ದನಗಳ ಮೂಳೆ ಸಂಗ್ರಹ: ದೂರು ದಾಖಲು
ವಿಕ ಸುದ್ದಿಲೋಕ ಮುಳಬಾಗಲು
ದನಗಳ ಮೂಳೆಗಳನ್ನು ಅಕ್ರಮವಾಗಿ ಶೇಖರಿಸಿದ್ದ ಇಬ್ಬರ ವಿರುದ್ಧ ಮುಳಬಾಗಲು ನಗರದ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ನಗರದ ಬೊಮ್ಮರಸನ ಕೆರೆ ಹತ್ತಿರ ದನಗಳ ಮೂಳೆಗಳನ್ನು ಶೇಖರಣೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಕೆರೆಯ ಬಳಿ ದುರ್ನಾತ ಬಂದಿರುವ ಕಾರಣ, ಸಂದೀಪ್ ಎಂಬುವರು ದೂರು ನೀಡಿದ್ದು, ಈ ಬಗ್ಗೆ ಅಯೂಬ್ , ಸುಹೇಲ್ ಎಂಬುವರ ಮೇಲೆ ಮುಳಬಾಗಲು ನಗರದ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

