ಹೆಗಲತ್ತಿಯ ನಾಗಯಕ್ಷೆ ದೇವಾಲಯ 12ನೇ ವಾರ್ಷಿಕೋತ್ಸವ

Contributed bygururaja.jd@gmail.com|Vijaya Karnataka

ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿಯಲ್ಲಿ ನಾಗಯಕ್ಷೆ ದೇವಿ, ನವಗ್ರಹ ಮತ್ತು ಶ್ರೀಕ್ಷೇತ್ರ ನಾಗದೇವರ ದೇವಾಲಯದ 12ನೇ ವಾರ್ಷಿಕೋತ್ಸವ ಮಾ.8ರ ವರೆಗೆ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳು ಈಗಾಗಲೇ ಪ್ರಾರಂಭವಾಗಿವೆ. ಮಾ.6ರಂದು ಮಹಾಗಣಪತಿ ಪೂಜೆ, ನವಚಂಡಿಕಾ ಹೋಮ, ಕಲಾ ಹೋಮ, ಪಂಚಾಮೃತ ಅಭಿಷೇಕ, ಬ್ರಹ್ಮಕಳಶ ಅಭಿಷೇಕ ನಡೆಯಲಿದೆ. ಮಾ.8ರಂದು ಗ್ರಾಮದ ಒಂಬತ್ತು ದೇವತೆಗಳ ಪಲ್ಲಕ್ಕಿ ಉತ್ಸವ, ಅನ್ನಸಂತರ್ಪಣೆ, ಮೆರವಣಿಗೆ, ಭಂಡಾರದ ಸ್ವಾಗತ ಹಾಗೂ ಯಕ್ಷಗಾನ ಪ್ರಸಂಗ ನಡೆಯಲಿದೆ. ಮಾ.9ರಂದು ದೇವರುಗಳ ಆರಾಧನೆ, ಮಹಾಮಂಗಳಾರತಿ ಬಳಿಕ ಸ್ವಸ್ಥಾನಕ್ಕೆ ಹಿಂದಿರುಗಲಿವೆ.

hegalatti nagayakshe temple 12th anniversary celebrations

ಹೆಗಲತ್ತಿಯ ನಾಗಯಕ್ಷೆ ದೇವಾಲಯ 12ನೇ ವಾರ್ಷಿಕೋತ್ಸವ

ವಿಕ ಸುದ್ದಿಲೋಕ ಶಿವಮೊಗ್ಗ

ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿಯ ಶ್ರೀ ನಾಗಯಕ್ಷೆ ಸೇವಾ ಸಮಿತಿಯಿಂದ ಮಾ.8ರ ವರೆಗೆ ನಾಗಯಕ್ಷೆ ದೇವಿ, ನವಗ್ರಹ ಮತ್ತು ಶ್ರೀಕ್ಷೇತ್ರ ನಾಗದೇವರ ದೇವಾಲಯದ 12ನೇ ವಾರ್ಷಿಕೋತ್ಸವ ನಡೆಯಲಿದೆ ಎಂದು ದೇವಾಲಯದ ಭಕ್ತ ಸಂತೋಷ್ ಮಾಳೋದೆ ತಿಳಿಸಿದರು.

ಪತ್ರಿಕಾಭವನದಲ್ಲಿಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಬುಧವಾರದಿಂದ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಹಾಗೂ ವಿವೇಕ ಭಟ್ ಅವರ ನೇತೃತ್ವದಲ್ಲಿವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಿವೆ. ಮಾ.6ರಂದು ಬೆಳಗ್ಗೆ 9ಕ್ಕೆ ಮಹಾಗಣಪತಿ ಪೂಜೆ, ನವಚಂಡಿಕಾ ಹೋಮ, ಕಲಾ ಹೋಮ, ಮಹಾ ಪೂರ್ಣಾಹುತಿ, ಪಂಚಾಮೃತ ಅಭಿಷೇಕ, ಬ್ರಹ್ಮಕಳಶ ಅಭಿಷೇಕ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ 6ಕ್ಕೆ ಆಶ್ಲೇಷ ಬಲಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಇರಲಿದೆ ಎಂದರು,

ಮಾ.8ರಂದು ಬೆಳಗ್ಗೆ 9ಕ್ಕೆ ಗ್ರಾಮದ ಸುತ್ತಲಿನ ಒಂಬತ್ತು ದೇವತೆಗಳು ಪಲ್ಲಕ್ಕಿಯಲ್ಲಿಆಗಮಿಸಲಿದ್ದು, ಆರಾಧನೆ, ಅನ್ನಸಂತರ್ಪಣೆ ನಡೆಯಲಿದೆ. ನಂತರ ಶಿವಮೊಗ್ಗದ ಶ್ರೀತುಳಜಾ ಭವಾನಿ ದೇವಸ್ಥಾನ ಹಾಗೂ ಗ್ರಾಮದ ಭಕ್ತರಿಂದ ಮೆರವಣಿಗೆ ಮತ್ತು ಭಂಡಾರದ ಸ್ವಾಗತ ಕಾರ್ಯಕ್ರಮ ಇರಲಿದೆ. ಬಂಗಾರಮಕ್ಕಿ ಕ್ಷೇತ್ರದ ಧರ್ಮದರ್ಶಿ ಮಾರುತಿ ಗುರೂಜಿ ಸಾನ್ನಿಧ್ಯ ವಹಿಸಲಿದ್ದು, ಮಾಜಿ ಸಚಿವ ಕೆ.ಎಸ್ .ಈಶ್ವರಪ್ಪ ಉಪಸ್ಥಿತರಿರಲಿದ್ದಾರೆ. ರಾತ್ರಿ 8ಕ್ಕೆ ಮಾಳೂರು ಸೀಮೆಯ ಗುತ್ತಿ ಯಡೆಹಳ್ಳಿಯ ಗುತ್ತಮ್ಯ ಪ್ರಸಾದಿತಾ ಯಕ್ಷಗಾನ ಮಂಡಳಿಯಿಂದ ನಾಗಮಂಡಲ ಯಕ್ಷಗಾನ ಪ್ರಸಂಗ ನಡೆಯಲಿದೆ ಎಂದು ತಿಳಿಸಿದರು.

ಮಾ.9ರಂದು ಬೆಳಗ್ಗೆ 9ಕ್ಕೆ ಪಲ್ಲಕ್ಕಿಯಲ್ಲಿಆಗಮಿಸಿದ ದೇವರುಗಳ ಆರಾಧನೆ, ಮಹಾಮಂಗಳಾರತಿ ನಡೆಯಲಿದ್ದು, ಸ್ವಸ್ಥಾನಕ್ಕೆ ಪಲ್ಲಕ್ಕಿ ದೇವರುಗಳು ಹಿಂದಿರುಗಲಿವೆ ಎಂದರು.

ಮಾಜಿ ಸಚಿವ ಕೆ.ಎಸ್ .ಈಶ್ವರಪ್ಪ, ಪ್ರಮುಖರಾದ ಸಂತೋಷ್ ಸಾಕ್ರೆ, ಕೆ.ಈ.ಕಾಂತೇಶ್ , ಈ. ವಿಶ್ವಾಸ್ , ಮಹಾಲಿಂಗಯ್ಯ ಶಾಸ್ತ್ರಿ ಇದ್ದರು.