ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ

Contributed byrangaswamyrangatm@gmail.com|Vijaya Karnataka

ತುರುವೇಕೆರೆ ಪಟ್ಟಣದಲ್ಲಿ 7 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಬಾಲಕ ಅಂಗಡಿಗೆ ಹೋಗುತ್ತಿದ್ದಾಗ ನಾಯಿಗಳು ಏಕಾಏಕಿ ಕಚ್ಚಿವೆ. ತೊಡೆ, ಬೆನ್ನು ಸೇರಿದಂತೆ 8 ಕಡೆಗಳಲ್ಲಿ ಗಾಯಗಳಾಗಿವೆ. ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರು ಭಯದಿಂದ ಓಡಾಡುತ್ತಿದ್ದಾರೆ.

attack by stray dogs on child outrage among public

ತುರುವೇಕೆರೆ: ಪಟ್ಟಣದ ಮೀನಾಕ್ಷಿ ನಗರದ ಪೊಲೀಸ್ ಕ್ವಾರ್ಟರ್ಸ್ ಹಿಂಭಾಗದಲ್ಲಿ7 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಬಾಲಕ ಧನ್ವಿತ್ (7) ಅಂಗಡಿಗೆ ಹಿಂತಿಧಿರುಗುವ ವೇಳೆ ಬೀದಿನಾಯಿಗಳು ಏಕಾಏಕಿ ದಾಳಿ ನಡೆಸಿವೆ. ಸ್ಥಧಿಳೀಧಿಯಧಿರು ಎಷ್ಟೇ ಬಿಡಿಸಲು ಪ್ರಯತ್ನಿಸಿದರೂ ನಾಯಿಗಳ ಹಿಂಡು ಬಾಲಕನ ತೊಡೆ, ಬೆನ್ನು ಸೇರಿದಂತೆ ಸುಮಾರು 8 ಕಡೆಗಳಲ್ಲಿಕಚ್ಚಿವೆ. ಸದ್ಯಕ್ಕೆ ಬಾಲಕ ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಹಿಂದೆ ಅನೇಕ ಬಾರಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಪಪಂಗೆ ಹಲವು ಬಾರಿ ಮನವಿ ನೀಡಿದ್ದರೂ ಸಹ ಇಲಾಖೆ ಅಧಿಕಾರಿಗಳು ತಲೆಕೆಡಿಸಿಕೊಳ್ಳದೆ ನಿರ್ಲಕ್ಷತ್ರ್ಯತನ ತೋರುತ್ತಿದ್ದಾರೆ. ನಿತ್ಯ ಇಲ್ಲಿಓಡಾಡಲು, ಮಕ್ಕಳನ್ನು ಹೊರಗೆ ಕಳುಹಿಸಲು ಭಯವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.