ವಿಕ ಸುದ್ದಿಲೋಕ ಚಿಟಗುಪ್ಪ ತಾಲೂಕಿನ ಹಿಪ್ಪರಗಾ ಕ್ರಾಸ್ ನಲ್ಲಿನಿರ್ಮಿಸಲಾಗುತ್ತಿರುವ ಕಿತ್ತೂರರಾಣಿ ಚನ್ನಮ್ಮ ವಸತಿ ಶಾಲೆಯ ಶಂಕುಸ್ಥಾಪನೆ ಕಾರ್ಯಕ್ರಮವು ಬಿಜೆಪಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮತ್ತು ಜಿಲ್ಲಾಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನಡುವೆ ಜಟಾಪಟಿ ನಡೆದ ಘಟನೆ ನಡೆಯಿತು. ಸ್ಥಳದಲ್ಲಿಶಂಕುಸ್ಥಾಪನೆ ಕುರಿತು ಭಾರೀ ಹೈಡ್ರಾಮ ನಡೆಡಯಿತು. ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ನೇತೃತ್ವದಲ್ಲಿನೂರಾರು ಕಾರ್ಯಕರ್ತರು ಜಿಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ವಾಹನ ತಡೆದು, ಕಳೆದ ತಿಂಗಳೇ ಭೂಮಿ ಪೂಜೆ ಸಲ್ಲಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮತ್ತೆ ಈ ಕಾಮಗಾರಿಗೆ ಶಂಕುಸ್ಥಾಪನೆ ಮಾಡುವುದರ ಹಿಂದಿನ ಉದ್ದೇಶವೇನು? ಬಿಜೆಪಿ ಶಾಸಕರ ಅಭಿವೃದ್ಧಿ ಕೆಲಸಗಳ ಕಾಂಗ್ರೆಸ್ ಪಕ್ಷಕ್ಕೆ ಹೊಟ್ಟೆ ಕಿಚ್ಚು ಯಾಕೆ? ಹುಮನಾಬಾದ್ ನಲ್ಲಿಮಾತ್ರ ಯಾಕೆ ಈ ಪ್ರೊಟೊಕಾಲ್ , ಎಂಬಿತ್ಯಾದಿ ಪ್ರಶ್ನೆಗಳನ್ನು ಜಿಲ್ಲಾಉಸ್ತುವಾರಿ ಸಚಿವರ ಮುಂದೆ ಬಿಜೆಪಿ ಶಾಸಕರು, ಕಾರ್ಯಕರ್ತರು ಹಾಕಿದರು. ಈ ಸಮಯದಲ್ಲಿಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮತ್ತು ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಕಾರ್ ಮುಂದೆ ಹೋಗಲು ತಡೆಯಲು ಕಾರ್ಯಕರ್ತರು ಮುಂದಾದಾಗ ಪೊಲೀಸರು ಜನರನ್ನು ಚದುರಿಸಿ ಸಚಿವರು ಉದ್ಘಾಟನಾ ಸ್ಥಳಕ್ಕೆ ತೆರಳುವಂತೆ ಮಾಡಿದರು. ಕಾರ್ಯ ಸ್ಥಳಕ್ಕೆ ಶಾಸಕ ಮತ್ತು ಕಾರ್ಯಕರ್ತರನ್ನು ಬಾರದಂತೆ ಪೊಲೀಸರು ತಡೆದರು.

