ಮಾತಿನ ಕೌಶಲ ಬೆಳೆಸಿಕೊಳ್ಳಿ

Contributed bydevarajanayaka75@gmail.com|Vijaya Karnataka

ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದಲ್ಲಿ ಜಿಲ್ಲಾಮಟ್ಟದ ಚರ್ಚಾ ಸ್ಪರ್ಧೆ ನಡೆಯಿತು. ವಿದ್ಯಾರ್ಥಿಗಳು ವಿಷಯ ಜ್ಞಾನದೊಂದಿಗೆ ಮಾತಿನ ಕೌಶಲ ಬೆಳೆಸಿಕೊಳ್ಳುವ ಮಹತ್ವವನ್ನು ಅರಿತರು. ಸ್ಪರ್ಧೆಯಲ್ಲಿ 108 ವಿದ್ಯಾರ್ಥಿಗಳು ಭಾಗವಹಿಸಿ ವಿಕಸಿತ ಭಾರತ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದರು. ಐದು ಮಂದಿ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

guidance for developing speaking skills at district level debate competition

ಮಾತಿನ ಕೌಶಲ ಬೆಳೆಸಿಕೊಳ್ಳಿ

ವಿಕ ಸುದ್ದಿಲೋಕ ವಿಜಯನಗರ(ಹೊಸಪೇಟೆ)

‘‘ವಿದ್ಯಾರ್ಥಿಗಳು ವಿಷಯದ ಜ್ಞಾನದೊಂದಿಗೆ ಮಾತಿನ ಕೌಶಲ ಬೆಳೆಸಿಕೊಳ್ಳಬೇಕು,’’ಎಂದು ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಕುಮಾರ ಹೇಳಿದರು.

ನಗರದ ವಿಜಯನಗರ ಮಹಾವಿದ್ಯಾಲಯದಲ್ಲಿಭಾರತ ಸರಕಾರದ ಯುವಜನ ವ್ಯವಹಾರ ಮತ್ತು ವಿಜಯನಗರ, ಬಳ್ಳಾರಿ ಕ್ರೀಡಾ ಇಲಾಖೆ ಸಹಯೋಗದಲ್ಲಿಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಚರ್ಚಾಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ವಿಜಯನಗರ ಮಹಾವಿದ್ಯಾಲಯದ ಪ್ರಾಂಶುಪಾಲ ಮಹಾಂತೇಶ ಆರಾಧ್ಯಮಠ ಮಾತನಾಡಿ, ‘‘ಇಂದಿನ ವಿದ್ಯಾರ್ಥಿಗಳು ಸ್ಪರ್ಧಾ ಚಟುವಟಿಕೆ, ಕಾರ್ಯಕ್ರಮಗಳಲ್ಲಿಭಾಗಿಯಾಗಿ ಜ್ಞಾನಾರ್ಜನೆ ಹೊಂದಬೇಕು,’’ ಎಂದು ಸಲಹೆ ನೀಡಿದರು.

ಶಂಕರ್ ಆನಂದಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ನಾಗಣ್ಣ ಕಿಲಾರಿ, ಎನ್ ಎಸ್ ಎಸ್ ಅಧಿಕಾರಿ

ಡಾ.ಗಾದೆಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ108 ವಿದ್ಯಾರ್ಥಿಗಳು ಭಾಗವಹಿಸಿದ್ದರು. 75 ವಿದ್ಯಾರ್ಥಿಗಳು ವಿಕಸಿತ ಭಾರತಕ್ಕೆ ಸಂಬಂಧಿಸಿದಂತೆ ತಮ್ಮ ವಿಚಾರ ಮಂಡಿಸಿದರು. ಇಲಾಖೆಯ ಮಾರ್ಗಸೂಚಿ ಅನ್ವಯ ತೀರ್ಪುಗಾರರು ಐವರು ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಿದರು.

ವಿಜೇತರು ಪಟ್ಟಿ: ಹೂವಿನಹಡಗಲಿ ಜಿ.ಬಿ.ಆರ್ . ಕಾಲೇಜಿನ ಶಾಂತಮ್ಮ (ಪ್ರಥಮ), ಹೊಸಪೇಟೆ ಶಂಕರ್ ಆನಂದಸಿಂಗ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥ್ವಿಕುಮಾರ (ದ್ವಿತೀಯ), ಹೂವಿನ ಹಡಗಲಿ ಜಿ.ಬಿ.ಆರ್ . ಕಾಲೇಜಿನ ಸೃಷ್ಟಿ ಎಂ.(ತೃತೀಯ), ಹೊಸಪೇಟೆ ವಿಜಯನಗರ ಮಹಾವಿದ್ಯಾಯದ ನಂದಿನಿ ಮತ್ತು ಸುಮತಿ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದರು.

ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಪ್ರಭುಗೌಡ, ಮೆರಾ ಭಾರತ್ ಕೇಂದ್ರದ ಜಿಲ್ಲಾಮೇಲ್ವಿಚಾರಕ ಅಮರೇಶ್ , ಐಕ್ಯುಎಸಿ ಸಂಚಾಲಕ ಡಾ.ಡಿ.ರವಿ ಕಿರಣ, ಡಾ.ಶಿವಮಲ್ಲಿಕಾರ್ಜುನ, ಡಾ.ಗಿರೀಶ ಕುಮಾರ್ ಗೌಡ, ಸಿ.ಸಿದ್ದೇಶ್ , ಅಭಿನಂದನ ಜೋಷಿ ಎಂ., ಜಯಶ್ರೀ ಸೇರಿ ಇತರರು ಇದ್ದರು.

ಫೋಟೋ ಕ್ಯಾಪ್ಷನ್ : ಎಚ್ ಪಿಟಿ 5 ದೇವರಾಜ 5

ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದ ಸಭಾಂಗಣದಲ್ಲಿಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಚರ್ಚಾ ಸ್ಪರ್ಧೆಯಲ್ಲಿವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.