ವಿಕ ಫೋಕಸ್ ( ಲೋಕಲ್ ಲೀಡ್ )
ಜಿಲ್ಲಾಕ್ರೀಡಾಂಗಣ ಭಾಗ್ಯವಿಲ್ಲ
25 ಕೋಟಿ ಅನುದಾನ ಬಿಡುಗಡೆ |ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ನಿರಾಸಕ್ತಿ
ಆದರ್ಶ ಕೋಡಿ ಬೆಂಗಳೂರು ಗ್ರಾಮಾಂತರ
್ಚಧಿada್ಟsha.kಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಬೆಂಗಳೂರು ಗ್ರಾಮಾಂತರ ಜಿಲ್ಲೆರಚನೆಯಾಗಿ ಮೂರು ದಶಕವೇ ಕಳೆಯುತ್ತಿದ್ದರೂ, ಜಿಲ್ಲಾಕ್ರೀಡಾಂಗಣ ಸೌಲಭ್ಯ ಇನ್ನೂ ಮರೀಚಿಕೆಯಾಗಿಯೇ ಇದೆ. ಕ್ರೀಡಾಂಗಣ ನಿರ್ಮಾಣಕ್ಕೆ ಇಲ್ಲಿನ ಕ್ರೀಡಾಭಿಮಾನಿಗಳು ಹಾಗೂ ಕ್ರೀಡಾಪಟುಗಳಿಂದ ಒತ್ತಾಯ ಹೆಚ್ಚಾಗಿದೆ.
ರಾಜಧಾನಿಯ ಪಕ್ಕದಲ್ಲಿರುವ ಬೆಂಗಳೂರು ಗ್ರಾಮಾಂತರ ನಾಲ್ಕು ತಾಲೂಕುಗಳನ್ನು ಒಳಗೊಂಡಂತೆ ಸುಮಾರು 12 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಜಿಲ್ಲೆಯಲ್ಲಿ10,000 ಎಕರೆಷ್ಟು ಕೈಗಾರಿಕಾ ಪ್ರದೇಶವನ್ನು ಹೊಂದಿದ್ದು, ನಾನಾ ಆಯಾಮಗಳಲ್ಲಿಜಿಲ್ಲೆಅಭಿವೃದ್ಧಿ ಹೊಂದುತ್ತಿದೆ. ಆದರೆ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲೆಯು ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಹಿಂದುಳಿದಿದೆ. ಜಿಲ್ಲೆಗೆ ಅತ್ಯಗತ್ಯವಾದ ಜಿಲ್ಲಾಕ್ರೀಡಾಂಗಣವು ಈವರೆಗೂ ಕೂಡ ನಿರ್ಮಾಣವಾಗದಿರುವುದು ಇದಕ್ಕೆ ನಿದರ್ಶನ.
ತಾಲೂಕು ಮಟ್ಟದಲ್ಲಿರುವ ಕ್ರೀಡಾಂಗಣಗಳು ಅಭಿವೃದ್ಧಿ ನಿರೀಕ್ಷೆಯಲ್ಲಿವೆ. ಅನೇಕ ವಿಭಾಗಗಳ ಕ್ರೀಡಾಪಟುಗಳು ತಮ್ಮ ಕ್ರೀಡಾ ತರಬೇತಿಗಾಗಿ ಬೇರೆ ಜಿಲ್ಲೆಗಳಲ್ಲಿನ ಕ್ರೀಡಾಂಗಣಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಸರಕಾರವು ಇನ್ನಾದರೂ ಈ ಬಗ್ಗೆ ಗಮನಹರಿಸಿ ಗುರುತಿಸಲಾದ ಜಾಗದಲ್ಲಿ25 ಕೋಟಿ ವೆಚ್ಚದಲ್ಲಿಜಿಲ್ಲಾಕ್ರೀಡಾಂಗಣ ನಿರ್ಮಾಣಕ್ಕೆ ಅಗತ್ಯ ಅನುದಾನ ಪೂರೈಕೆಯೊಂದಿಗೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಇನ್ನೆಷ್ಟು ವರ್ಷ ಬೇಕು?:
ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಬಳಿ ಜಿಲ್ಲಾಕ್ರೀಡಾಂಗಣಕ್ಕೆಂದು ಜಾಗವನ್ನು ಗುರುತಿಸಲಾಗಿತ್ತು. ಇದರ ಬಳಿಯಲ್ಲಿಭದ್ರತಾ ಕೊಠಡಿ ನಿರ್ಮಾಣ ಮಾಡಿ, ತಂತಿ ಬೇಲಿಯ ಮೂಲಕ ಜಾಗವನ್ನು ಮೀಸಲಿಡಲಾಗಿತ್ತು. ಆದರೆ ಇದರಲ್ಲಿಜಿಲ್ಲಾಕ್ರೀಡಾಂಗಣಕ್ಕೆ ಸ್ಥಳಾವಕಾಶದ ಕೊರತೆಯಾಗುತ್ತದೆ ಎಂದು ಬೇರೆ ಜಾಗವನ್ನು ಗುರುತಿಸಲಾಗಿದೆ. ಈ ಹಿಂದೆ ಗುರುತಿಸಿದ ಜಾಗವನ್ನು ಸುಮಾರು ಐದಾರು ವರ್ಷಕ್ಕೂ ಹೆಚ್ಚು ಅವಧಿವರೆಗೂ ಯಾವುದೇ ಕ್ರಮವಾಗದೆ ಕಾಲಹರಣವಾಗಿತ್ತು. ಇದೀಗ ಹೊಸ ಜಾಗವನ್ನು ಗುರುತಿಸಿದ್ದು ಜಿಲ್ಲಾಕ್ರೀಡಾಂಗಣ ನಿರ್ಮಾಣಕ್ಕೆ ಇನ್ನೆಷ್ಟು ವರ್ಷಗಳು ಬೇಕಾಲಿದೆ ಎಂದು ಕಾದು ನೋಡಬೇಕಾಗಿದೆ.
ಕಸದ ಬೆಟ್ಟ:
ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿಸದ್ಯ ಜಿಲ್ಲಾಕ್ರೀಡಾಂಗಣಕ್ಕಾಗಿ ಗುರುತಿಸಲಾಗಿರುವ 20 ಎಕರೆ ಜಮೀನಿನಲ್ಲಿಜಿಲ್ಲಾಕ್ರೀಡಾಂಗಣ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಇನ್ನೂ ಇಲಾಖೆ ದಾಖಲೆಗಳನ್ನು ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಆದರೆ ಅಲ್ಲಿನ ಖಾಸಗಿ ಕಂಪನಿಗಳು ಮಾತ್ರ ಗುರುತಿಸಲಾದ ಜಾಗದಲ್ಲಿಕಸದ ಬೆಟ್ಟವನ್ನು ನಿರ್ಮಾಣ ಮಾಡುತ್ತಿವೆ. ಅವರ ಕಂಪನಿಗಳಲ್ಲಿನ ಉತ್ಪತ್ತಿಯಾಗುವ ಕಸಗಳನ್ನು ತಂದು ಇಲ್ಲಿಸುರಿಯಲಾಗುತ್ತದೆ. ಇದು ದೊಡ್ಡ ಪ್ರಮಾಣದಲ್ಲಿರಾಶಿ ಬಿದ್ದಿದೆ. ಇದರಿಂದ ಇದು ಜಿಲ್ಲಾಕ್ರೀಡಾಂಗಣಕ್ಕೆ ಎಂದು ಗುರುತಿಸಲಾಗಿರುವ ಜಾಗ ಎಂದು ಹೇಳಲಾಗದಂತಹ ಸ್ಥಿತಿಯಿದೆ.
ಅವಲಂಬನೆಗೆ ಮುಕ್ತಿ ನೀಡಿ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಅನೇಕರು ಕ್ರಿಕೆಟ್ , ಕಬಡ್ಡಿ, ಅಥ್ಲೆಟಿಕ್ಸ್ ಸೇರಿದಂತೆ ನಾನಾ ಕ್ರೀಡೆಗಳಲ್ಲಿರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿಸಾಧನೆ ಮಾಡಿದ್ದಾರೆ. ಆದರೆ ಹೊಸ ಕ್ರೀಡಾಪಟುಗಳಿಗೆ ತರಬೇತಿ ಪಡೆಯಲು, ಪ್ರತಿನಿತ್ಯ ಅಭ್ಯಾಸ ಮಾಡಲು, ದೊಡ್ಡ ಪ್ರಮಾಣದ ಕ್ರೀಡಾಕೂಟಗಳ ಆಯೋಜನೆ ಮಾಡಲು ಸ್ಥಳಾವಕಾಶ ಕೊರತೆಯಿದೆ.
ಸದ್ಯ ಇರುವ ತಾಲೂಕು ಕ್ರೀಡಾಂಗಣಗಳಲ್ಲಿಸಮರ್ಪಕ ವ್ಯವಸ್ಥೆಯಿಲ್ಲ. ಬಹುತೇಕ ವಾಯುವಿಹಾರದ ತಾಣಗಳಾಗಿವೆ. ಇದರರಿಂದ ಕ್ರೀಡಾಪಟುಗಳು ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲ್ಲಿನ ಜಿಲ್ಲೆಗಳಿಗೆ ಹೋಗಿ ಅಭ್ಯಾಸ ಮಾಡಬೇಕಾದ ಪರಿಸ್ಥಿತಿಯಿದೆ. ಆದಷ್ಟು ಶೀಘ್ರವಾಗಿ ಜಿಲ್ಲಾಕ್ರೀಡಾಂಗಣ ನಿರ್ಮಿಸಿ ಅನುಕೂಲ ಮಾಡಿಕೊಡಬೇಕೆಂಬ ಒತ್ತಾಯ ವ್ಯಕ್ತವಾಗಿದೆ.
ಕೋಟ್ ,
ಜಿಲ್ಲಾಕ್ರೀಡಾಂಗಣಕ್ಕೆ 5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. 17 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸುಸಜ್ಜಿತ ಸೌಲಭ್ಯ ಕ್ರೀಡಾಂಗಣ ಒಳಗೊಂಡಿರಲಿದೆ.
- ಗೀತಾ | ಉಪನಿರ್ದೇಶಕಿ, ಕ್ರೀಡಾ ಇಲಾಖೆ, ಬೆಂಗಳೂರು ಗ್ರಾಮಾಂತರ
ಕೋಟ್ ,
ಕ್ರೀಡೆಯಲ್ಲಿಯೇ ಸಾಧನೆ ಮಾಡುವ ದೇಷ್ಟಿಯಿಂದ ಕಳೆದ ಅನೇಕ ವರ್ಷಗಳಿಂದ ಅಭ್ಯಾಸ ಮಾಡಲಾಗುತ್ತಿದೆ. ಆದರೆ ಅಭ್ಯಾಸ ಮಾಡಲು ಕ್ರೀಡಾಂಗಣದ ಸೌಲಭ್ಯವೇ ಇಲ್ಲ. ಆದಷ್ಟು ಬೇಗ ಕ್ರೀಡಾಂಗಣವನ್ನು ನಿರ್ಮಾಣ ಮಾಡಬೇಕು.
- ಪ್ರಜ್ವಲ್ | ರಾಜ್ಯ ಮಟ್ಟದ ಕ್ರೀಡಾಪಟು, ದೊಡ್ಡಬಳ್ಳಾಪುರ
ಫೋಟೋ: 0503ವಿಕೆ1: ಬೆಂಗಳೂರು ಗ್ರಾಮಾಂತರ ಜಿಲ್ಲಾಕ್ರೀಡಾಂಗಣ ನಿರ್ಮಾಣಕ್ಕೆ ಗುರುತಿಸಿರುವ ಜಾಗದಲ್ಲಿನ ಕಸದ ರಾಶಿ.

