ಗ್ರಹಣ ನಂತರ ವಿಶೇಷ ಪೂಜೆ

Contributed bybogurumesh@gmail.com|Vijaya Karnataka

ಮರಕುಂಬಿ ಶ್ರೀಚಕ್ರ ಸಮೇತ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಚಂದ್ರಗ್ರಹಣದ ಬಳಿಕ ವಿಶೇಷ ಪೂಜೆ ನಡೆಯಿತು. ಸೊಗಲ ಶ್ರೀಕ್ಷೇತ್ರದಲ್ಲೂ ಗ್ರಹಣದ ನಂತರ ಶ್ರೀ ಸೋಮೇಶ್ವರ ಹಾಗೂ ಶ್ರೀ ಶಿವ-ಪಾರ್ವತಿಯವರಿಗೆ ಶಾಸ್ತ್ರೋಕ್ತ ಪೂಜೆಗಳು ಜರುಗಿದವು. ಎರಡೂ ಕಡೆಗಳಲ್ಲಿ ದೇವಸ್ಥಾನಗಳನ್ನು ಶುಚಿಗೊಳಿಸಿ, ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ರಾತ್ರಿ ವಿಶೇಷ ಪೂಜೆ, ಅಭಿಷೇಕ ಹಾಗೂ ಮಹಾಮಂಗಳಾರತಿಗಳು ಜರುಗಿದವು.

special puja after lunar eclipse religious activities at the temple

ಮರಕುಂಬಿ: ಇಲ್ಲಿನ ಶ್ರೀಚಕ್ರ ಸಮೇತ ಚಾಮುಂಡೇಶ್ವರಿ ದೇವಸ್ಥಾನದಲ್ಲಿಚಂದ್ರಗ್ರಹಣ ಹಿನ್ನೆಲೆಯಲ್ಲಿಮಂಗಳವಾರ ಮಧ್ಯಾಹ್ನ 1.30ರಿಂದ ಸಂಜೆ 7ರವರೆಗೆ ಶ್ರೀದೇವಿಯ ದರ್ಶನ ಬಂದ್ ಮಾಡಲಾಗಿತ್ತು. ಗ್ರಹಣದ ನಂತರ ದೇವಸ್ಥಾನ ಶುಚಿಗೊಳಿಸಿ, ಶಾಸ್ತೊ್ರೕಕ್ತ ಪೂಜೆಗಳು ಜರುಗಿದವು. ನಂತರ ಭಕ್ತರು ತಂಡೋಪ ತಂಡವಾಗಿ ಆಗಮಿಸಿ ಶ್ರೀದೇವಿ ದರ್ಶನ ಪಡೆದರು. ರಾತ್ರಿ 8.30 ಗಂಟೆಗೆ ವಿಶೇಷ ಪೂಜೆ , ಅಭಿಷೇಕ ಹಾಗೂ ಮಹಾಮಂಗಳಾರತಿ ಜರುಗಿದವು.

ಸೊಗಲ:

ಶ್ರೀಕ್ಷೇತ್ರ ಸೊಗಲ ದೇವಸ್ಥಾನದಲ್ಲಿಚಂದ್ರಗ್ರಹಣ ಹಿನ್ನೆಲೆಯಲ್ಲಿಮಧ್ಯಾಹ್ನ 2ರಿಂದ ಸಂಜೆ 7ರವರೆಗೆ ದೇವರ ದರ್ಶನ ಬಂದ್ ಮಾಡಲಾಗಿತ್ತು. ಗ್ರಹಣದ ನಂತರ ದೇವಸ್ಥಾನ ಶುಚಿಗೊಳಿಸಿ, ಶ್ರೀ ಸೋಮೇಶ್ವರ ಹಾಗೂ ಶ್ರೀ ಶಿವ-ಪಾರ್ವತಿಯವರಿಗೆ ಶಾಸ್ತೊ್ರೕಕ್ತ ಪೂಜೆಗಳು ಜರುಗಿದವು.