ಕುಂದಾಪುರ : ನಿಷ್ಠಾವಂತ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಮಧುಕರ್ ಶೆಟ್ಟಿ ಅವರು ವೃತ್ತಿ ಬದುಕಿನಲ್ಲಿಶ್ರದ್ಧೆ, ಶಿಸ್ತು ಮತ್ತು ಬದ್ಧತೆಗೆ ದರ್ಪಣದಂತಿದ್ದರು. ಅವರ ಸರಳ ಬದುಕು, ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವವನ್ನು ಈ ಸಮಾಜ ಎಂದೂ ಮರೆಯಲು ಸಾಧ್ಯವಿಲ್ಲ. ಮಧುಕರ್ ಶೆಟ್ಟಿಯವರ ವ್ಯಕ್ತಿತ್ವ ಯುವಜನತೆಗೆ ಮಾದರಿ ಎಂದು ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ನ ಸಂಚಾಲಕ ವಸಂತ್ ಗಿಳಿಯಾರ್ ಹೇಳಿದರು.
ಅವರು ಯಡ್ಯಾಡಿ-ಮತ್ಯಾಡಿಯಲ್ಲಿನಡೆಯುತ್ತಿರುವ ಇಲ್ಲಿನ ಡಾ.ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇ ಷÜ ಶಿಬಿರದಲ್ಲಿವಿಶೇಷ ಉಪನ್ಯಾಸ ನೀಡಿದರು.
ಸುಣ್ಣಾರಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ನಾಗರಾಜ್ ಶೆಟ್ಟಿ, ಶಿರಿಯಾರದ ಉದ್ಯಮಿ ಅಭಿನಂದನ್ ಶೆಟ್ಟಿ, ಶಿವಶಾಂತಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಮೋಹನದಾಸ್ ಶೆಟ್ಟಿ, ಗ್ರಾ.ಪಂ. ಸದಸ್ಯ ಸಚಿನ್ ಶೆಟ್ಟಿ ಜಪ್ತಿ, ರಾಮ್ ಕುಮಾರ್ ಗುಡ್ಡೆಯಂಗಡಿ, ಯಶೋಧ, ಪಾರ್ವತಿ,ರಮೇಶ್ ಪೂಜಾರಿ, ಶಿಬಿರಾಧಿಕಾರಿಗಳಾದ ರಾಜೇಶ್ ಶೆಟ್ಟಿ ವಕ್ವಾಡಿ ಮತ್ತು ಪೂಜಾ ಕುಂದರ್ ಉಪಸ್ಥಿತರಿದ್ದರು. ಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು.
ಪೋಟೊ//5ಕೆ-ವಿಎಸ್ ಎನ್ //. ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ನ ವಸಂತ ಗಿಳಿಯಾರು ಉಪನ್ಯಾಸ ನೀಡಿದರು.

