8ಕೆಎಂಪಿ 2
ಕಮಲಾಪುರದ ಬೆಳಕೋಟಾದಲ್ಲಿ ಭಾನುವಾರ ಡಾ. ಅಂಬೇಡ್ಕರರ 135ನೇ ಜಯಂತಿ ಕಾರ್ಯಕ್ರಮದ ಪೂರ್ವ ಭಾವಿ ಸಭೆ ಮತ್ತು ಪದಾಧಿಕಾರಿಗಳ ನೇಮಕ ಮಾಡಲಾಯಿತು. ಕಾಂಗ್ರೆಸ್ ಮುಖಂಡ ಜಗದೇವಪ್ಪ ಅಂಕಲಗಿ, ಶರಣು ಗೌರೆ, ನರೇಶ ಹರಸೂರಕರ್ , ನಿಂಗಪ್ಪ ಪ್ರಬುದಕರ್ , ವಿನೋದ ವಾಲಿ , ನಂದನಕುಮಾರ ಹರಸೂರ ಮತ್ತಿತರರು ಇದ್ದರು.
ಅಂಬೇಡ್ಕರ್ ಜಯಂತಿ ಪೂರ್ವ ಭಾವಿ ಸಭೆ
ಕಮಲಾಪುರ: ಪಟ್ಟಣದ ಬೆಳಕೋಟಾ ಕ್ರಾಸ್ ನಲ್ಲಿಭಾನುವಾರ ಡಾ. ಅಂಬೇಡ್ಕರ್ ಅವರ 135ನೇ ಜಯಂತಿಯ ಕಾರ್ಯಕ್ರಮದ ಪೂರ್ವ ಭಾವಿ ನಡೆಯಿತು. ಅಲ್ಲದೇ ಮುಖಂಡ ಜಗದೇವಪ್ಪ ಅಂಕಲಿಗಿಯವರ ನೇತೃತ್ವದಲ್ಲಿವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡರಾದ ನಿಂಗಪ್ಪ ಪ್ರಬುದ್ಧಕರ ಅವರ ಜನ ಸೇವೆ ಹಾಗೂ ಅಂಬೇಡ್ಕರ್ ವಾದಿಯಾಗಿದ್ದರಿಂದ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ವಿನೋದವಾಲಿಯವರಿಗೆ ಉಪಾಧ್ಯಕ್ಷರಾಗಿ, ಜಗದೇವಪ್ಪ ಅಂಕಲಗಿ ಅವರಿಗೆ ಗೌರವ ಅಧ್ಯಕ್ಷರನ್ನಾಗಿ ಸರ್ವ ಜನ ಹಾಗೂ ಅಂಬೇಡ್ಕರ್ ಅಭಿಮಾನಿಗಳು ಸಹಯೋಗದಲ್ಲಿಆಯ್ಕೆ ಮಾಡಲಾಯಿತು.
ಏಪ್ರಿಲ್ 14 ರಂದು ಜರುಗುವ ಜಯಂತಿಯ ಕಾರ್ಯಕ್ರಮಕ್ಕೆ ಎಲ್ಲಅಂಬೇಡ್ಕರ್ ಅಭಿಮಾನಿಗಳು , ಎಲ್ಲಾಹಳ್ಳಿಗಳ ಜನರು ಸೇರಿ ಅದ್ಧೂರಿಯಾಗಿ ಜಯಂತಿ ಆಚರಿಸಬೇಕು ಎಂದು ಜಗದೇವಪ್ಪ ಅಂಕಲಗಿ ಕಿವಿಮಾತು ಹೇಳಿದರು.
ಸಭೆಯಲ್ಲಿಶರಣು ಗೌರೆ, ಗಿರೇಪ್ಪ ಬೆಳಕೋಟಾ, ಸುದೀರ್ ಹೊನ್ನಳಿ, ರಮೇಶ ಬೆಳಕೋಟಾ, ನರೇಶ ಹರಸೂರ, ನಂದನಕುಮಾರ ಹರಸೂರ ಮತ್ತಿತರರು ಇದ್ದರು.

