ವಿಕ ಸುದ್ದಿಲೋಕ ಮಂಜೇಶ್ವರ
ಇತಿಹಾಸ ಪ್ರಸಿದ್ಧ ಕ್ಷೇತ್ರಗಳಲ್ಲಿಒಂದಾದ ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರ ಪಟ್ಟತ್ತೂರಿನಲ್ಲಿ ಈ ವರ್ಷವೂ ಕಳಿಯಾಟ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮಾ. 1ರಿಂದ ಪ್ರಾರಂಭವಾದ ಕಳಿಯಾಟ ಉತ್ಸವವು ಮಾ. 8ರ ವರೆಗೆ ನಡೆಯಲಿದೆ.
ಸೋಮವಾರ ಬೆಳಗ್ಗೆ 5:30ಕ್ಕೆ ಕೆಂಡಸೇವೆ, ಬಲಿ ಮೂರ್ತಿ ದರ್ಶನ, 9ಕ್ಕೆ ಧ್ವಜಾರೋಹಣ ಮದ್ಯಾಹ್ನ 12ರಿಂದ ಕ್ಷೇತ್ರದ ವತಿಯಿಂದ ಅನ್ನದಾನ ಸೇವೆ ನಡೆಯಿತು. ಮಧ್ಯಾಹ್ನ 2ಕ್ಕೆ ಚೀರುಂಭ ಭಗವತಿ ಭಜನಾ ತಂಡದಿಂದ ಭಜನೆ ಸಂಕೀರ್ತನೆ ಬಳಿಕ 3ಕ್ಕೆ ಪಟ್ಟತ್ತೂರು ಭಗವತಿ ಭಜನಾ ಮಂಡಳಿಯಿಂದ ಭಜನೆ ಸಂಕೀರ್ತನೆ ನಡೆಯಿತು.
ಸಂಜೆ 6ಕ್ಕೆ ತಾನಂ ಮುಂಬಯ ತೆಯ್ಯಮ್ ವೆಲ್ಲಾಟಂ, ತದನಂತರ ಮಲೆಚಾಮುಂಡಿ ದೈವದ ತೋಟಂ ಜರುಗಿತು.ರಾತ್ರಿ 8 ಗಂಟೆಗೆ ಬಲ್ಲಂಗುಡೇಲು ಗೆಳೆಯರ ಬಳಗದ 34ನೇ ವಾರ್ಷಿಕೋತ್ಸವದ ಪ್ರಯುಕ್ತ ನೃತ್ಯ ವೈಭವ ಹಾಗೂ ಸಂಗೀತ ಸಂಜೆ ನಡೆಯಿತು.
3ಎಂಜೆ2 ಬಲ್ಲಂಗುಡೇಲು

