‘ ಪ್ಲಾಸ್ಟಿಕ್ ಮಾರಾಟ ವಿರೋಧಿಸಿ’
ಜಿಲ್ಲಾಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ ಹೇಳಿಕೆ
ವಿಕ ಸುದ್ದಿಲೋಕ ಗಂಗಾವತಿ
‘‘ಪ್ಲಾಸ್ಟಿಕ್ ಮಾರಾಟ ಮಾಡುವ ವ್ಯಾಪಾರಿಗಳು ದೇಶದ್ರೋಹಿಗಳಿದ್ದಂತೆ,’’ ಎಂದು ಒಂದನೇ ಹೆಚ್ಚುವರಿ ಜಿಲ್ಲಾಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ ಹೇಳಿದರು.
ನಗರದ ನಗರಸಭೆ ಸಭಾಂಗಣದಲ್ಲಿನಗರಸಭೆ ಮತ್ತು ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿಪ್ಲಾಸ್ಟಿಕ್ ನಿಷೇಧ ಕುರಿತು
ಗುರುವಾರ ವ್ಯಾಪಾರಿಗಳಿಗೆ ಹಮ್ಮಿಕೊಂಡಿದ್ದ ಅರಿವು ಕಾರ್ಯಾಗಾರದಲ್ಲಿಮಾತನಾಡಿದರು
‘‘ ಪ್ಲಾಸ್ಟಿಕ್ ನಿಷೇಧದ ಕುರಿತು ಜಾಗೃತಿ ಮೂಡಿಸಿದ್ದರೂ ವ್ಯಾಪಾರಿಗಳು ಪ್ಲಾಸ್ಟಿಕ್ ಮಾರಾಟ ಮುಂದುವರೆಸಿದ್ದಾರೆ. ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಜಾನುವಾರುಗಳು ಸಮಸ್ಯೆ ಎದುರಿಸುತ್ತಿವೆ,’’ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್ ಮಾತನಾಡಿದರು. ನ್ಯಾಯಾಧೀಶೆ ಮೇಘಾ ಸೋಮನಾಥ, ಪೌರಾಯುಕ್ತ ವಿರೂಪಾಕ್ಷಮೂರ್ತಿ, ನಗರಠಾಣೆಯ ಪಿಐ ಪ್ರಕಾಶ ಮಾಳೆ, ವಕೀಲರ ಸಂಘದ ಅಧ್ಯಕ್ಷ ಶರಣಪ್ಪ ನಾಯಕ, ಉಪಾಧ್ಯಕ್ಷ ಪ್ರಕಾಶ ಕುಸಬಿ, ಪ್ರಧಾನ ಕಾರ್ಯದರ್ಶಿ ಎಚ್ .ಎಂ.ಮಂಜುನಾಥಸ್ವಾಮಿ, ಶರಣಪ್ಪ, ನಾಗರಾಜ ಇದ್ದರು.
ಫೋಟೋ ಕ್ಯಾಪ್ಷನ್ : ಕೆಪಿಎಲ್ 5ಸಿಎಂ2
ಗಂಗಾವತಿ ನಗರಸಭೆ ಸಭಾಂಗಣದಲ್ಲಿಪ್ಲಾಸ್ಟಿಕ್ ನಿಷೇಧ ಕುರಿತು ವ್ಯಾಪಾರಿಗಳಿಗೆ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿಸದಾನಂದ ನಾಗಪ್ಪ ನಾಯಕ ಮಾತನಾಡಿದರು.

