ಪ್ರತಿದೂರು:

Contributed bysachinnk01@gmail.com|Vijaya Karnataka

ಧಾರವಾಡದ ಪ್ರೇಮಕುಮಾರ ಅವರು ಪ್ರತಿದೂರು ದಾಖಲಿಸಿದ್ದಾರೆ. ತಮ್ಯಾನಕೊಪ್ಪ ಗ್ರಾಮದ ಬಳಿ ಹೊಲ ನೋಡಿಕೊಂಡು ಮರಳುತ್ತಿದ್ದಾಗ ಜಗಳವಾಗಿದೆ. ಐದಾರು ಮಂದಿ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ. ಕಾರಿಗೆ ಕಲ್ಲಿನಿಂದ ಹೊಡೆದು ನಷ್ಟಪಡಿಸಿದ್ದಾರೆ. ನಾಲ್ವರಿಗೂ ಜೀವ ಬೆದರಿಕೆ ಹಾಕಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

assault in pratidur 5 6 suspects create mayhem

ಪ್ರತಿದೂರು :

ಹೊಲದಿಂದ ಮರಳಿ ಬರುತ್ತಿರುವಾಗ 5-6 ಜನರು ಆರೋಪಿಗಳು ಹಲ್ಲೆನಡೆಸಿ ಜೀವ ಬೆದರಿಕೆ ಹಾಕಿ ಕಾರಿಗೆ ಕಲ್ಲಿನಿಂದ ಹೊಡೆದು ನಷ್ಟಪಡಿಸಿರುವ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿಮಂಗಳವಾರ ಧಾರವಾಡದ ಪ್ರೇಮಕುಮಾರ ಎಂಬವರು ಪ್ರತಿದೂರು ದಾಖಲಿಸಿದ್ದಾರೆ.

ಹುಬ್ಬಳ್ಳಿಯ ಮಹ್ಮದಶಿರಾಜ, ಅಲ್ತಾಫ್ ಹಾಗೂ ಜಿಲಾನಿ ಹಾಗೂ ತನ್ನ ಮೇಲೆ ಹಲ್ಲೆನಡೆಸಲಾಗಿದೆ. ತಾಲೂಕಿನ ತಮ್ಯಾನಕೊಪ್ಪ ಗ್ರಾಮದಲ್ಲಿರುವ ಮಹ್ಮದಶಿರಾಜ ಅವರ ಹೊಲಕ್ಕೆ ಹೋಗಿ ಹೊಲವನ್ನು ನೋಡಿಕೊಂಡು ಮರಳಿ ಮುಂಡಗೋಡ ಬರುತ್ತಿರುವಾಗ ಜೀಲಾನಿ ಎಂಬುವವರು ಹಾಗೂ ಆ ಊರಿನ ಹುಡುಗನ ಜೊತೆ ಮಾತಿಗೆ ಮಾತು ಬೆಳೆದು ಜಗಳವಾಗುತ್ತಿದ್ದಾಗ ಸ್ಥಳಕ್ಕೆ ಬಂದ 5-6 ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.

ಬೇರೆ ಊರಿನಿಂದ ಬಂದು ನಮ್ಮ ಹುಡುಗನ ಜತೆ ಜಗಳ ಮಾಡುತ್ತಿರಾ ಎಂದು ಹಲ್ಲೆನಡೆಸಿ ಕಾರಿಗೆ ಕಲ್ಲಿನಿಂದ ಹೊಡೆದು ನಾಲ್ವರಿಗೂ ಜೀವ ಬೆದರಿಕೆ ಹಾಕಿರುವುದಾಗಿ ಪ್ರೇಮಕುಮಾರ ದೂರಿನಲ್ಲಿತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕ್ರಮಕೈಗೊಂಡಿದ್ದಾರೆ.

3ಎಮ್ ಎನ್ ಡಿ4