ವಿಕ ಸುದ್ದಿಲೋಕ ಭದ್ರಾವತಿ ನಗರದ ಭದ್ರಾನದಿ ತೀರದ ಶೃಂಗೇರಿ ಶಂಕರ ಮಠದ ಶಾಖೆಯಲ್ಲಿನೂತನ ಗುರುನಿವಾಸವನ್ನು ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಬುಧವಾರ ಉದ್ಘಾಟಿಸಿದರು. ಕಾರ್ಯಕ್ರಮ ಹಿನ್ನೆಲೆಯಲ್ಲಿದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಜಗದ್ಗುರುಗಳ ಉಪಸ್ಥಿತಿಯಲ್ಲಿಪೂರ್ಣಾಹುತಿ, ಧೂಳಿಪಾದ ಪೂಜೆ, ಭಿಕ್ಷಾವಂದನೆ, ಗುರುಪಾದುಕಾ ಪೂಜೆ, ವಿವಿಧ ಸಂಘ ಸಂಸ್ಥೆಗಳಿಂದ ಫಲ ಸಮರ್ಪಣೆ ನಡೆಯಿತು. ನಂತರ ಜಗದ್ಗುರುಗಳವರಿಂದ ಫಲ-ಮಂತ್ರಾ ಕ್ಷತೆ, ರಜತ ಮಹೋತ್ಸವ ಅಂಗವಾಗಿ ಸೇವಾಕರ್ತರಿಗೆ ಗೌರವ ಸಮರ್ಪಣೆ, ಮಹಾಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು. ಮಠದ ಧರ್ಮಾಧಿಕಾರಿ ಕೆ.ಆರ್ ಸುಬ್ಬರಾವ್ , ಪ್ರಮುಖರಾದ ಕೆ.ಎಸ್ . ನಾಗರಾಜ್ , ಶಾಂತಕುಮಾರ್ , ಕೆ.ಆರ್ . ನಾಗರಾಜ್ , ಎ.ಎನ್ .ಸುರೇಶ್ , ಕೆ.ಎನ್ .ಶ್ರೀಹರ್ಷ, ಜಿ. ರಮೇಶ್ , ವಿವಿಧ ದೇವಸ್ಥಾನಗಳ ಅರ್ಚಕರು, ಸಂಘ- ಸಂಸ್ಥೆಗಳ ಪ್ರಮುಖರು, ಗಣ್ಯರು ಸೇರಿ ದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

