(ಧಿಪ್ರಧಿಮುಧಿಖ..) ಬೆಂಗಳೂರು ಉತ್ತರ ವಲಯದಲ್ಲಿಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ನೋಂದಣಿ ಇಳಿಕೆ

Contributed bydjtrupti@gmail.com|Vijaya Karnataka

ಬೆಂಗಳೂರು ಉತ್ತರ ವಲಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಣಿ ಸಂಖ್ಯೆ ಕಡಿಮೆಯಾಗಿದೆ. 9ನೇ ತರಗತಿ ದಾಖಲಾತಿಗೂ, ಎಸ್ಸೆಸ್ಸೆಲ್ಸಿ ಪರೀಕ್ಷೆ ನೋಂದಣಿಗೂ ವ್ಯತ್ಯಾಸ ಕಂಡುಬಂದಿದೆ. ಈ ಬಗ್ಗೆ ವರದಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಸೂಚಿಸಿದ್ದಾರೆ. ವಿದ್ಯಾರ್ಥಿಗಳು ಕಡಿಮೆಯಾಗಲು ಕಾರಣ ಹುಡುಕಲಾಗುತ್ತಿದೆ. ಪರೀಕ್ಷೆಗಳು ಮಾರ್ಚ್ 18 ರಿಂದ ಆರಂಭವಾಗಲಿವೆ. ಶಾಲಾವಾರು ಅಂಕಿ-ಅಂಶಗಳನ್ನು ಪರಿಶೀಲಿಸಲಾಗುತ್ತಿದೆ.

decrease in sslc student registration in bangalore north zone analysis of statistics

* 9ನೇ ತರಗತಿ ದಾಖಲಾತಿಗೂ, ಎಸ್ಸೆಸ್ಸೆಲ್ಸಿ ಪಧಿರೀಕ್ಷೆ ನೋಂದಣಿಯಧಿಲ್ಲಿವ್ಯತ್ಯಾಸ

* ವಿದ್ಯಾರ್ಥಿಗಳ ಅಂಕಿ-ಅಂಶದ ವರದಿ ಕೇಳಿದ ಕ್ಷೇತ್ರ ಶಿಕ್ಷಣಾಧಿಕಾರಿ

ವಿಕ ಸುದ್ದಿಲೋಕ ಬೆಂಗಳೂರು

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ದಿನಗಣನೆ ಆರಂಭವಾಗಿದ್ದು, ಬೆಂಗಳೂರು ಉತ್ತರ ವಲಯದಲ್ಲಿಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಣಿಯಾದ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗಿರುವುದು ಕಂಡು ಬಂದಿದೆ.

ಈ ಹಿಧಿನ್ನೆಧಿಲೆಧಿಯಲ್ಲಿನೋಂದಣಿಯಾದ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಗೆ ಕಾರಣ ಸಧಿಹಿತ ವರದಿ ನೀಡುವಂತೆ ಬೆಂಗಳೂರು ಉತ್ತರ ವಲಯ-2ರ ಕ್ಷೇತ್ರ ಶಿಕ್ಷಣಾಧಿಕಾರಿ ಲತಾಮಣಿ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

2024-25ನೇ ಸಾಲಿನಲ್ಲಿ9ನೇ ತರಗತಿಗೆ ದಾಖಲಾಗಿದ್ದ ವಿದ್ಯಾರ್ಥಿಗಳ ಸಂಖ್ಯೆ ಹಾಗೂ 2025-26ನೇ ಸಾಲಿನಲ್ಲಿಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಣಿಯಾದವರ ಸಂಖ್ಯೆ ನಡುವೆ ವ್ಯತ್ಯಾಸ ಕಂಡು ಬಂದಿರುವುದು ಸ್ಯಾಟ್ಸ್ ಅಂಕಿ-ಅಂಶಗಳಿಂದ ಬಯಲಾಗಿದೆ.

2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ಕ್ಕೆ ಶಾಲೆಗಳಿಂದ ನೋಂದಾಯಿಸಿರುವ ನಾಮಿನಲ್ ರೋಲ್ ಹಾಗೂ ಖಾಸಗಿಯಾಗಿ ಪರೀಕ್ಷೆಗೆ ನೋಂದಾಯಿಸಿರುವ ನಾಮಿನಲ್ ಪ್ರತಿಗಳನ್ನು ಲಿಖಿತ ಉತ್ತರದ ಜತೆಗೆ ವರದಿ ಸಲ್ಲಿಸುವಂತೆ ಅವರು ಸೂಧಿಚಿಧಿಸಿಧಿದ್ದಾರೆ.

ಮಾ.18 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಲಿದ್ದು, ಉತ್ತರ ವಲಯ ವ್ಯಾಪ್ತಿಯಲ್ಲಿ9ನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆಗೂ, ಇದೀಗ ಪರೀಕ್ಷೆಗೆ ನೋಂದಣಿಯಾದ ವಿದ್ಯಾರ್ಥಿಗಳ ಸಂಖ್ಯೆಗೂ ಇರುವ ವ್ಯತ್ಯಾಸದ ಪಟ್ಟಿ ಸಲ್ಲಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ, ವಿದ್ಯಾರ್ಥಿಗಳು ಕಡಿಮೆಯಾಗಲು ಕಾರಣ ಹುಡುಕಲು ಮುಂದಾಗಿದ್ದಾರೆ.

ಬಾಕ್ಸ್ :

ಶಾಲಾವಾರು ಅಂಕಿ-ಅಂಶ

* ಕರ್ನಾಟಕ ಪಬ್ಲಿಕ್ ಶಾಲೆ, ಹೆಬ್ಬಾಳ: 9 ನೇ ತರಗತಿ ದಾಖಲಾತಿ: 171, 10ನೇ ತರಗತಿ ದಾಖಲಾತಿ: 129, ವ್ಯತ್ಯಾಸ: 42

* ಸರಕಾರಿ ಪ್ರೌಢಶಾಲೆ, ಸಂತೆ ಬೀದಿ, ಯಶವಂತಪುರ: 9 ನೇ ತರಗತಿ ದಾಖಲಾತಿ: 75, 10ನೇ ತರಗತಿ ದಾಖಲಾತಿ: 46, ವ್ಯತ್ಯಾಸ: 29

*ಕರ್ನಾಟಕ ಪಬ್ಲಿಕ್ ಶಾಲೆ, ಶೇಷಾದ್ರಿಪುರಂ: 9 ನೇ ತರಗತಿ ದಾಖಲಾತಿ: 45, 10ನೇ ತರಗತಿ ದಾಖಲಾತಿ: 16, ವ್ಯತ್ಯಾಸ: 29

* ಕರ್ನಾಟಕ ಪಬ್ಲಿಕ್ ಶಾಲೆ, ಜಾಲಹಳ್ಳಿ: 9 ನೇ ತರಗತಿ ದಾಖಲಾತಿ: 127, 10ನೇ ತರಗತಿ ದಾಖಲಾತಿ: 108, ವ್ಯತ್ಯಾಸ: 19

* ಸರಕಾರಿ ಪ್ರೌಢಶಾಲೆ, ಐಐಎಸ್ ಸಿ: 9 ನೇ ತರಗತಿ ದಾಖಲಾತಿ: 70, 10ನೇ ತರಗತಿ ದಾಖಲಾತಿ: 54, ವ್ಯತ್ಯಾಸ: 16

* ಸರಕಾರಿ ಪ್ರೌಢಶಾಲೆ, ಪ್ಯಾಲೇಸ್ ಗುಟ್ಟಹಳ್ಳಿ: 9 ನೇ ತರಗತಿ ದಾಖಲಾತಿ: 48, 10ನೇ ತರಗತಿ ದಾಖಲಾತಿ: 33, ವ್ಯತ್ಯಾಸ: 15

* ಸರಕಾರಿ ಪ್ರೌಢಶಾಲೆ, ಪ್ರಕಾಶ ನಗರ: 9 ನೇ ತರಗತಿ ದಾಖಲಾತಿ: 33, 10ನೇ ತರಗತಿ ದಾಖಲಾತಿ: 20, ವ್ಯತ್ಯಾಸ: 13

* ಸರಕಾರಿ ಪ್ರೌಢಶಾಲೆ (ಉರ್ದು), ಮುನ್ನಾವರ್ ಮೊಹಲ್ಲಾ: 9ನೇ ತರಗತಿ ದಾಖಲಾತಿ: 22, 10ನೇ ತರಗತಿ ದಾಖಲಾತಿ: 14, ವ್ಯತ್ಯಾಸ: 08

* ಸರಕಾರಿ ಪ್ರೌಢಶಾಲೆ,ಶ್ರೀರಾಮಪುರ: 9 ನೇ ತರಗತಿ ದಾಖಲಾತಿ: 30, 10ನೇ ತರಗತಿ ದಾಖಲಾತಿ: 23, ವ್ಯತ್ಯಾಸ: 07

* ಸರಕಾರಿ ಪ್ರೌಢಶಾಲೆ, 8ನೇ ಅಡ್ಡರಸ್ತೆ, ಮಲ್ಲೇಶ್ವರ: 9 ನೇ ತರಗತಿ ದಾಖಲಾತಿ: 47, 10ನೇ ತರಗತಿ ದಾಖಲಾತಿ: 44, ವ್ಯತ್ಯಾಸ: 03

ಕೋಟ್ ..

ಉತ್ತರ ವಲಯದ ಹಲವು ಶಾಲೆಗಳಲ್ಲಿ9ನೇ ತರಗತಿ ದಾಖಲಾತಿ ಹಾಗೂ 10ನೇ ತರಗತಿಯ ದಾಖಲಾತಿ ನಡುವೆ ವ್ಯತ್ಯಾಸ ಕಂಡು ಬಂದಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಣಿಯಾದ ಮಕ್ಕಳ ಸಂಖ್ಯೆ ಇಳಿಕೆಯಾಗಿರುವುದಕ್ಕೆ ಸೂಕ್ತ ಕಾರಣಗಳ ಜತೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.

-ಲತಾಮಣಿ, ಕ್ಷೇತ್ರ ಶಿಕ್ಷಣಾಧಿಕಾರಿ, ಬೆಂಗಳೂರು ಉತ್ತರ ವಲಯ-2

ಕೋಟ್ ..

ಪರೀಕ್ಷೆಗೆ ವಿದ್ಯಾರ್ಥಿಗಳ ನೋಂದಣಿ ಕಡಿಮೆಯಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಯಾವ ಕಾರಣಕ್ಕೆ ವರದಿಗೆ ಸೂಚಿಸಿದ್ದಾರೆ ಎಂಬುದನ್ನು ಪರಿಶೀಲಿಸಬೇಕು.

-ಗೋಪಾಲಕೃಷ್ಣ, ನಿರ್ದೇಶಕ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ.