ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ

Contributed bybpdevarajmbr@gmail.com|Vijaya Karnataka

ಮಲೇಬೆನ್ನೂರಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಭಾನುವಾರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕ ರಾಜಯೋಗಿನಿ ಬ್ರಹ್ಮಾಕುಮಾರಿ ಪದ್ಮಕ್ಕನವರು ಮಾತನಾಡಿ, ಕಲಿಯುಗದಲ್ಲಿ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ ಎಂದರು. ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

talent awards distinguished children honored

ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ

ವಿಕ ಸುದ್ದಿಲೋಕ ಮಲೇಬೆನ್ನೂರು

ಕಲಿಯುಗದಲ್ಲಿಬಹಳಷ್ಟು ಜನರು ಸ್ಥಾನ, ಆಸ್ತಿ, ಹಣ ಸಂಪಾದನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು, ನೆಮ್ಮದಿ ಕಳೆದುಕೊಂಡಿದ್ದಾರೆ. ಅತಿಯಾದ ಶ್ರೀಮಂತಿಕೆ ಹಾಗೂ ಅತಿಯಾದ ಹಣ ಸಂಪಾದನೆಯಿಂದ ಅಪಾಯವಾಗುವ ಸಾಧ್ಯತೆಯಿರುತ್ತದೆ ಎಂದು ಬೀರೂರಿನ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕ ರಾಜಯೋಗಿನಿ ಬ್ರಹ್ಮಾಕುಮಾರಿ ಪದ್ಮಕ್ಕನವರು ಹೇಳಿದರು.

ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿಮಾತನಾಡಿದರು.

ಆತ್ಮ ಹಾಗೂ ಪರಮಾತ್ಮನ ಕುರಿತು ಅಧ್ಯಯನ ಮಾಡುವುದನ್ನು ಆಧ್ಯಾತ್ಮ ಎನ್ನಲಾಗುತ್ತದೆ. ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿಆತ್ಮ ಹಾಗೂ ಪರಮಾತ್ಮನ ಕುರಿತು ನಿರಂತರ ಅಧ್ಯಯನ ನಡೆಯುತ್ತದೆ. ನೀವು ಹೋಗುವ ಶಾಲೆ, ಕಾಲೇಜುಗಳಿಗೆ ರಜೆ ನೀಡುತ್ತಾರೆ. ಆದರೆ ಈಶ್ವರೀ ವಿಶ್ವ ವಿದ್ಯಾಲಯದಲ್ಲಿಯಾವುದೇ ರಜೆ ನೀಡದೆ, ನಿರಂತರವಾಗಿ ಸ್ವಯಂ ಪರಮಾತ್ಮನೇ ನೀಡಿದ ಶಿಕ್ಷಣವನ್ನು ಹೇಳಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿಕುಮಾರಿ ಗೌರಿಕಾ ನೃತ್ಯ ಪ್ರದರ್ಶನ ನೀಡಿದರು. ಕಾರ್ಯಕ್ರಮ ಅಂತ್ಯದಲ್ಲಿಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಈಶ್ವರೀಯ ಸನ್ಮಾನ ನೀಡಿ ಗೌರವಿಸಲಾಯಿತು.

ಹಿರೇಕೆರೂರು ಈಶ್ವರೀಯ ವಿಶ್ವ ವಿದ್ಯಾಲಯ ಸಂಚಾಲಕಿ ರಾಜಯೋಗಿನ ಬ್ರ.ಕು.ಸೌಭಾಗ್ಯ ಅಕ್ಕನವರು ಬ್ರಹ್ಮಕುಮಾರೀಸ್ ಸಂಸ್ಥೆಯ ಪರಿಚಯ ನೀಡಿದರು. ಮಲೇಬೆನ್ನೂರು ಈಶ್ವರೀಯ ಸಂಸ್ಥೆಯ ಸಂಚಾಲಕಿ ರಾಜಯೋಗಿನಿ ಬ್ರ.ಕು.ಶಾಂತಕ್ಕ, ಬಿಕೆ ಪಂಚಣ್ಣ, ಬಿಕೆ ವೀರಭದ್ರಣ್ಣ, ಬಿಕೆ ರುದ್ರಣ್ಣ, ಪ್ರಾಂಶುಪಾಲ ಹನುಮಗೌಡ್ರು ಇದ್ದರು.

---

24ಎಂಇಆರ್ 1ಎ

ಮಲೇಬೆನ್ನೂರಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಈಶ್ವರೀಯ ಸನ್ಮಾನ ನೀಡಿ, ಗೌರವಿಸಲಾಯಿತು.

ಚಿತ್ರ ಫೈಲ್ -24ಎಂಇಆರ್ 1ಬಿ

ಮಲೇಬೆನ್ನೂರಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಈಶ್ವರೀಯ ಸನ್ಮಾನ ನೀಡಿ, ಗೌರವಿಸಲಾಯಿತು.