ಕ್ರೀಡಾಂಗಣಬೇಕು ನಿಜ, ಆದರೆ ಇಲ್ಲಲ್ಲ
-ಕೆಎಸ್ ಐಸಿ ಆವರಣಕ್ಕೂ ಮೊಧಿದಲು ಮೂರು ಕಡೆ ಗುರುತು
- ಸಂತೆಮಾಳ ಬಳಿ 2019ರಲ್ಲಿಭೂಮಿಪೂಜೆ
ಶೇಖರ್ ತಿ.ನರಸೀಪುರ
Tkhಞಚಿಡಿಣಟಿಠಿ77Ãಚಿpಟ.ಛಿsp
ತಿ.ನರಸೀಪುರ ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಿಸಲು ಸರಕಾರ ಮೂರು ಜಾಗಗಳನ್ನು ಗುರುತಿಸಿ ಅಂತಿಮವಾಗಿ ಕೆಎಸ್ ಐಸಿ ಆವರಣವನ್ನು ಆಯ್ಕೆ ಮಾಡಿಕೊಂಡಿದೆ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ನೀಡಿರುವ ಖ್ಯಾತಿಯ ತಿ.ನರಸೀಪುರ ತಾಲೂಕು ಕೇಂದ್ರದಲ್ಲಿಹಧಿಲವು ಕಾಧಿರಧಿಣಧಿಗಳಿಂದ ಸುಸಜ್ಜಿತ ತಾಲೂಕು ಕ್ರೀಡಾಂಗಣ ನಿರ್ಮಾಣ ಇದುವರೆಗೂ ಸಾಧ್ಯವಾಗಿಲ್ಲ.
2009ರಲ್ಲೇ ಭೂಮಿಪೂಜೆ:
ತಾಲೂಕು ಕೇಂದ್ರದಲ್ಲಿಕ್ರೀಡಾಂಗಣ ಇಲ್ಲದಿರುವುದನ್ನು ಮನಗಂಡು ವರುಣ ಕ್ಷೇತ್ರದ ಶಾಸಕರಾಗಿದ್ದ ಸಿದ್ದರಾಮಯ್ಯ ಹಾಗೂ ಡಾ.ಎಚ್ .ಸಿ.ಮಹದೇವಪ್ಪ 2009ರಲ್ಲಿಯೇ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ಪಟ್ಟಣದ ಸಂತೆಮಾಳ ಬಳಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಗುರುತಿಸಿದ್ದರೂ ಕಾರಣಾಂತರಗಳಿಂದ ಕ್ರೀಡಾಂಗಣ ನಿರ್ಮಾಣ ಮಾಡಲು ಸಾಧ್ಯವಾಗಲಿಲ್ಲ. ಇದರಿಂದ ಬಿಡುಗಡೆಯಾಗಿದ್ದ ಅನುದಾನ ಕೂಡ ವಾಪಸ್ ಹೋಗಿತ್ತು. ಇದರೊಂದಿಗೆ ದಶಕಗಳ ಕ್ರೀಡಾಂಗಣದ ಕನಸು ಕನಸಾಗಿಯೇ ಉಳಿದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ನೇ ಸಾಲಿನ ಬಜೆಟ್ ನಲ್ಲಿ6 ಕೋಟಿ ರೂ. ಅನುದಾನ ನೀಡಿದ್ದು, ಸುಸಜ್ಜಿತ ಒಳಾಂಗಣ, ಹೊರಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಿದ್ದಾರೆ. ಆದರೆ, ಕೆಎಸ್ ಐಸಿ ಆವರಣದಲ್ಲಿಜಾಗ ಗುರುತಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಮೂರು ಜಾಗ ಗುರುತು:
ಕ್ರೀಡಾಂಗಣ ನಿರ್ಮಿಸಲು ಸರಕಾರ ಮೊದಲು ಬಂಗಾರಪ್ಪ ಬಡಾಧಿವಣೆಯಲ್ಲಿ23 ಎಕರೆ ಜಾಗ ಗುರುತಿಸಿತ್ತು. ಆದರೆ, 23 ಎಕರೆಯಲ್ಲಿ13 ಎಕರೆಯನ್ನು ಆಶ್ರಯ ಮನೆಗಳಿಗೆ ನೀಡಲಾಗಿದೆ. ಜತೆಗೆ ಸ್ಲಂ ಬೋರ್ಡ್ ಸೇರಿದಂತೆ ಇತರೆ ಕಾರ್ಯಗಳಿಗೆ ಜಾಗ ನೀಡಿರುವುದು ಕ್ರೀಡಾಂಗಣ ನಿರ್ಮಾಣಕ್ಕೆ ತೊಡಕಾಯಿತು. ಹೀಧಿಗಾಗಿ ಈ ಪ್ರದೇಶದಲ್ಲಿಕ್ರೀಡಾಂಗಣ ನಿಧಿರ್ಮಾಣ ಯೋಜನೆಯನ್ನು ಕೈಬಿಡಬೇಕಾಯಿತು.
ತೋಟಗಾರಿಕೆ ಇಲಾಖೆಯಲ್ಲಿ:
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲೇ ಇರುವ ತೋಟಗಾರಿಕೆ ಇಲಾಖೆಗೆ ಸೇರಿದ ಖಾಲಿ ಜಾಗವನ್ನು ಕ್ರೀಡಾಂಗಣಕ್ಕೆ ಗುರುತಿಸಲಾಯಿತು. ಆದರೆ, ಆ ಜಾಗವನ್ನು ಕ್ರೀಡಾಂಗಣಕ್ಕೆ ತೀರ ಕಡಿಮೆಯಾಯಿತು ಎಂದು ಆ ಜಾಗವನ್ನು ಕೈಬಿಡಲಾಯಿತು. ಅದರ ಬದಲು ಆ ಜಾಗದಲ್ಲಿಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಯಿತು. ಅಂತಿಧಿಮಧಿವಾಗಿ ಕೆಎಸ್ ಐಸಿ ಕಾರ್ಖಾನೆಯಲ್ಲಿನ 13.5 ಎಕರೆಯಲ್ಲಿ5 ಎಕರೆ ಖಾಲಿ ಜಾಗವನ್ನು ಗುರುತಿಸಿ ಕ್ರೀಡಾಂಗಣ ನಿರ್ಮಾಣಕ್ಕೆ ಗುರುತಿಸಲಾಯಿತು.
ಸರಕಾರ ಈ ಜಾಗವನ್ನು ಗುರುತಿಸಿದಾಗಲೇ ಕೆಎಸ್ ಐಸಿ ಎಂಡಿ ಈ ಬಗ್ಗೆ ಸರಕಾರಕ್ಕೆ ಏಕೆ ವರದಿ ನೀಡಲಿಲ್ಲ? ಯಾಧಿರದೋ ಕುಧಿಮ್ಮಧಿಕ್ಕಿಧಿನಿಂದ ಈಗ ಕೆಧಿಲಧಿವರು ಪ್ರತಿಭಟನೆಗೆ ಇಳಿದಿದ್ದಾರೆ ಎಂಬುದು ಆಧಿಡಧಿಳಿತ ಪಧಿಕ್ಷಧಿದಧಿವರ ಆಧಿರೋಪ.
--ಕೋಟ್ --
ರಾಷ್ಟ್ರಮಟ್ಟದ ಖೋಖೋ ಪಂದ್ಯದಲ್ಲಿಭಾಗವಹಿಸಿ ದೇಶ, ರಾಜ್ಯ ಹಾಗೂ ತಿ.ನರಸೀಪುರ ತಾಲೂಕಿಗೆ ಕೀರ್ತಿ ತಧಿರಧಿಲಾಧಿಗಿಧಿದೆ. ಆದರೆ, ಇಲ್ಲಿಕ್ರೀಡಾಪಟುಗಳಿಗೆ ಅಗತ್ಯವಾದ ಸುಸಜ್ಜಿತ ಕ್ರೀಡಾಂಗವಿಲ್ಲದಿರುವುದರಿಂದ ಅಭ್ಯಾಸ ನಡೆಸಲು ತೊಂದರೆಯಾಗುತ್ತಿದೆ.
-ವೀಣಾ, ಖೋಖೋ ರಾಷ್ಟ್ರಮಟ್ಟದ ಕ್ರೀಡಾಪಟು, ಕುರಬೂರು ಗ್ರಾಮ, ತಿ.ನರಸೀಪುರ
ಸರಕಾರ ಕ್ರೀಡಾಂಗಣ ನಿರ್ಮಿಧಿಸುಧಿತ್ತಿಧಿದೆಯೇ ಹೊರತು ಕಾರ್ಖಾನೆ ಮುಚ್ಚುಧಿತ್ತಿಲ್ಲ. 2014ರಿಂದಲೂ ಕ್ರೀಡಾಂಗಣಕ್ಕೆ ಹೋರಾಟ ಮಾಡುತ್ತ ಬಂದಿದ್ದೇವೆ. ತಾಲೂಕಿನ ಕ್ರೀಡಾಪಟುಗಳಿಗೆ, ರೈತರ ಮಕ್ಕಳ ಕ್ರೀಡಾಭ್ಯಾಸಕ್ಕೆ ಉತ್ತಮ ವೇದಿಕೆ ಒದಗಿಸಬೇಕಿದೆ. ಅದಕ್ಕಾಗಿ ಸುಸಜ್ಜಿತ ಕ್ರೀಡಾಂಗಣ ಅಗತ್ಯ.
-ರಮೇಶ್ , ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರು, ಹಳೇ ಕ್ರೀಡಾಪಟು, ತಿ.ನರಸೀಪುರ.
ಎಂವೈಎಸ್ 3 ಟಿಎನ್ ಪಿ3
ತಿ.ನರಸೀಪುರ ಪಟ್ಟಣದ ಕೆಎಸ್ ಐಸಿ ಆವರಣದಲ್ಲಿಕ್ರೀಡಾಂಗಣಕ್ಕೆ ಜಾಗ ಗುರುತಿಸಿರುವುದು.

