ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ. ಸಿ. ಟ್ರಸ್ಟ್ ವಿಟ್ಲದ ಕಲ್ಲಡ್ಕ ವಲಯದ ವೀರಕಂಭ ಕೂಟದ ತ್ರೈಮಾಸಿಕ ಸಭೆ ವೀರಕಂಭ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿಜರುಗಿತು.
ವೀರಕಂಭ ಒಕ್ಕೂಟ ಅಧ್ಯಕ್ಷರಾದ ಶಾಂಭವಿ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕ ಶುಕರಾಜ್ ಯೋಜನೆಯ ಗುಂಪುಗಳ ಕಾರ್ಯ, ಜವಾಬ್ದಾರಿ, ಗುಂಪುಗಳಿಗೆ ನೀಡುವ ಸಾಲ ಸೌಲಭ್ಯಗಳು, ಆರೋಗ್ಯ ವಿಮೆ, ಹಾಗೂ ಪ್ರಸಕ್ತ ಸಾಲಿನಲ್ಲಿವೀರಕಂಬ ಒಕ್ಕೂಟ ವ್ಯಾಪ್ತಿಯಲ್ಲಿಯೋಜನೆಯಿಂದ ಸಿಕ್ಕ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸದಸ್ಯ ಚಿನ್ನಾ ಮೈರಾ, ವೀರಕಂಬ ಒಕ್ಕೂಟ ಕಾರ್ಯದರ್ಶಿ ಆನಂದ ಮಜಿ, ಉಪ ಸಮಿತಿಯ ಸದಸ್ಯ ವೇದಾವತಿ, ಕೆಲಿಂಜ ಒಕ್ಕೂಟ ಸೇವಾ ಪ್ರತಿನಿಧಿ ರೇವತಿ, ಉಪಸ್ಥಿತರಿದ್ದರು ಒಕ್ಕೂಟ ಸಭೆಯ ಜವಾಬ್ದಾರಿ ಗುಂಪಿನ ಸದಸ್ಯ ಯೋಗೀಶ್ ಮಜಿ ಸ್ವಾಗತಿಸಿ, ಸುನಿಲ್ ನಾಯ್ಕ ವರದಿ ವಾಚಿಸಿ, ಒಕ್ಕೂಟ ಸೇವಾ ಪ್ರತಿನಿಧಿ ವಿಜಯ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ: 25ಬಿಎಚ್ ವೀರಕಂಭ
ವೀರಕಂಭ ಮಜಿ ಶಾಲೆಯಲ್ಲಿತ್ರೆತ್ರೖಮಾಸಿಕ ಸಭೆ ನಡೆಯಿತು.

