ಸಮಾಜ ಸುಧಾರಣೆ ಕಾರ್ಯ ಶ್ಲಾಘನೀಯ

Contributed byravideshpande77@gmail.com|Vijaya Karnataka

ಬಾಗಲಕೋಟೆಯಲ್ಲಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನದಿಂದ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತಿಗಳು ಸಮಾಜ ಸುಧಾರಣೆಗೆ ನೀಡುವ ಕೊಡುಗೆ ಶ್ಲಾಘನೀಯ ಎಂದು ಕುಲಪತಿ ಡಾ.ವಿಷ್ಣುವರ್ಧನ ಹೇಳಿದರು. ಸಾಹಿತಿ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಸಾಹಿತ್ಯ ಜೀವಂತವಿಡುತ್ತದೆ ಎಂದರು. ಪ್ರಮೋದ ಮರವಂತೆ, ಸಿದ್ದು ಸತ್ಯಣ್ಣವರ, ಶೋಭಾ ನಾಯಕ, ಗುಂಡುರಾವ್‌ ದೇಸಾಯಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

steps of reflection social reform in the triveni shelly literary award

ತ್ರಿವೇಣಿ ಶೆಲ್ಲಿಕೇರಿ, ಸುಶ್ರಾವ್ಯ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ ಪ್ರದಾನ

ಸಮಾಜ ಸುಧಾರಣೆ ಕಾರ್ಯ ಶ್ಲಾಘನೀಯ

ವಿಕ ಸುದ್ದಿಲೋಕ ಬಾಗಲಕೋಟೆ

‘‘ಕೃತಿಗಳ ಮೂಲಕ ಸಾಹಿತಿಗಳು ಸಮಾಜದಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಸಮಾಜ ಸುಧಾರಣೆಗೆ ಮುಂದಾಗಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ’’ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ವಿಷ್ಣುವರ್ಧನ ಹೇಳಿದರು.

ನವನಗರದ ಡಿಸಿಸಿ ಬ್ಯಾಂಕ್ ಸಭಾಭವನದಲ್ಲಿಯಂಡಿಗೇರಿಯ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನದಿಂದ ಹಮ್ಮಿಕೊಂಡ ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ ಮತ್ತು ಸುಶ್ರಾವ್ಯ ಶೆಲ್ಲಿಕೇರಿ ಶಿಶು ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘‘ಸಾಹಿತಿಗಳು ತಮ್ಮ ಕೃತಿಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವುದು ಪರೋಕ್ಷವಾಗಿ ಸಮಾಜದ ಅಭಿವೃದ್ಧಿಗೆ ಪೂರಕವಾಗುತ್ತದೆ. ಹಲವು ಜಂಜಾಟಗಳ ಮಧ್ಯೆ ಸಾಹಿತ್ಯ ಕೇಳುವುದು, ಓದುವುದರಿಂದ ಮನಸ್ಸು ಉಲ್ಲಾಸಿತಗೊಳ್ಳುತ್ತದೆ’’ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ ಮಾಡಿದ ಸಾಹಿತಿ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ, ‘‘ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಜೀವಂತವಾಗಿಡುವ ಕಾರ್ಯ ಸಾಹಿತ್ಯ ಮಾಡುತ್ತದೆ’’ ಎಂದರು.

ತೀರ್ಪುಗಾರರಾದ ಸಾಹಿತಿ ಕಂನಾಡಿಗ ನಾರಾಯಣ, ರಾಜಶೇಖರ ಕುಕ್ಕುಂದ, ಪ್ರತಿಷ್ಠಾನದ ಅಧ್ಯಕ್ಷ ಮಲ್ಲಿಕಾರ್ಜುನ ಶೆಲ್ಲಿಕೇರಿ ಮಾತನಾಡಿದರು.

ಕಾರ್ಯದರ್ಶಿ ಶಿವಾನಂದ ಶೆಲ್ಲಿಕೇರಿ, ಸಂಗಮೇಶ ಪಾನಶೆಟ್ಟಿ, ಡಾ.ಚಂದ್ರಶೇಖರ ಕಾಳನ್ನವರ, ಮಹಾಂತೇಶ ಹೊದ್ಲೂರ, ಗುರು ಗಾಣಿಗೇರ ಇತರರಿದ್ದರು.

ಬಾಕ್ಸ್

ಪ್ರಶಸ್ತಿ ಪ್ರದಾನ

2025ರ ತ್ರಿವೇಣಿ ಶೆಲ್ಲಿಕೇರಿ ಪ್ರಶಸ್ತಿಗೆ ಪ್ರಮೋದ ಮರವಂತೆ ಅವರ ಕಾದಂಬರಿ ತೊಂಡೆ ಚಪ್ಪರ, ಸಿದ್ದು ಸತ್ಯಣ್ಣವರ ಕಥಾ ಸಂಕಲನ ಒಂದು ತೇಗದ ಕುರ್ಚಿ, ಶೋಭಾ ನಾಯಕ ಅವರ ಕವನ ಸಂಕಲನ ಅರ್ಧ ಮುಖಗಳ ಶಹರ ಹಾಗೂ 2025ರ ಸುಶ್ರಾವ್ಯ ಶೆಲ್ಲಿಕೇರಿ ಶಿಶು ಸಾಹಿತ್ಯ ಪ್ರಶಸ್ತಿಗೆ ಗುಂಡುರಾವ್ ದೇಸಾಯಿ ಅವರ ಚಾರ್ಲಿ ಚಾರ್ಲಿ ವ್ಹೇರ್ ಆರ್ ಯೂ ಆಯ್ಕೆ ಮಾಡಿ ಪ್ರಶಸ್ತಿ, ತಲಾ 10 ಸಾವಿರ ನಗದು ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಕೋಟ್

ಮಹಿಳೆಯರ ಹೆಸರಿನಲ್ಲಿಪ್ರತಿಷ್ಠಾನ ಸ್ಥಾಪಿಸಿ ಸಾಹಿತ್ಯ ಸಂಸ್ಕೃತಿಯ ಸಾಧಕರಿಗೆ ತ್ರಿವೇಣಿ, ಸುಶ್ರಾವ್ಯ ಹೆಸರಲ್ಲಿಪ್ರಶಸ್ತಿ ನೀಡುತ್ತಿರುವುದು ಮಾದರಿಯಾಗಿದೆ. ಇಂದಿನ ಯುಗದಲ್ಲಿಬದುಕಿನ ತಿಳಿವಳಿಕೆಯಿಲ್ಲದೆ ಗೂಗಲ್ ಮೂಲಕ ಮಾಹಿತಿಯ ದಾಸರಾಗಿದ್ದೇವೆ. ಮನುಷ್ಯ ಜೀವನ ಪಾಠದ ಜ್ಞಾನದೊಂದಿಗೆ ತನ್ನನ್ನು ತಾನು ಅರಿತುಕೊಳ್ಳಲು ಸಾಧ್ಯವಿದೆ.

-ಡಾ.ಹೇಮಾ ಪಟ್ಟಣಶೆಟ್ಟಿ, ಸಾಹಿತಿ.

ತ್ರಿವೇಣಿ-ಬಿಜಿಕೆ-8

ಬಾಗಲಕೋಟೆಯಲ್ಲಿತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನದಿಂದ ತ್ರಿವೇಣಿ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.