ಚಪ್ಪಲಿ ಧರಿಸಲಿಲ್ಲ, ವಾಹನ ಚಲಿಸಲಿಲ್ಲ!

Contributed byrudreshs2009@gmail.com|Vijaya Karnataka

ಇಟಗಿ ಗ್ರಾಮದ ಕಳಸನಟ್ಟಿ ಬೀದಿಯಲ್ಲಿ ವಿಶಿಷ್ಟ ಹೋಳಿ ಆಚರಣೆ ನಡೆಯುತ್ತಿದೆ. ಕರಿ ಹಬ್ಬದ ಅಂಗವಾಗಿ ಐದು ದಿನಗಳ ಕಾಲ ಯಾರೂ ಚಪ್ಪಲಿ ಧರಿಸುವುದಿಲ್ಲ. ವಾಹನಗಳೂ ಓಣಿಗೆ ಪ್ರವೇಶಿಸುವುದಿಲ್ಲ. ಕಾಮದಹನದ ತನಕ ಕಾವಲು ಕಾಯಲಾಗುತ್ತದೆ. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ. ಈ ಆಚರಣೆ ಮಾ. 6 ರಂದು ಸಂಪನ್ನಗೊಳ್ಳಲಿದೆ.

this special celebration of holi celebrating the festival without two wheelers and slippers

ಇಟಗಿ ಗ್ರಾಮದಲ್ಲಿವಿಶಿಷ್ಟ ಹೋಳಿ ಆಚರಣೆ | ಐದು ದಿನಗಳ ಕರಿ ಇಂದು ಸಂಪನ್ನ

ವಿಕ ಸುದ್ದಿಲೋಕ ಇಟಗಿ

ಗ್ರಾಮದ ಕಳಸನಟ್ಟಿ ಬೀದಿಯಲ್ಲಿಹೋಳಿ ಹುಣ್ಣಿಮೆ ಅಂಗವಾಗಿ ನಡೆದ ಕಾಮನ ಕರಿ ಆಚರಣೆ ಮಾ. 6 ರಂದು ಸಂಪನ್ನಗೊಳ್ಳಲಿದೆ.

ಹೋಳಿ ಹುಣ್ಣಿಮೆ ಮುನ್ನಾದಿನ ಆರಂಭಗೊಂಡ ಕರಿ ಆಚರಣೆ ನಿಮಿತ್ತ ಈ ಓಣಿಯಲ್ಲಿಯಾರೂ ಚಪ್ಪಲಿ, ಬೂಟು ಧರಿಸಲಿಲ್ಲ. ಯಾರೂ ದ್ವಿಚಕ್ರ ವಾಹನ, ಸೈಕಲ್ ಏರಲಿಲ್ಲ. ಹೊರಗಿನಿಂದಲೂ ಯಾವುದೇ ವಾಹನಗಳೂ ಈ ಓಣಿಗೆ ಬರಲಿಲ್ಲ. ಅಷ್ಟು ಕಠಿಣವಾಗಿ ಇಲ್ಲಿಹೋಳಿ ಹಬ್ಬದ ಕರಿ ಆಚರಿಸಲಾಗುತ್ತದೆ.

ಕಾಮಣ್ಣನಿಗೂ ಕಾವಲು: ಕಾಮದಹನದ ತನಕ ಕಳಸನಟ್ಟಿಯ ಮುಂದಿನ ರಸ್ತೆಯಲ್ಲಿಯಾರೂ ಅಪರಿಚಿತರು ಬಾರದಂತೆ ಕಾವಲು ಕಾಯಲು ಜನರನ್ನು ನೇಮಿಸಲಾಗುತ್ತದೆ. ಓಣಿ ಸಂಪರ್ಕಿಸುವ ಮುಖ್ಯ ರಸ್ತೆಯ ತುದಿಗೆ ದೊಡ್ಡದಾದ ಮರವನ್ನು ರಸ್ತೆಗೆ ಅಡ್ಡಲಾಗಿ ಇಡಲಾಗುತ್ತದೆ. ಇದರಿಂದ ಬೀದಿ ತುದಿಯಲ್ಲೇ ವಾಹನಗಳನ್ನು ನಿಲ್ಲಿಸಲಾಗಿತ್ತು. ನಾಗರಿಕರು ಕಾಲಿಗೆ ಚಪ್ಪಲಿ ಧರಿಸದೇ ಓಡಾಡಿದರು.

ಎಲೆ, ಅಡಕೆ ರೂಪದಲ್ಲಿದಂಡ: ಇದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದ ಆಚರಣೆಯಾಗಿದೆ. ಕೃಷಿ ಮತ್ತು ಕೃಷಿ ಕೂಲಿಯನ್ನೇ ಜೀವನಾಧಾರ ಮಾಡಿಕೊಂಡಿರುವ ಇಲ್ಲಿನ ಜನರಿಗೂ ಈ ಕರಿ ಆಚರಣೆ ಯಾವಾಗ ಮುನ್ನೆಲೆಗೆ ಬಂತು ಎನ್ನುವುದು ಗೊತ್ತಿಲ್ಲ. ಆದರೆ, ಒಂದು ನಂಬಿಕೆ ಆಧಾರದಲ್ಲಿಈವರೆಗೂ ನಡೆದುಕೊಂಡು ಬಂದಿದೆ. ಯಾರಾದರೂ ನಿಯಮ ಮೀರಿದರೆ ನಿಗದಿಪಡಿಸಿದ ತೆಂಗಿನ ಕಾಯಿ, ಎಲೆ ಅಡಕೆ ರೂಪದಲ್ಲಿದಂಡ ವಸೂಲಿ ಮಾಡಲಾಗುತ್ತದೆ.

ಫೋಟೊ5ಇಟಗಿ1:

ಇಟಗಿ ಗ್ರಾಮದ ಕಳಸನಟ್ಟಿ ಬೀದಿಯಲ್ಲಿಕರಿ ಆಚರಣೆ ನಿಮಿತ್ತ ವಾಹನಗಳನ್ನು ಬೀದಿಯ ತುದಿಯಲ್ಲೇ ನಿಲ್ಲಿಸಿರುವುದು.