ಬಳಸಿ- ಸಹಕಾರ ಸಂಘಗಳು ಆಧುನಿಕತೆ ಅಳವಡಿಸಿಕೊಳ್ಳಲಿ

Contributed bykeshavmurthy8@gmail.com|Vijaya Karnataka

ಮೈಸೂರು ವಿವಿ ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್‌ ಅವರು ಸಹಕಾರ ಸಂಘಗಳು ಆಧುನಿಕ ನಿರ್ವಹಣಾ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದಾರೆ. ಗ್ರಾಮೀಣ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವದ್ದು. ಅವುಗಳ ಕಾರ್ಯಕ್ಷಮತೆ ಹೆಚ್ಚಿಸಲು ವೃತ್ತಿಪರ ನಿರ್ವಹಣೆ ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟರು. ತರಬೇತಿ, ನಾಯಕತ್ವ ಮತ್ತು ವೃತ್ತಿಪರ ಕೌಶಲಗಳ ಅಭಿವೃದ್ಧಿ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಅಗತ್ಯವಾಗಿದೆ.

development of cooperatives with modernization

ಮೈಸೂರು ವಿವಿ ಕುಲಪತಿ ಪ್ರೊ.ಎನ್ .ಕೆ.ಲೋಕನಾಥ್ ಹೇಳಿಕೆ

ವಿಕ ಸುದ್ದಿಲೋಕ ಮೈಸೂರು

ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಯಲ್ಲಿಸಹಕಾರ ಸಂಘಗಳು ಆಧುನಿಕ ನಿರ್ವಹಣಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್ .ಕೆ. ಲೋಕನಾಥ್ ಹೇಳಿದರು.

ಮಾನಸಗಂಗೋತ್ರಿಯಲ್ಲಿರುವ ಅಭಿವೃದ್ಧಿ ಅಧ್ಯಯನ ಸಂಸ್ಥೆ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ರೂಸಾ 2.0 ಯೋಜನೆಯಡಿ ಆಯೋಜಿಸಿದ್ದ ಸಹಕಾರ ಸಂಘಗಳ ನಿರ್ವಹಣೆಯ ವೃತ್ತಿಪರೀಕರಣ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

‘‘ ಸಹಕಾರ ಸಂಘಗಳು ಗ್ರಾಮೀಣ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿಮಹತ್ವದ ಪಾತ್ರವಹಿಸುತ್ತಿದ್ದು, ಅವುಗಳ ಕಾರ್ಯಕ್ಷಮತೆ ಹೆಚ್ಚಿಸಲು ವೃತ್ತಿಪರ ನಿರ್ವಹಣೆ ಅತ್ಯವಶ್ಯಕ. ಸಹಕಾರ ಸಂಘಗಳಿಂದ ಹಲವಾರು ಗ್ರಾಮಗಳು ಕೂಡ ಅಭಿವೃದ್ಧಿ ಹೊಂದುತ್ತಿವೆ,’’ ಎಂದರು.

ನ್ಯಾಷನಲ್ ಕೋ-ಆಪರೇಟಿವ್ ಯೂನಿಯನ್ ಆಫ್ ಇಂಡಿಯಾ ನಿವೃತ್ತ ನಿರ್ದೇಶಕ ಡಾ.ಎ.ಆರ್ .ಶ್ರೀನಾಥ್ ಮಾತನಾಡಿ, ‘‘ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ತರಬೇತಿ, ನಾಯಕತ್ವ ಮತ್ತು ವೃತ್ತಿಪರ ಕೌಶಲಗಳ ಅಭಿವೃದ್ಧಿ ಅತ್ಯಂತ ಅಗತ್ಯವಾಗಿದೆ. ಸಹಕಾರಿ ಸಂಘ ಸಂಸ್ಥೆಗಳು ಬೆಳೆದರೆ, ಜನರು ಕೂಡ ಅಭಿವೃದ್ಧಿ ಹೊಂದಿದಂತೆ,’’ ಎಂದರು.

ಸೆಂಟರ್ ಫಾರ್ ಎಕನಾಮಿಕ್ ಆ್ಯಂಡ್ ಸೋಷಿಯಲ್ ಸ್ಟಡೀಸ್ ನಿರ್ದೇಶಕ ಡಾ.ಚಿ.ಕೃಷ್ಣರಾವ್ ಮಾತನಾಡಿದರು. ಅಭಿವೃದ್ಧಿ ಅಧ್ಯಯನ ಸಂಸ್ಥೆ ನಿರ್ದೇಶಕ ಪೊ›. ಎಚ್ . ಎಂ. ಚಂದ್ರಶೇಖರ್ , ಪೊ›. ಎಂ.ಮೀರಾ ಮತ್ತಿತರರು ಇದ್ದರು.

ಕ್ಯಾಪ್ಷನ್ :

ಮಾನಸಗಂಗೋತ್ರಿಯಲ್ಲಿರುವ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಸಭಾಂಗಣದಲ್ಲಿಆಯೋಜಿಸಿದ್ದ ಕಾರ್ಯಕ್ರಮವನ್ನು ಕುಲಪತಿ ಪ್ರೊ.ಎನ್ .ಕೆ.ಲೋಕನಾಥ್ ಉದ್ಘಾಟಿಸಿದರು.