ಕಾನೂನು ಪಾಲನೆ ಎಲ್ಲರ ಕರ್ತವ್ಯ

Contributed byhotiblhvk@gmail.com|Vijaya Karnataka

ನಯಾನಗರ ಸರಕಾರಿ ಪ್ರೌಢಶಾಲೆಯಲ್ಲಿ ಪೋಷಕ-ಶಿಕ್ಷಕರ ಮಹಾಸಭೆ ನಡೆಯಿತು. ಪೋಕ್ಸೊ, ಬಾಲ್ಯ ವಿವಾಹ ನಿಷೇಧ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕಾನೂನು ಪಾಲನೆ ಎಲ್ಲರ ಕರ್ತವ್ಯ ಎಂದು ಎಸಿಡಿಪಿಒ ಸುಜಾತಾ ಮುರಾರಿ ಹೇಳಿದರು. ಮಕ್ಕಳಿಗೆ ಆಸ್ತಿಯಾಗಿ ಬೆಳೆಸಲು ಪಾಲಕರಿಗೆ ಸಲಹೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು.

legal compliance parents responsibility and a tribute to childrens future

ವಿಕ ಸುದ್ದಿಲೋಕ ಬೈಲಹೊಂಗಲ

ಪೋಷಕರ ನಡೆ, ನುಡಿ, ಆಚರಣೆಯೇ ಮಕ್ಕಳಿಗೆ ಸ್ಫೂರ್ತಿ ಹಾಗೂ ರಕ್ಷಣೆಯಾಗಲೆಂದು ಎಸಿಡಿಪಿಒ ಸುಜಾತಾ ಮುರಾರಿ ಹೇಳಿದರು.

ನಯಾನಗರ ಸರಕಾರಿ ಪ್ರೌಢಶಾಲೆಯಲ್ಲಿಪೋಷಕ - ಶಿಕ್ಷಕರ ಮಹಾಸಭೆ, ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಪೊಲೀಸ್ ಇಲಾಖೆ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿಜರುಗಿದ ಪೋಕ್ಸೊ, ಬಾಲ್ಯ ವಿವಾಹÜ, ಬಾಲ ಕಾರ್ಮಿಕ ನಿಷೇದ ಕಾಯ್ದೆಗಳ ಜಾಗೃತಿ ಕಾರ್ಯಕ್ರಮ, ಗಣಿತ, ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವೃತ್ತಿ ಮಾರ್ಗದರ್ಶನ ಮೇಳದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ‘‘ ಕಾನೂನು ಪಾಲನೆ ಎಲ್ಲರ ಕರ್ತವ್ಯ. ಪಾಲಕರು ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ, ಮಕ್ಕಳನ್ನೇ ಆಸ್ತಿ ಆಗುವಂತೆ ಬೆಳೆಸಿ. ಮಕ್ಕಳಿಗಾಗಿ ಸಮಯ ಮೀಸಲಿಡಿ’’, ಎಂದರು.

ಪ್ರೌಢಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ನಾರಾಯಣ ನಲವಡೆ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶಿಲ್ಪಾ ಗಂಗೋಳ, ಪಾಲಕರು ಹಾಗೂ ಮಕ್ಕಳಿಗೆ ಪ್ರಮಾಣವಚನ ಬೋಧಿಸಿದರು.

ಪ್ರೌಢಶಾಲೆ ಮುಖ್ಯೋಪಾಧ್ಯಾಯ ನಾಗೇಶ ಮಾಳನ್ನವರ, ನ್ಯಾಯವಾದಿ ಶಾಂತಾ ಶಿದ್ರಾಮನ್ನವರ, ಪ್ರಕಾಶ ಸಂಗೊಳ್ಳಿ, ಗೀತಾ ಚಂದರಗಿ, ನಿಂಗಪ್ಪ ಅಳಗೋಡಿ, ಸೋಮನಿಂಗ ಅಡಕಿ, ಮೌನೇಶ ಬಡಿಗೇರ, ಸುನಿತಾ ಪತ್ತಾರ, ಮೊಬಿನಾಸಿರಿನ ಮುಲ್ಲಾನವರ ಉಪಸ್ಥಿತರಿದ್ದರು. ಸಿದ್ದಯ್ಯ ಹಿರೇಮಠ ಸ್ವಾಗತಿಸಿದರು. ರವೀಂದ್ರಕುಮಾರ ಹಾದಿಮನಿ ನಿರೂಪಿಸಿದರು. ಬಸವರಾಜ ಪತ್ತಾರ ವಂದಿಸಿದರು.

ಫೋಟೊ: (8ಹೆಚ್ ಟಿಪಿ 3):

ನಯಾನಗರ ಸರಕಾರಿ ಪ್ರೌಢಶಾಲೆಯಲ್ಲಿನಾನಾ ಕಾಯ್ದೆಗಳ ಜಾಗೃತಿ ಕಾರ್ಯಕ್ರಮ ನಡೆಯಿತು.