ಮಾ.10ರ ವರೆಗೆ ಆಯೋಜನೆ | ದೇಶದ ನಾನಾ ನಮೂನೆ ಸೀರೆ ಲಭ್ಯ
ವಿಕ ಸುದ್ದಿಲೋಕ ಬೆಳಗಾವಿ
ಇಲ್ಲಿನ ಮರಾಠ ಮಂದಿರದಲ್ಲಿಗುರುವಾರದಿಂದ ಆರಂಭವಾದ ಸಿಲ್ ್ಕ ಇಂಡಿಯಾ ಪ್ರದರ್ಶನಕ್ಕೆ ಬೆಳಗಾವಿಯ ಮಹಿಳೆಯರಿಂದ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಯುಗಾದಿ (ಗುಡಿ ಪಾಡ್ವಾ) ಮತ್ತು ಮದುವೆ ಸಮಾರಂಭಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರದರ್ಶನ ಆಯೋಜಿಸಲಾಗಿದ್ದು, ಮಾ. 10ರ ವರೆಗೆ ಒಟ್ಟು ಆರು ದಿನಗಳ ಕಾಲ ನಡೆಯಲಿದೆ. 40ಕ್ಕೂ ಹೆಚ್ಚು ನಾನಾ ಸ್ಟಾಲ್ ಗಳನ್ನು ಅಳವಡಿಸಲಾಗಿದ್ದು, ದೇಶದ ಇತರ ಭಾಗಗಳಿಂದ ತರಲಾದ ಸೀರೆಗಳು ಮತ್ತು ಅನೇಕ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಅದರಲ್ಲಿಕರ್ನಾಟಕದ ಕ್ರೆಪ್ ಸಿಲ್ ್ಕ, ಜಾರ್ಜೆಟ್ ಸಿಲ್ ್ಕ ಮತ್ತು ಪ್ರಿಂಟೆಡ್ ಸೀರೆಗಳು, ಬಿಹಾರದ ಆಗ್ರ್ಯಾನಿಕ್ ಟಸರ್ ಸಿಲ್ ್ಕ ಸೀರೆಗಳು, ಸೂಟ್ ಗಳು ಮತ್ತು ಸ್ಟೋಲ್ಸ್ , ತಮಿಳುನಾಡಿನ ಕಾಂಜಿವರಂ ಸಿಲ್ ್ಕ ಸೀರೆಗಳು ಲಭ್ಯವಿ ಇವೆ.
ಇದೇ ರೀತಿ ಆಂಧ್ರಪ್ರದೇಶದ ಧರ್ಮಾವರಂ, ಉಪ್ಪಾಡಾ ಮತ್ತು ಪೋಚಂಪಳ್ಳಿ ಸೀರೆಗಳು, ಉತ್ತರ ಪ್ರದೇಶದ ಲಖ್ನವಿ ಚಿಕನ್ , ಮಲ್ಬರಿ ಸಿಲ್ ್ಕ, ಜಾಮ್ದಾನಿ ಮತ್ತು ಜಾಮವಾರ್ ಸಿಲ್ ್ಕ, ಪಂಜಾಬಿನ ಪಟಿಯಾಲಾ ಡ್ರೆಸ್ ಮಟಿರಿಯಲ್ಸ್ , ಒಡಿಶಾದ ಸಂಬಲ್ಪುರಿ, ಇಕ್ಕತ್ ಮತ್ತು ಹ್ಯಾಂಡ್ ಲೂಮ್ ಸಿಲ್ ್ಕ-ಕಾಟನ್ , ಛತ್ತೀಸ್ ಗಢದ ಎಕ್ಸ್ ಕ್ಲೂಸಿವ್ ರಾ ಸಿಲ್ ್ಕ ಸೀರೆಗಳು, ಕೋಸಾ ಸಿಲ್ ್ಕ, ಟಸರ್ ಸೂಟ್ ಹಾಗೂ ದುಪಟ್ಟಾ, ಮಧ್ಯ ಪ್ರದೇಶದ ಮಹೇಶ್ವರಿ ಮತ್ತು ಚಂದೇರಿ ಸಿಲ್ ್ಕ ಸೀರೆಗಳು ಹಾಗೂ ಸೂಟ್ ಗಳು ಇವೆ.
ಪಶ್ಚಿಮ ಬಂಗಾಳದ ಬಾಲುಚರಿ, ಢಾಕಾ ಮಸ್ಲಿನ್ , ಗೀಚಾ ಸೀರೆಗಳು, ಬುಟಿಕ್ ಸೀರೆಗಳು, ಕಾಂಥಾ ಸೀರೆಗಳು ಮತ್ತು ಜರ್ಡೋಶಿ, ಅಸ್ಸಾಂನ ಮುಗಾ ಮತ್ತು ಏರಿ ಸಿಲ್ ್ಕ ಸೀರೆಗಳು, ಜಮ್ಮು ಮತ್ತು ಕಾಶ್ಮೀರದ ಸಿಲ್ ್ಕ, ಪಶ್ಮೀನಾ ಶಾಲ್ ಗಳು ಮತ್ತು ಸೂಟ್ ಗಳು, ರಾಜಸ್ಥಾನದ ಕೋಟಾ ಸಿಲ್ ್ಕ, ಹ್ಯಾಂಡ್ ಬ್ಲಾಕ್ ಪ್ರಿಂಟೆಡ್ ಡ್ರೆಸ್ ಹಾಗೂ ಸೀರೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಪ್ರದರ್ಶನ ಮಂಗಳವಾರದವರೆಗೆ ಮುಂದುವರಿಯಲಿದ್ದು, ಗ್ರಾಹಕರು ಪ್ರಯೋಜನ ಪಡೆದುಕೊಳ್ಳಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
ಫೋಟೋ: 5ಮಲ್ಲು4

