1200ಕ್ಕೂ ಅಧಿಕ ಉದ್ಯೋಗ ನೇಮಕಾತಿ ರಾಮನಗರದಲ್ಲಿ®

Contributed byraju.manjunath67@gmail.com|Vijaya Karnataka

ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ 1200ಕ್ಕೂ ಅಧಿಕ ಯುವಕರಿಗೆ ಉದ್ಯೋಗ ಲಭಿಸಿದೆ. 5000ಕ್ಕೂ ಅಧಿಕ ಮಂದಿ ಸಂದರ್ಶನ ಎದುರಿಸಿದರು. ಕೌಶಲಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಈ ಮೇಳದಲ್ಲಿ ಬೆಂಗಳೂರಿನ 170ಕ್ಕೂ ಅಧಿಕ ಕಂಪನಿಗಳು ಭಾಗವಹಿಸಿದ್ದವು. ಹಲವರಿಗೆ ನೇಮಕಾತಿ ಪತ್ರ ವಿತರಿಸಲಾಯಿತು.

job fair in ramnagar with over 1200 job opportunities

1200ಕ್ಕೂ ಅಧಿಕ ಅಭ್ಯರ್ಥಿಗಳÜ ನೇಮಕ

ರಾಮನಗರದಲ್ಲಿನಡೆದ ಬೃಹತ್ ಉದ್ಯೋಗ ಮೇಳ | ಸಂದರ್ಶನ ಎದುರಿಸಿದ 5000ಕ್ಕೂ ಅಧಿಕ ಅಭ್ಯರ್ಥಿಗಳು

ವಿಕ ಸುದ್ದಿಲೋಕ, ರಾಮನಗರ: ನಗರದ ಜಿಲ್ಲಾಕ್ರೀಡಾಂಗಣದಲ್ಲಿಗುರುವಾರ ನಡೆದ ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ1200ಕ್ಕೂ ಅಧಿಕ ಮಂದಿಗೆ ಉದ್ಯೋಗಾವಕಾಶ ದೊರೆತಿದೆ.

ಕೌಶಲಾಭಿವೃದ್ಧಿ ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ-ಸಂಜೀವಿನಿ ಕೆಎಸ್ ಆರ್ ಎಲ್ ಪಿಎಸ್ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆ, ಜಿಲ್ಲಾಡಳಿತ ಹಾಗೂ ಜಿಲ್ಲಾಪಂಚಾಯಿತಿ ಸಂಯುಕ್ತಾಶ್ರಯದಲ್ಲಿಆಯೋಜಿಸಲಾಗಿದ್ದ ಬೆಂಗಳೂರು ದಕ್ಷಿಣ ಜಿಲ್ಲಾಮಟ್ಟದ ಉದ್ಯೋಗ ಮೇಳದಲ್ಲಿಸಾವಿರಾರು ಮಂದಿ ಭಾಗವಹಿಸಿದ್ದರು.

ಉದ್ಯೋಗ ಮೇಳಕ್ಕೆ ಜಿಲ್ಲಾಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿ ಮಾತನಾಡಿ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ನಮ್ಮ ಸರಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಭ್ಯರ್ಥಿಗಳು ಸಕ್ರಿಯವಾಗಿ ಉದ್ಯೋಗ ಮೇಳದಲ್ಲಿಪಾಲ್ಗೊಂಡು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಉದ್ಯೋಗ ಮೇಳದಲ್ಲಿ ಭಾಗವಹಿಸಿರುವ ಉದ್ಯೋಗದಾತರು ಅರ್ಹತೆ ಇರುವವರಿಗೆ ತಮ್ಮಲ್ಲಿಲಭ್ಯವಿರುವ ಉದ್ಯೋಗಗಳನ್ನು ನೀಡಬೇಕು. ಇಂದು ಉದ್ಯೋಗಾವಕಾಶ ಸಿಗದವರು ಮತ್ತೊಮ್ಮೆ ಪ್ರಯತ್ನಿಸಬೇಕು ಎಂದು ತಿಳಿಸಿದರು.

ಉದ್ಯೋಗ ಮೇಳದಂತಹ ಮಹತ್ತರ ಕಾರ್ಯಕ್ರಮಗಳನ್ನು ಆಯೋಜಿಸಿರುವ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ನಾನಾ ಇಲಾಖೆಗಳಿಗೆ ಹಾಗೂ ಈ ಉದ್ಯೋಗ ಮೇಳದಲ್ಲಿಭಾಗವಹಿಸಿರುವ ಕಂಪನಿಗಳು, ಕೈಗಾರಿಕೆಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಂತಹ ಕಾರ್ಯಕ್ರಮಗಳನ್ನು ಮತ್ತಷ್ಟು ಏರ್ಪಡಿಸುವ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಕಲ್ಪಿಸಿಕೊಡಬೇಕೆಂದು ಹೇಳಿದರು.

ಶಾಸಕರಾದ ಇಕ್ಬಾಲ್ ಹುಸೇನ್ ಅವರು ಮಾತನಾಡಿ, ಪ್ರತಿಯೊಬ್ಬ ತಂದೆ, ತಾಯಂದಿರು, ಮಕ್ಕಳು ವಿದ್ಯಾವಂತರಾಗಿ ಉತ್ತಮ ಉದ್ಯೋಗ ಪಡೆಯಬೇಕೆಂದು ಆಶಿಸುತ್ತಾರೆ. ನಿರುದ್ಯೋಗ ನೀಗಿಸುವುದು ಈ ಉದ್ಯೋಗ ಮೇಳದ ಉದ್ದೇಶವಾಗಿದೆ. ಉದ್ಯೋಗ ಆಕಾಂಕ್ಷಿಗಳು ಎಲ್ಲಮಳಿಗೆಗಳಿಗೆ ಭೇಟಿ ನೀಡಿ ಮೌಖಿಕ ಸಂದರ್ಶನ ಎದುರಿಸುವ ಮೂಲಕ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ ಗಳಿಸಿಕೊಳ್ಳುವಂತೆ ತಿಳಿಸಿದರು.

ವಿಧಾನ ಪರಿಷÜತ್ ಸದಸ್ಯರಾದ ರಾಮೋಜಿಗೌಡ ಮಾತನಾಡಿ, ಈ ಉದ್ಯೋಗ ಮೇಳದಲ್ಲಿಭಾಗವಹಿಸಿರುವ ಎಲ್ಲ ಕಂಪನಿಗಳಿಗೆ ಧನ್ಯವಾದಗಳು. ಬೆಂಗಳೂರಿನ ಕಂಪನಿಗಳು ಈ ಉದ್ಯೋಗ ಮೇಳದಲ್ಲಿಭಾಗವಹಿಸಿವೆ. ಒಬ್ಬರಿಗೆ ಉದ್ಯೋಗ ನೀಡಿದರೆ ಇಡೀ ಕುಟುಂಬವೇ ಆರ್ಥಿಕ ಸಂಕಷ್ಟದಿಂದ ಪಾರಾದಂತೆ. ಉದ್ಯೋಗದಾತರು ನೇರವಾಗಿ ನೇಮಕಾತಿ ಪತ್ರ ನೀಡಬೇಕು. ಈ ಉದ್ಯೋಗ ಮೇಳದಲ್ಲಿಉದ್ಯೋಗ ದೊರೆಯದವರು ಜುಲೈನಲ್ಲಿಬೆಂಗಳೂರಿನಲ್ಲಿಆಯೋಜಿಸಲಾಗುವ ಬೃಹತ್ ಉದ್ಯೋಗ ಮೇಳದಲ್ಲಿಭಾಗವಹಿಸಿ ಪ್ರಯತ್ನಿಸುವಂತೆ ಕರೆ ನೀಡಿದರು.

ಈ ವೇಳೆ ನಾನಾ ಕೆಲಸಕ್ಕೆ ಆಯ್ಕೆಯಾಗಿರುವವರಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ಜಿಲ್ಲಾಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕೆ.ರಾಜು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಟರಾಜು ಗಾಣಕಲ್ , ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಚೇತನ್ ಕುಮಾರ್ ಎ.ಬಿ., ಜಿಲ್ಲಾಧಿಕಾರಿ

ಯಶವಂತ್ ವಿ.ಗುರುಕರ್ , ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಸಿಇಒ ಅನ್ಮೋಲ್ ಜೈನ್ , ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ, ಯೋಜನಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ನಾನಾ ಕಂಪನಿಗಳ ಮುಖ್ಯಸ್ಥರು ಹಾಗೂ ಇತರರು ಉಪಸ್ಥಿತರಿದ್ದರು.

ಬಾಕ್ಸ್ :

25 ಸಾವಿರಕ್ಕೂ ಅಧಿಕ ಉದ್ಯೋಗ ಇತ್ತು

ಬಿಡದಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಸೇರಿದಂತೆ ಬೆಂಗಳೂರು ಮೂಲದ 170 ಕ್ಕೂ ಅಧಿಕ ಉದ್ಯೋಗದಾತ ಕಂಪನಿಗಳು ಮೇಳದಲ್ಲಿಪಾಲ್ಗೊಂಡಿದ್ದವು. 12,000ಕ್ಕೂ ಅಧಿಕ ನೇರ ಉದ್ಯೋಗಗಳು ಲಭ್ಯವಿದ್ದವು, ಉಳಿದಂತೆ 10 ಸಾವಿರಕ್ಕೂ ಅಧಿಕ ಹೊರಗುತ್ತಿಗೆ ಉದ್ಯೋಗಾವಕಾಶಗಳು ಮೇಳದಲ್ಲಿಲಭ್ಯವಿದ್ದವು. ಎಸ್ಸೆಸ್ಸೆಲ್ಸಿ, ಪಿಯುಸಿ ಉತ್ತೀರ್ಣ, ಅನುತ್ತೀರ್ಣ ಸೇರಿದಂತೆ ಪದವಿ, ಡಿಪೊ್ಲಮಾ, ಬಿಇ, ಎಂಬಿಎ, ಎಂಸಿಎ, ಪದವಿ ಹಾಗೂ ಸ್ನಾತಕೋತ್ತರ ಅಭ್ಯರ್ಥಿಗಳಿಗೂ ಇಲ್ಲಿಉದ್ಯೋಗಾವಕಾಶ ಲಭ್ಯವಿತ್ತು. 4000ಕ್ಕೂ ಅಧಿಕ ವಿದ್ಯಾರ್ಥಿಗಳು ಮೊದಲೇ ನೋಂದಣಿ ಮಾಡಿಕೊಂಡಿದ್ದರೆ, 1000ಕ್ಕೂ ಅಧಿಕ ಮಂದಿ ಉದ್ಯೋಗ ಮೇಳಕ್ಕೆ ಆಗಮಿಸಿ ನೋಂದಣಿ ಮಾಡಿಕೊಂಡರು.

ಬಾಕ್ಸ್ ಐಟಂ / ಅಂಕಿ ಅಂಶಗಳನ್ನು ತಡವಾಗಿ ಅಪ್ಡೇಟ್ ಮಾಡಲಾಗುವುದು.

ಫೋಟೊ:

05ಆರ್ ಎನ್ ಆರ್ ಎಂ2:

ರಾಮನಗರದ ಜಿಲ್ಲಾಕ್ರೀಡಾಂಗಣದಲ್ಲಿನಡೆದ ಉದ್ಯೋಗ ಮೇಳವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಉದ್ಘಾಟಿಸಿದರು.