ತಂಬಾಕು ಮುಕ್ತ ಜೀವನ ನಿಧಿಮ್ಮಧಿದಾಧಿಗಲಿ
ಚಿತ್ರದುರ್ಗ: ದುಶ್ಚಟಗಳು ಕೇವಲ ವ್ಯಕ್ತಿಯ ಆರೋಗ್ಯ ಮಾತ್ರವಲ್ಲದೆ, ಇಡೀ ಕುಟುಂಬದ ನೆಮ್ಮದಿಯನ್ನೂ ಹಾಳು ಮಾಡುತ್ತದೆ. ಆದ್ದರಿಂದ ದುಶ್ಚಟಗಳಿಂದ ದೂರವಿರಬೇಕು ಎಂದು ಜಿಲ್ಲಾತಂಬಾಕು ನಿಯಂತ್ರಣ ಕೋಶದ ಜಿಲ್ಲಾಸಲಹೆಗಾರ ಬಿ.ಎಂ.ಪ್ರಭುದೇವ ಸಲಹೆ ನೀಡಿದರು.
ನಗರದ ಜಿಲ್ಲಾಕಾರಾಗೃಹದಲ್ಲಿಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾತಂಬಾಕು ನಿಯಂತ್ರಣ ಕೋಶದಿಂದ ಈಚೆಗೆ ಆಯೋಜಿಸಿದ ತಂಬಾಕು ಸೇವನೆಯ ದುಷ್ಪರಿಣಾಮಗಳ ಜಾಗೃತಿ ಕಾರ್ಯಕ್ರಮದಲ್ಲಿಮಾತನಾಡಿದರು.
ತಂಬಾಕು ಮತ್ತು ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ಮನಸ್ಸು ತನ್ನ ಹತೋಟಿಯಲ್ಲಿರುವುದಿಲ್ಲ. ಇಂತಹ ಅಮಲಿನ ಸ್ಥಿತಿಯಲ್ಲಿಯೇ ಅರಿಯದಂತೆ ಹಲವು ಅಪರಾಧ ಕೃತ್ಯಗಳು ಜರುಗುತ್ತವೆ ಎಂದರು.
ಜೈಲರ್ ರಾಜೇಂದ್ರ ಕೋಪರ್ಡೆ ಮಾತನಾಡಿ, ಕಾರಾಗೃಹದಲ್ಲಿನೀಡಲಾಗುವ ಇಂತಹ ಜಾಗೃತಿ ಕಾರ್ಯಕ್ರಮ ಸದುಪಯೋಗ ಪಡೆದುಕೊಳ್ಳಬೇಕು. ಇಲ್ಲಿಕಲಿತ ಅಂಶಗಳನ್ನು ಜೀವನದಲ್ಲಿಅಳವಡಿಸಿಕೊಂಡು ತಂಬಾಕು ಮುಕ್ತ ಜೀವನ ನಡೆಸಬೇಕು ಎಂದರು.
ಕೆ.ಎಂ.ತಿಪ್ಪೇಸ್ವಾಮಿ, ಸಹಾಯಕ ಜೈಲರ್ ರಾಮಣ್ಣ ಹೆರಕಲ್ , ಶಿಕ್ಷಕ ಧಿಶ್ರೀರಾಮರೆಡ್ಡಿ, ಡಾ.ಅಕ್ಷತಾ ಹಾಗೂ ಕಾರಾಗೃಹ ಸಿಬ್ಬಂದಿ ಇದ್ದರು.
ಫೋಟೊ ಕ್ಯಾಪ್ಷನ್ /4ಸಿಟಿಡಿ30
ಚಿತ್ರದುರ್ಗ ಜಿಲ್ಲಾಕಾರಾಗೃಹದಲ್ಲಿಜಿಲ್ಲಾತಂಬಾಕು ನಿಯಂತ್ರಣ ಕೋಶದಿಂದ ಆಯೋಜಿಸಿದ್ದ ತಂಬಾಕು ಸೇವನೆಯ ದುಷ್ಪರಿಣಾಮಗಳ ಜಾಗೃತಿ ಕಾರ್ಯಕ್ರಮದಲ್ಲಿಜಿಲ್ಲಾಸಲಹೆಗಾರ ಬಿ.ಎಂ.ಪ್ರಭುದೇವ ಮಾತನಾಡಿದರು.

