ಶಾಲೆಗಳಲ್ಲಿಹಿಜಾಬ್ ಗೆ ಅವಕಾಶ ಬೇಡ

Contributed bysamnewsmdgr@gmail.com|Vijaya Karnataka

ಮೂಡಿಗೆರೆಯಲ್ಲಿ ಹಿಂದೂ ಜನಜಾಗೃತಿ ವೇದಿಕೆಯು ಸರ್ಕಾರಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದೆ. ಕೇಸರಿ ಶಾಲು ನಿರ್ಬಂಧಿಸುವ ನಿರ್ಧಾರವನ್ನು ಹಿಂಪಡೆಯಬೇಕು ಎಂದೂ ಆಗ್ರಹಿಸಿದೆ. ಅಕ್ರಮ ಗೋ ಸಾಗಾಣೆಗೆ ಕಡಿವಾಣ ಹಾಕಬೇಕು ಎಂದು ಮನವಿ ಸಲ್ಲಿಸಿದೆ. ಈ ನಿರ್ಧಾರ ಸಮಾನತೆ ಹಾಗೂ ಧರ್ಮ ನಿರಪೇಕ್ಷತೆಗೆ ವಿರುದ್ಧವಾಗಿದೆ ಎಂದು ವೇದಿಕೆ ಹೇಳಿದೆ. ಶಿಕ್ಷಣದ ಮಹತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದೆ.

no allowance for hijab in schools hindu janajagruti vedikes demand

ಶಾಲೆಗಳಲ್ಲಿಹಿಜಾಬ್ ಗೆ ಅವಕಾಶ ಬೇಡ

ಹಿಂದೂ ಜನಜಾಗೃತಿ ವೇದಿಕೆ ಒತ್ತಾಯ

ವಿಕ ಸುದ್ದಿಲೋಕ ಮೂಡಿಗೆರೆ

ಸರಕಾರಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿಹಿಜಾಬ್ ಗೆ ಅವಕಾಶ ಹಾಗೂ ಕೇಸರಿ ಶಾಲು ನಿರ್ಬಂಧಿಸುವ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು, ಅಕ್ರಮ ಗೋ ಸಾಗಣೆಗೆ ಕಡಿವಾಣ ಹಾಕಬೇಕು ಎಂದು ಹಿಂದೂ ಜನಜಾಗೃತಿ ವೇದಿಕೆ ಮುಖಂಡರು ಸೋಮವಾರ ತಹಸೀಲ್ದಾರ್ ಎಸ್ .ಅಶ್ವಿನಿ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯ ಸರಕಾರ ಶಾಲೆ ಹಾಗೂ ಕಾಲೇಜುಗಳಲ್ಲಿಹಿಜಾಬ್ ಧರಿಸಲು ಅವಕಾಶ ನೀಡಿ, ಕೇಸರಿ ಶಾಲು ಧರಿಸುವುದಕ್ಕೆ ನಿರ್ಬಂಧ ವಿಧಿಸಿರುವುದು ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿಗಂಭೀರ ಚರ್ಚೆಗೆ ಕಾರಣವಾಗಿದೆ. ಈ ನಿರ್ಧಾರ ಸಮಾನತೆ, ಧರ್ಮ ನಿರಪೇಕ್ಷತೆ ಹಾಗೂ ಸಮವಸ್ತ್ರ ನೀತಿಗೆ ವಿರುದ್ಧವಾಗಿದೆ. 2022ರಲ್ಲಿಉಡುಪಿಯಲ್ಲಿಆರಂಭವಾದ ಹಿಜಾಬ್ ವಿವಾದವು ರಾಜ್ಯಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಿಸಿತ್ತು. ಈ ಪ್ರಕರಣದ ಕುರಿತು ನ್ಯಾಯಾಲಯ ಶಾಲೆ-ಕಾಲೇಜುಗಳಲ್ಲಿನಿಗದಿತ ಸಮವಸ್ತ್ರವನ್ನು ಪಾಲಿಸಬೇಕೆಂದು ಸೂಚಿಸಿತ್ತು. ಹಿಜಾಬ್ ಪ್ರಕರಣ ಸುಪ್ರಿಂಕೋರ್ಟ್ ನಲ್ಲಿದೆ. ಆದರೂ ಸರಕಾರ ಹಿಜಾಬ್ ಗೆ ಅವಕಾಶ ನೀಡಿ, ಕಾನೂನು ಉಲ್ಲಂಘಿಘಿಸಿದೆ.

ಹಿಜಾಬ್ ಗೆ ಅವಕಾಶ ನೀಡಿದರೆ ಇತರೆ ಸಮುದಾಯದ ವಿದ್ಯಾರ್ಥಿಗಳು ಸಹ ತಮ್ಮ ಧಾರ್ಮಿಕ ಚಿಹ್ನೆಗಳನ್ನು ಪ್ರದರ್ಶಿಸುವ ಸಾಧ್ಯತೆ ಇರುತ್ತದೆ. ಇದರಿಂದ ಶಿಕ್ಷಣದ ಮಹತ್ವ ಕಳೆದುಕೊಳ್ಳುತ್ತದೆ. ಹಾಗಾಗಿ ಹಿಜಾಬ್ ಗೆ ಅವಕಾಶ ನೀಡಬಾರದು. ಅಲ್ಲದೇ ಗೋ ಕಳವು, ಗೋಮಾಂಸ ಮಾರಾಟ ಹೆಚ್ಚುತ್ತಿದೆ. ಇದಕ್ಕೂ ಕೂಡ ಕಡಿವಾಣ ಹಾಕಬೇಕು ಎಂದು ಮನವಿ ಮೂಲಕ ಪದಾಧಿಕಾರಿಗಳು ಒತ್ತಾಯಿಸಿದರು.

ಸಂಜಯ್ ಕೊಟ್ಟಿಗೆಹಾರ, ಬಸವರಾಜ್ , ರಘು ಮೂಡಿಗೆರೆ, ಶರತ್ ಮಾಕೋನಹಳ್ಳಿ, ಧರ್ಮರಾಜ್ ಬಿನ್ನಡಿ ಹಾಗೂ ಇತರರಿದ್ದರು.

25ಮೂಡಿಗೆರೆ2ಎ

ಮೂಡಿಗೆರೆ ತಹಸೀಲ್ದಾರ್ ಎಸ್ .ಅಶ್ವಿನಿ ಅವರಿಗೆ ಹಿಂದೂ ಜನಜಾಗೃತಿ ವೇದಿಕೆ ಮುಖಂಡರು ಮನವಿ ಸಲ್ಲಿಸಿದರು.