತರ ಸಂಬಂಧಪಟ್ಟ ಇಲಾಖೆ ಮೇಲೆ ಒತ್ತಡ ತಂದು ಈ ವರ್ಷದಲ್ಲಿಉಳಿದ ವಸತಿ ಬ್ಲಾಕ್ ಗಳ ನಿರ್ಮಾಣಕ್ಕೆ ಮಂಜೂರಾತಿ ಪಡೆದು ಎಲ್ಲರಿಗೂ ವಸತಿ ವ್ಯವಸ್ಥೆ ಕಲ್ಪಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ರೈತರಿಗೆ ಹೆಚ್ಚು ಕಿರುಕುಳ ನೀಡದ ರೀತಿಯಲ್ಲಿಕೆಲಸ ನಿರ್ವಹಿಸಬೇಕು, ಯಾರಿಗೂ ತೊಂದರೆಯಾಗದಂತೆ ತ್ವರಿತವಾಗಿ ಕೆಲಸ ಮಾಡಿಕೊಡಬೇಕು ಎಂದು ಸಚಿವರು ಲೈನ್ ಮೆನ್ ಗಳಿಗೆ ಕಿವಿಮಾತು ಹೇಳಿದರು.

05ಸಿಎ???ವೈವಿ6

ಚಿಂತಾಮಣಿ ನಗರದ ಕೆಇಬಿ ಕಚೇರಿ ಬಳಿ ಕೆಇಬಿ ವಸತಿ ಸಮುಚ್ಛಯಕ್ಕೆ ಸಚಿವ ಡಾ. ಎಂ.ಸಿ. ಸುಧಾಕರ್ ಗುದ್ದಲಿಪೂಜೆ ನೆರವೇರಿಸಿದರು.