ಮದಕರಿ ನಾಯಕ ಸಮಾಧಿ ಅಭಿವೃದ್ಧಿಗೆ 3 ಕೋಟಿ
ದಾವಣಗೆರೆ: ತಾಲೂಕಿನ ಮಾಯಕೊಂಡ ಗ್ರಾಮದ ಇತಿಹಾಸ ಪ್ರಸಿದ್ಧ ಹಿರೇ ಮದಕರಿ ನಾಯಕರ ಸಮಾಧಿ ಸ್ಥಳದ ಸಮಗ್ರ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯಿಂದ 3 ಕೋಟಿ ರೂ., ಅನುದಾನ ಬಿಡುಗಡೆಯಾಗಿದ್ದು, ಇದಕ್ಕೆ ಕಾರಣರಾದ ಸಚಿವರಿಗೆ ಮತ್ತು ಜನಪ್ರತಿನಿಧಿಗಳಿಗೆ ದಾವಣಗೆರೆ ಜಿಲ್ಲಾವಾಲ್ಮೀಕಿ ನಾಯಕ ಸಮಾಜ ಕೃತಜ್ಞತೆ ಸಲ್ಲಿಸಿದೆ.
ಅನುದಾನ ಬಿಡುಗಡೆಗೆ ಶ್ರಮಿಸಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳೆ, ಜಿಲ್ಲಾಉಸ್ತುವಾರಿ ಸಚಿವ ಎಸ್ .ಎಸ್ .ಮಲ್ಲಿಕಾರ್ಜುನ್ , ಮಾಯಕೊಂಡ ಶಾಸಕ ಕೆ.ಎಸ್ . ಬಸವಂತಪ್ಪ ಹಾಗೂ ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಅವರಿಗೆ ಜಿಲ್ಲಾವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ. ವೀರಣ್ಣ ಅಭಿನಂದನೆ ಸಲ್ಲಿಸಿದ್ದಾರೆ.
ಮದಕರಿ ನಾಯಕರ ಸಮಾಧಿ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿಸಂಬಂಧಪಟ್ಟ ಸಚಿವರೊಂದಿಗೆ ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್ . ಬಸವಂತಪ್ಪ ಅವರು, ನಿರಂತರ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಿದ್ದರು. ಅಲ್ಲದೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳೆ ಅವರನ್ನು ಹಿರೇಮದಕರಿ ನಾಯಕರ ಸಮಾಧಿ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡುವಂತೆ ಮಾಡುವಲ್ಲಿಯಶಸ್ವಿಯಾಗಿದ್ದರು. ಈ ನಿರಂತರ ಪರಿಶ್ರಮದ ಫಲವಾಗಿ ಸಮಾಧಿ ಸ್ಥಳದ ಅಭಿವೃದ್ಧಿಗೆ ಈಗ ದೊಡ್ಡ ಮೊತ್ತದ ಅನುದಾನ ಲಭಿಸಲಿದೆ. ಸರಕಾರದ ಈ ಜನಪರ ನಿರ್ಧಾರಕ್ಕೆ ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ.ವೀರಣ್ಣ, ಉಪಾಧ್ಯಕ್ಷ ಎನ್ .ಎಂ. ಆಂಜನೇಯ ಗುರೂಜಿ, ಕಾರ್ಯದರ್ಶಿ ಶ್ಯಾಗಲೆ ಕೆ. ಆರ್ . ಮಂಜುನಾಥ್ ಮತ್ತಿತರರು ಸಂತಸ ವ್ಯಕ್ತಪಡಿಸಿದ್ದಾರೆ.
ಫೋಟೋ: ಬಿ.ವೀರಣ್ಣ

