ಆರೋಗ್ಯಕ್ಕೆ ಸಮತೋಲನ ಆಹಾರ ಅಗತ್ಯ

Contributed bykugweprakash@gmail.com|Vijaya Karnataka

ಸಾಗರದ ಡಾ. ಜಿ.ಎ. ನಾರಿಬೊಲಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಸಮತೋಲನ ಆಹಾರದ ಮಹತ್ವವನ್ನು ಡಾ. ಎ.ಯು. ಸೌಮ್ಯ ವಿವರಿಸಿದರು. ಹೃದಯಾಘಾತ ಮತ್ತು ಪ್ರಥಮ ಚಿಕಿತ್ಸೆ ಬಗ್ಗೆ ಡಾ. ಸಚಿನ್ ಮಾಹಿತಿ ನೀಡಿದರು. ಸುಮಾರು 100 ಪ್ರಶಿಕ್ಷಣಾರ್ಥಿಗಳು ಶಿಬಿರದ ಸದುಪಯೋಗ ಪಡೆದರು.

workshop on balanced diet for health

ನಾರಿಬೊಲಿ ಶಿಕ್ಷಣ ಮಹಾವಿದ್ಯಾಲಯದಲ್ಲಿಆರೋಗ್ಯ ತಪಾಸಣಾ ಶಿಬಿರ

ಆರೋಗ್ಯಕ್ಕೆ ಸಮತೋಲನ ಆಹಾರ ಅಗತ್ಯ

ವಿಕ ಸುದ್ದಿಲೋಕ ಸಾಗರ

ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಲು ಸಮತೋಲನ ಆಹಾರ ಪದ್ಧತಿ ಅತ್ಯಂತ ಮುಖ್ಯವಾಗಿದ್ದು, ನಾವು ಸೇವಿಸುವ ಆಹಾರದಲ್ಲಿಪೋಷಕಾಂಶಗಳ ಸರಿಯಾದ ಪ್ರಮಾಣ ಇರಬೇಕು ಎಂದು ಸುಮುಖ ಆಸ್ಪತ್ರೆಯ ಮಧುಮೇಹ ಚಿಕಿತ್ಸಾ ತಜ್ಞೆ ಡಾ.ಎ.ಯು.ಸೌಮ್ಯ ಹೇಳಿದರು.

ನಗರದ ಎಂಡಿಎಫ್ ಸಾಗರ, ಸುಮುಖ ಸಹಾಯ ಹಸ್ತ ಸಾಗರ, ರೋಟರಿ ರಕ್ತನಿಧಿ ಸಾಗರ ಹಾಗೂ ಮಲೆನಾಡು ಔಷಧ ಮಾರಾಟಗಾರರ ಸಂಘ ಸಾಗರ ಸಂಯುಕ್ತವಾಗಿ ಡಾ. ಜಿ.ಎ. ನಾರಿಬೊಲಿ ಶಿಕ್ಷಣ ಮಹಾವಿದ್ಯಾಲಯದ ಬಿಎಡ್ ಪ್ರಶಿಕ್ಷಣಾರ್ಥಿಗಳಿಗಾಗಿ ಶನಿವಾರ ಹಮ್ಮಿಕೊಂಡಿದ್ದ ಆರೋಗ್ಯ ಮತ್ತು ರಕ್ತ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಆಹಾರದಲ್ಲಿಪೋಷಕಾಂಶಗಳ ಸಮತೋಲನ ಕಾಪಾಡಿಕೊಳ್ಳಲು ‘ಗೋಲ್ಡನ್ ಪ್ಲೇಟ್ ರೂಲ್ ’ ಪಾಲನೆ ಅಗತ್ಯವಿದೆ ಎಂದು ತಿಳಿಸಿದರು.

ಮಾಸಿಕ ಋುತುಸ್ರಾವದ ಸಂದರ್ಭ ಎದುರಾಗುವ ಆರೋಗ್ಯ ಸಮಸ್ಯೆಗಳು, ಅವುಗಳ ನಿಯಂತ್ರಣ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪ್ರಶಿಕ್ಷಣಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ರೋಟರಿ ರಕ್ತನಿಧಿಯ ವೈದ್ಯ ಡಾ. ಸಚಿನ್ ಅವರು ಹೃದಯಾಘಾತ ಮತ್ತು ಹೃದಯಸ್ತಂಭನಕ್ಕೆ ಕಾರಣವಾಗುವ ಅಂಶಗಳ ಕುರಿತು ಮಾಹಿತಿ ಕೊಡುವುದರ ಜತೆಗೆ ಪ್ರಥಮ ಚಿಕಿತ್ಸೆ ನೀಡುವ ವಿಧಾನಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಎಂಡಿಎಫ್ ಅಧ್ಯಕ್ಷ ಬಿ.ಆರ್ .ಜಯಂತ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಡಾ. ಹೆಚ್ .ಎಂ. ಶಿವಕುಮಾರ್ ಸ್ವಾಗತಿಸಿದರು. ಸಿಂಚನಾ, ವಿನುತಾ ನಿರೂಪಿಸಿದರು.

ಶಿಬಿರದಲ್ಲಿಸುಮಾರು 100 ಮಂದಿ ಪ್ರಶಿಕ್ಷಣಾರ್ಥಿಗಳು ಆರೋಗ್ಯ ಹಾಗೂ ರಕ್ತ ತಪಾಸಣೆಯ ಸದುಪಯೋಗ ಪಡೆದರು.

ಚಿತ್ರಶೀರ್ಷಿಕೆ

08ಎಸ್ ಜಿಆರ್ 1 :

ಸಾಗರದ ಡಾ. ಜಿ.ಎ.ನಾರಿಬೊಲಿ ಶಿಕ್ಷಣ ಮಹಾವಿದ್ಯಾಲಯದ ಬಿಎಡ್ ಪ್ರಶಿಕ್ಷಣಾರ್ಥಿಗಳಿಗಾಗಿ ಶನಿವಾರ ಹಮ್ಮಿಕೊಂಡಿದ್ದ ಆರೋಗ್ಯ ಮತ್ತು ರಕ್ತ ತಪಾಸಣಾ ಶಿಬಿರವನ್ನು ಸುಮುಖ ಆಸ್ಪತ್ರೆಯ ಮಧುಮೇಹ ಚಿಕಿತ್ಸಾ ತಜ್ಞೆ ಡಾ.ಎ.ಯು.ಸೌಮ್ಯ ಉದ್ಘಾಟಿಸಿದರು.