ವಿಕ ಸುದ್ದಿಲೋಕ ಪುತ್ತೂರು
ವಿಜ್ಞಾನದ ಬೆಳವಣಿಗೆ ತನ್ಮೂಲಕ ದೇಶದ ಪ್ರಗತಿಯು ಮಹಿಳೆ ಮತ್ತು ಪುರುಷರ ಸಮಾನ ಕೊಡುಗೆಯ ಪ್ರತೀಕವಾಗಿದೆ. ಹೀಗಾಗಿ ಸ್ತ್ರೀ-ಪುರುಷರೆನ್ನುವ ಸಾಮಾಜಿಕ ಅಂತರ ತೊಡೆದು ಹಾಕುವುದಲ್ಲದೆ, ಲಿಂಗ ಆಧರಿತ ವೇತನ ಅಸಮಾನತೆ ಅಂತ್ಯಗೊಳಿಸಬೇಕು ಎಂದು ಕಾಸರಗೋಡಿನ ರೈತ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಲಕ್ಷ್ಮೇ ಮುರಳೀಕೃಷ್ಣ ಹೇಳಿದರು.
ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಮೂಲ ವಿಜ್ಞಾನ ವಿಭಾಗದ ಆಶ್ರಯದಲ್ಲಿವಿಜ್ಞಾನದ ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ- ವಿಕಸಿತ ಭಾರತಕ್ಕೆ ವೇಗವರ್ಧಕ ಎನ್ನುವ ವಿಷಯದಲ್ಲಿನಡೆದ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ಡಿಜಿಟಲ್ ಸಾಕ್ಷರತೆ, ಕೃಷಿ ಅಭಿವೃದ್ಧಿಯಲ್ಲಿಸಮಾನ ಅವಕಾಶಗಳು ಇವೆಲ್ಲವನ್ನೂ ಒಳಗೊಂಡ ಸಾಮಾಜಿಕ ಅಭಿವೃದ್ಧಿಯು ದೇಶದ ಉನ್ನತಿಗೆ ಅತಿ ಮುಖ್ಯವಾದದ್ದು. ಅಭಿವೃದ್ಧಿಯ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರು ಅಪಾರ ಕೊಡುಗೆ ನೀಡುವುದರ ಮೂಲಕ ರಾಷ್ಟ್ರ ನಿರ್ಮಾಣದಲ್ಲಿಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದವರು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಸತ್ಯನಾರಾಯಣ ಭಟ್ ಮಾತನಾಡಿ, ವಿಜ್ಞಾನವು ಭಾರತೀಯ ನಾಗರಿಕತೆಯಲ್ಲಿಆಳವಾಗಿ ಬೇರೂರಿದೆ. ಭಾರತದ ಶ್ರೀಮಂತ ವೈಜ್ಞಾನಿಕ ಪರಂಪರೆಯು ನಮ್ಮ ಪೂರ್ವಜರ ಕೊಡುಗೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದರು. ರಾಮಾಯಣ, ಮಹಾಭಾರತದಂತಹ ಪ್ರಾಚೀನ ಮಹಾನ್ ಗ್ರಂಥಗಳಲ್ಲಿಯೂ ಇದು ಪ್ರತಿಫಲಿಸುತ್ತಿದ್ದು, ಸಾಂಪ್ರದಾಯಿಕ ಜ್ಞಾನ ಮತ್ತು ವೈಜ್ಞಾನಿಕ ಚಿಂತನೆಗಳ ಆಳವನ್ನು ನಮಗೆ ತಿಳಿಸುತ್ತದೆ ಎಂದರು.
ಮೂಲ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಶ್ವೇತಾಂಬಿಕಾ ಪಿ. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಿಹಾರಿಕಾ ಪ್ರಸ್ತಾವಿಕ ಮಾತನಾಡಿದರು. ಸುಪ್ರೀತಾ ಸ್ವಾಗತಿಸಿ, ಅಶ್ವಿತಾ ವಂದಿಸಿದರು. ಏಂಜೆಲ್ ಫೋರ್ಡ್ ಮತ್ತು ಪ್ರಾಪ್ತಿ ಕಾರ್ಯಕ್ರಮ ನಿರ್ವಹಿಸಿದರು.
ಫೋಟೋ: 5ಪಿ-ಲಕ್ಷ್ಮೇ
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿಲಕ್ಷ್ಮೇ ಮುರಳಿಕೃಷ್ಣ ಮಾತನಾಡಿದರು.

